ಕಾಮಿಡಿಯನ್ ಭಾರತಿ ಸಿಂಗ್ ಮನೆ ಮೇಲೆ NCB ದಾಳಿ

|

Updated on: Nov 21, 2020 | 1:19 PM

ಮುಂಬೈ: ಮಾದಕವಸ್ತುಗಳ ದಾಸ್ತಾನು ಮತ್ತು ಬಳಕೆಯ ಅನುಮಾನದ ಮೇಲೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಸಂಸ್ಥೆ (NCB -Narcotics Control Bureau) ಕಾಮಿಡಿಯನ್ ಭಾರತಿ ಸಿಂಗ್ ಅವರ ಮೇಲೆ ಶನಿವಾರ ಮುಂಜಾನೆ ದಾಳಿ ನಡೆಸಿದೆ. ವಿಚಾರಣೆ ಸಂದರ್ಭ ಭಾರತಿ ಮತ್ತು ಹರ್ಷ್ ಎಂಬ ಡ್ರಗ್ಸ್ ಪೆಡ್ಲರ್ಗಳು ನೀಡಿದ ಮಾಹಿತಿ ಅಧರಿಸಿ ದಾಳಿ ನಡೆದಿದೆ ಎಂದು ಎಬಿಪಿ ಲೈವ್ ಜಾಲತಾಣ ವರದಿ ಮಾಡಿದೆ. ‘ದಿ ಕಪಿಲ್ ಶರ್ಮಾ ಶೋ’ ಮೂಲಕ ಜನಪ್ರಿಯರಾದವರು ಭಾರತಿ. ‘ಝಲಕ್ ದಿಖ್ಲಾ ಝಾ‘, ‘ನಾಚ್ […]

ಕಾಮಿಡಿಯನ್ ಭಾರತಿ ಸಿಂಗ್ ಮನೆ ಮೇಲೆ NCB ದಾಳಿ
Follow us on

ಮುಂಬೈ: ಮಾದಕವಸ್ತುಗಳ ದಾಸ್ತಾನು ಮತ್ತು ಬಳಕೆಯ ಅನುಮಾನದ ಮೇಲೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಸಂಸ್ಥೆ (NCB -Narcotics Control Bureau) ಕಾಮಿಡಿಯನ್ ಭಾರತಿ ಸಿಂಗ್ ಅವರ ಮೇಲೆ ಶನಿವಾರ ಮುಂಜಾನೆ ದಾಳಿ ನಡೆಸಿದೆ.

ವಿಚಾರಣೆ ಸಂದರ್ಭ ಭಾರತಿ ಮತ್ತು ಹರ್ಷ್ ಎಂಬ ಡ್ರಗ್ಸ್ ಪೆಡ್ಲರ್ಗಳು ನೀಡಿದ ಮಾಹಿತಿ ಅಧರಿಸಿ ದಾಳಿ ನಡೆದಿದೆ ಎಂದು ಎಬಿಪಿ ಲೈವ್ ಜಾಲತಾಣ ವರದಿ ಮಾಡಿದೆ.

‘ದಿ ಕಪಿಲ್ ಶರ್ಮಾ ಶೋ’ ಮೂಲಕ ಜನಪ್ರಿಯರಾದವರು ಭಾರತಿ. ‘ಝಲಕ್ ದಿಖ್ಲಾ ಝಾ‘, ‘ನಾಚ್ ಬಲಿಯೇ’ ಸೇರಿದಂತೆ ಹಲವು ರಿಯಾಲಿಟಿ ಶೋಗಳ ಮೂಲಕ ಮನೆಮಾತಾಗಿದ್ದರು.

ಡಿಸೆಂಬರ್ 2017ರಲ್ಲಿ ಹರ್ಷ್ ಲಿಂಬ್ಚಿಯಾ ಅವರನ್ನು ಭಾರತಿ ಮದುವೆಯಾದರು. ಈ ಜೋಡಿ ಪ್ರಸ್ತುತ ಸೋನಿ ಟಿವಿಯಲ್ಲಿ ‘ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್’ ನಡೆಸಿಕೊಡುತ್ತಿದೆ.

Published On - 1:18 pm, Sat, 21 November 20