ಭಾವಪೂರ್ಣ, ಮಾಧುರ್ಯಭರಿತ ಧ್ವನಿಯ ಮೂಲಕ ಭಾರತೀಯ ಚಿತ್ರಸಂಗೀತದಲ್ಲಿ ‘ಮೆಲೊಡಿ ಸಿಂಗಿಂಗ್’ ಟ್ರೆಂಡ್ ಸೃಷ್ಟಿಸಿದ ಮಹಮ್ಮದ್ ರಫಿಯವರ 96ನೇ ಜನ್ಮದಿನ ಇಂದು. ಕವ್ವಾಲಿ, ಮಾಧುರ್ಯ, ಭಕ್ತಿ ಮತ್ತು ಸಂಗೀತದ ಇತರ ಪ್ರಕಾರಗಳಲ್ಲಿ ಹಾಡಿ ಕೋಟ್ಯಂತರ ಜನರ ಮನಸ್ಸನ್ನು ಸೂರೆಗೊಂಡ ರಫಿಯವರ ಬಗೆಗಿನ ಆಸಕ್ತಿಕರ ಸಂಗತಿಗಳು ಇಲ್ಲಿವೆ.
• ರಫಿ ಅವರನ್ನು ಕುಟುಂಬದವರು ಅಕ್ಕರೆಯಿಂದ ‘ಫೀಕೊ’ ಎಂದು ಕರೆಯುತ್ತಿದ್ದರು.
• 1941ರಲ್ಲಿ ಲಾಹೋರ್ ಆಕಾಶವಾಣಿಯು ರಫಿಯವರನ್ನು ಹಾಡಲು ಆಹ್ವಾನಿಸಿತು.
• 1944ರಲ್ಲಿ ಬಿಡುಗಡೆಯಾದ ಪಂಜಾಬಿ ಚಿತ್ರ ‘ಗುಲ್ ಬಲೂಚ್’ ನಲ್ಲಿ ಜೀನತ್ ಬೇಗಂ ಅವರೊಂದಿಗೆ ‘ಸೋನಿಯೇ ನೀ, ಹೀರಿಯೇ ನೀ’ ಯುಗಳ ಗೀತೆ ಹಾಡುವುದರ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 1945ರಲ್ಲಿ ‘ಗಾಂವ್ ಕೀ ಗೋರಿ’ ಚಿತ್ರಕ್ಕಾಗಿ ‘ಅಜಿ ದಿಲ್ ಹೋ ಕಾಬು ಮೇ ಟು ದಿಲ್ದಾರ್ ಕೀ ಐಸಿ ತೈಸಿ’ ಹಾಡಿನ ಮೂಲಕ ಹಿಂದಿ ಚಿತ್ರರಂಗಕ್ಕೆ ಪ್ರವೇಶ ಪಡೆದರು.
• 1944ರಲ್ಲಿ, ರಫಿ ಮುಂಬೈಗೆ ಬಂದಾಗ ಭೇಂಡಿ ಬಜಾರ್ ಗಲ್ಲಿಯ 10/10 ರೂಮಿನಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು.
• 1945ರಲ್ಲಿ ‘ಲೈಲಾ ಮಜ್ನು’ ಚಿತ್ರದ ‘ತೇರಾ ಜಲ್ವಾ ಜಿಸ್ ನೆ ದೇಖಾ’ ಹಾಡು ಪರದೆಯ ಮೇಲೆ ಕಾಣಿಸಿಕೊಂಡಿತು.
• 1948ರಲ್ಲಿ ಗಾಂಧೀಜಿಯವರ ಹತ್ಯೆಯ ನಂತರ, ಹಸನ್ಲಾಲ್ ಭಗತ್ರಾಮ್- ರಾಜೇಂದ್ರ ಕಿಶನ್ ಮತ್ತು ರಫಿ ತಂಡವು ‘ಸುನೋ ಸುನೋ ಎ ದುನಿಯಾವಾಲೋ, ಬಾಪೂ ಕೀ ಅಮರ್ ಕಹಾನಿ’ ಹಾಡನ್ನು ರಾತ್ರಿಯಿಡೀ ನಿರ್ಮಿಸಿತು. ನಂತರ ಜವಾಹರಲಾಲ್ ನೆಹರೂ ಅವರ ಆಹ್ವಾನದ ಮೇರೆಗೆ ಅವರ ಮನೆಯಲ್ಲಿ ಈ ಹಾಡನ್ನು ಪ್ರಸ್ತುತಪಡಿಸಿದರು.
• ರಫಿಯ ಕೊನೆಯ ಹಾಡು ‘ಶಾಮ್ ಫಿರ್ ಕ್ಯೂ ಉದಾಸ್ ಹೈ ದೋಸ್ತ್, ತೂ ಕಹೀ ಆಸ್ ಪಾಸ್ ಹೈ ದೋಸ್ತ್’ ಅವರು ತೀರಿಹೋಗುವ ಕೆಲವೇ ಗಂಟೆಗಳ ಮೊದಲು ಚಿತ್ರೀಕರಿಸಲಾಗಿದೆ.
Published On - 10:12 pm, Thu, 24 December 20