ಪಾಕಿಸ್ತಾನದ ಕರಾಚಿ ಭಾರತಕ್ಕೆ ಸೇರಬೇಕು ಎಂದ ದೇವೇಂದ್ರ ಫಡ್ನವೀಸ್!
ಮುಂಬೈ:ಅತ್ತ ಪಾಕಿಸ್ತಾನವು ಕಾಶ್ಮೀರವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಲು ಹುನ್ನಾರ ಮಾಡುತ್ತಿದ್ದರೆ ಇತ್ತ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರಾಚಿಯನ್ನೂ ಭಾರತಕ್ಕೆ ಸೇರಿಸುವ ಮಾತನಾಡಿದ್ದಾರೆ. ನಾವು ಅಖಂಡ ಭಾರತ ನಿರ್ಮಾಣದಲ್ಲಿ ನಂಬಿಕೆ ಇಟ್ಟಿದ್ದೇವೆ. ಮುಂದೊಂದು ದಿನ ಕರಾಚಿಯೂ ಭಾರತದ ಒಂದು ಭಾಗವಾಗುತ್ತದೆ ಎಂದು ಫಡ್ನವೀಸ್ ಹೇಳಿದ್ದಾರೆ. ಇತ್ತೀಚೆಗೆ ಶಿವಸೇನೆ ಕಾರ್ಯಕರ್ತರೊಬ್ಬರು ಸ್ವೀಟ್ ಅಂಗಡಿಯೊಂದರ ಮಾಲೀಕನ ಬಳಿ, ನಿಮ್ಮ ಶಾಪ್ಗೆ ಇಟ್ಟ ಕರಾಚಿ ಸ್ವೀಟ್ಸ್ ಎಂಬ ಹೆಸರಿನಲ್ಲಿ ಕರಾಚಿ ಎಂಬ ಶಬ್ದವನ್ನು ತೆಗೆಯಿರಿ ಎಂದು ಹೇಳಿದ್ದರು. ಅದರ ಬಗ್ಗೆ […]
ಮುಂಬೈ:ಅತ್ತ ಪಾಕಿಸ್ತಾನವು ಕಾಶ್ಮೀರವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಲು ಹುನ್ನಾರ ಮಾಡುತ್ತಿದ್ದರೆ ಇತ್ತ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರಾಚಿಯನ್ನೂ ಭಾರತಕ್ಕೆ ಸೇರಿಸುವ ಮಾತನಾಡಿದ್ದಾರೆ.
ನಾವು ಅಖಂಡ ಭಾರತ ನಿರ್ಮಾಣದಲ್ಲಿ ನಂಬಿಕೆ ಇಟ್ಟಿದ್ದೇವೆ. ಮುಂದೊಂದು ದಿನ ಕರಾಚಿಯೂ ಭಾರತದ ಒಂದು ಭಾಗವಾಗುತ್ತದೆ ಎಂದು ಫಡ್ನವೀಸ್ ಹೇಳಿದ್ದಾರೆ.
ಇತ್ತೀಚೆಗೆ ಶಿವಸೇನೆ ಕಾರ್ಯಕರ್ತರೊಬ್ಬರು ಸ್ವೀಟ್ ಅಂಗಡಿಯೊಂದರ ಮಾಲೀಕನ ಬಳಿ, ನಿಮ್ಮ ಶಾಪ್ಗೆ ಇಟ್ಟ ಕರಾಚಿ ಸ್ವೀಟ್ಸ್ ಎಂಬ ಹೆಸರಿನಲ್ಲಿ ಕರಾಚಿ ಎಂಬ ಶಬ್ದವನ್ನು ತೆಗೆಯಿರಿ ಎಂದು ಹೇಳಿದ್ದರು. ಅದರ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವೇಂದ್ರ ಫಡ್ನವೀಸ್ ಈ ಹೇಳಿಕೆ ನೀಡಿದ್ದಾರೆ.
ಕರಾಚಿ ಸ್ವೀಟ್ಸ್ ಆ್ಯಂಡ್ ಕರಾಚಿ ಬೇಕರಿ ಎಂಬ ಅಂಗಡಿ ಮುಂಬೈನಲ್ಲಿ ಕಳೆದ 60 ವರ್ಷಗಳಿಂದಲೂ ಇದೆ. ಆದರೆ ಕೆಲವು ದಿನಗಳ ಹಿಂದೆ ಶಿವಸೇನೆ ಕಾರ್ಯಕರ್ತ ನಿತಿನ್ ನಂದಗಾಂವ್ಕರ್ ಎಂಬುವರು ಹೆಸರು ಬದಲಿಸುವಂತೆ ಹೇಳಿದ್ದರು. ಆದರೆ ಶಿವಸೇನೆ, ನಿತಿನ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಅದು ನಿತಿನ್ ಅವರ ವೈಯಕ್ತಿಕ ಅಭಿಪ್ರಾಯ. ನಮಗೂ-ಅದಕ್ಕೂ ಸಂಬಂಧವಿಲ್ಲ ಎಂದಿತ್ತು.