ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರದಿಂದ ಹೊಸ ಮಾರ್ಗಸೂಚಿ

|

Updated on: Jul 05, 2020 | 7:15 AM

ಬೆಂಗಳೂರು: ಹಾದಿ ಬೀದಿಯಲ್ಲೇ ಪರದಾಟ. ಆಸ್ಪತ್ರಗಳಲ್ಲಿ ಗೋಳಾಟ. ಕೊರೊನಾ ವಕ್ಕರಿಸಿಕೊಂಡು ಆಸ್ಪತ್ರೆಯತ್ತ ಹೆಜ್ಜೆ ಊರಿದ್ರೆ ಟ್ರೀಟ್ಮೆಂಟ್ ಸಿಗ್ತಿಲ್ಲ. ಹೆಮ್ಮಾರಿ ದೇಹ ಸೇರಿದ್ಯೋ ಇಲ್ವೋ ಅನ್ನೋದು ತಿಳಿಯೋಕೆ ಲ್ಯಾಬ್​ ವರದಿ ತಕ್ಷಣವೇ ಕೈ ಸೇರ್ತಿಲ್ಲ. ಬಡ ರೋಗಿಗಳು ಕಣ್ಣೀರಿಡ್ತಾ ಕಂಗಾಲಾಗಿದ್ರು. ದಿಕ್ಕೇ ತೋಚದಂತಾಗ್ತಿದ್ರು. ಸರ್ಕಾರದ ಎಡವಟ್ಟು. ಆಸ್ಪತ್ರೆಗಳ ನಿರ್ಲಕ್ಷ್ಯದಾಟಕ್ಕೆ ಬಡವರು ಬೆಂದು ಹೋಗಿದ್ರು. ಏನ್ಮಾಡ್ಬೇಕು. ಎಲ್ಲಿ ಹೋಗ್ಬೇಕು ಅಂತ ಬಡವರು ತಲೆ ಮೇಲೆ ಕೈ ಹೊತ್ತು ಕೂತಿದ್ದ ಟೈಮ್​​ನಲ್ಲಿ ಅವರ ಬೆನ್ನಿಗೆ ನಿಂತಿದ್ದೇ ಟಿವಿ9. ಟಿವಿ9 ನಿರಂತರ ವರದಿಯಿಂದ […]

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರದಿಂದ ಹೊಸ ಮಾರ್ಗಸೂಚಿ
ಸಾಂದರ್ಭೀಕ ಚಿತ್ರ
Follow us on

ಬೆಂಗಳೂರು: ಹಾದಿ ಬೀದಿಯಲ್ಲೇ ಪರದಾಟ. ಆಸ್ಪತ್ರಗಳಲ್ಲಿ ಗೋಳಾಟ. ಕೊರೊನಾ ವಕ್ಕರಿಸಿಕೊಂಡು ಆಸ್ಪತ್ರೆಯತ್ತ ಹೆಜ್ಜೆ ಊರಿದ್ರೆ ಟ್ರೀಟ್ಮೆಂಟ್ ಸಿಗ್ತಿಲ್ಲ. ಹೆಮ್ಮಾರಿ ದೇಹ ಸೇರಿದ್ಯೋ ಇಲ್ವೋ ಅನ್ನೋದು ತಿಳಿಯೋಕೆ ಲ್ಯಾಬ್​ ವರದಿ ತಕ್ಷಣವೇ ಕೈ ಸೇರ್ತಿಲ್ಲ. ಬಡ ರೋಗಿಗಳು ಕಣ್ಣೀರಿಡ್ತಾ ಕಂಗಾಲಾಗಿದ್ರು. ದಿಕ್ಕೇ ತೋಚದಂತಾಗ್ತಿದ್ರು. ಸರ್ಕಾರದ ಎಡವಟ್ಟು. ಆಸ್ಪತ್ರೆಗಳ ನಿರ್ಲಕ್ಷ್ಯದಾಟಕ್ಕೆ ಬಡವರು ಬೆಂದು ಹೋಗಿದ್ರು. ಏನ್ಮಾಡ್ಬೇಕು. ಎಲ್ಲಿ ಹೋಗ್ಬೇಕು ಅಂತ ಬಡವರು ತಲೆ ಮೇಲೆ ಕೈ ಹೊತ್ತು ಕೂತಿದ್ದ ಟೈಮ್​​ನಲ್ಲಿ ಅವರ ಬೆನ್ನಿಗೆ ನಿಂತಿದ್ದೇ ಟಿವಿ9.

ಟಿವಿ9 ನಿರಂತರ ವರದಿಯಿಂದ ಕೊನೆಗೂ ಎಚ್ಚೆತ್ತ ರಾಜ್ಯ ಸರ್ಕಾರ!
ಯೆಸ್.. ಕರುನಾಡಲ್ಲಿ ಕೊರೊನಾ ಸಿಡಿಲು ಅಪ್ಪಳಿಸ್ತಿದ್ರೆ ಅದೆಷ್ಟೋ ಮಂದಿ ಕೊರೊನಾ ಕೂಪಕ್ಕೆ ಬಿದ್ದು ಕಣ್ಣೀರಿಡ್ತಿದ್ರು. ಬಡ ರೋಗಿಗಳಂತೂ ಚಿಕಿತ್ಸೆ ಸಿಗದೆ ಬಸವಳಿದು ಹೋಗಿದ್ರು. ಹೆಮ್ಮಾರಿ ಕೊರೊನಾ ವಕ್ಕರಿಸಿದ್ರೂ ಕೆಲ ದಿನಗಳಾದ್ರೂ ರಿಪೋರ್ಟ್​ ಸಿಗದೆ ಪರದಾಡ್ತಿದ್ರು. ತಮಗೆ ಪಾಸಿಟಿವ್, ನೆಗೆಟಿವ್ ಬಂದಿದ್ಯೋ ಅನ್ನೋದನ್ನೇ ಅರಿಯದಾಗದೆ ಅದುರಿ ಹೋಗ್ತಿದ್ರು.

ಅಧಿಕಾರಿಗಳ ಮೂಲಕವೇ ಹಾಗೂ ಐಸಿಎಂಆರ್​ ಪೋರ್ಟಲ್​ನಲ್ಲಿ ಅಪ್ಲೋಡ್​ ಮಾಡೋವರೆಗೂ ಕಾದು ಕಾದು ರೋಗಿಗಳು ಹೈರಾಣಾಗ್ತಿದ್ರು. ಇದ್ರಿಂದ ಕೊರೊನಾ ಸೋಂಕಿತರು ಮಹಾ ಸಂಕಷ್ಟಕ್ಕೆ ಸಿಲುಕ್ತಿದ್ರು. ಆದ್ಯಾವಾಗ ಸರ್ಕಾರದ ಎಡವಟ್ಟಿನ ಸರಮಾಲೆಯನ್ನ ಟಿವಿ9 ಬಿತ್ತರಿಸೋಕೆ ಶುರು ಮಾಡ್ತೋ.. ಬಡವರಿಗೆ ಆಗ್ತಿರೋ ಅನ್ಯಾಯದ ಬಗ್ಗೆ ಟಿವಿ9 ರಾಜ್ಯ ಸರ್ಕಾರದ ಕಿವಿ ಹಿಂಡೋ ಕೆಲಸ ಮಾಡ್ತೋ ರಾಜ್ಯ ಸರ್ಕಾರ ಎಚ್ಚೆತ್ತಿದೆ. ಕೂಡಲೇ ತನ್ನ ಎಡವಟ್ಟಿನ ನಿರ್ಧಾರ ಹಿಂಪಡೆದು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದು ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್​.. ಬಡ ರೋಗಿಗಳ ಪರ ದನಿಯಾಗಿ.. ಸಂಕಷ್ಟಕ್ಕೆ ಜೊತೆಯಾಗಿ ನಿಂತ ಟಿವಿ9 ಅಭಿಯಾನಕ್ಕೆ ಸಿಕ್ಕ ಮಹಾ ಗೆಲುವು.

ಟಿವಿ9 ಇಂಪ್ಯಾಕ್ಟ್​ ನಂ.1
ಇನ್ಮುಂದೆ ಸೋಂಕಿತರ ಕೈಸೇರಲಿದೆ ಲ್ಯಾಬ್ ರಿಪೋರ್ಟ್​!
ಕೊರೊನಾ ವಕ್ಕರಿಸಿದ್ಯೋ ಇಲ್ವೋ ಅನ್ನೋ ರಿಪೋರ್ಟ್ ಕೈ ಸೇರೋದ್ರೊಳಗೆ ಬಡ ರೋಗಿಗಳು ಬೆಂಕಿ ಮೇಲಿರೋ ಬಾಣಲೆಯಲ್ಲಿ ಬಿದ್ದು ಒದ್ದಾಡಿದ ಹಾಗೆ ಒದ್ದಾಡ್ತಿದ್ರು. ಈ ಬಗ್ಗೆಗ ಟಿವಿ9 ನಿರಂತರವಾಗಿ ಸುದ್ದಿ ಪ್ರಸಾರ ಮಾಡಿತ್ತು. ಸರ್ಕಾರದ ಕಣ್ತೆರೆಸೋ ಕೆಲಸಕ್ಕೆ ನಿಮ್ಮ ಟಿವಿ9 ಹೆಜ್ಜೆ ಇಟ್ಟಿತ್ತು.. ಟಿವಿ9 ವರದಿಯಿಂದ ಎಚ್ಚೆತ್ತಿರೋ ಸರ್ಕಾರ ತನ್ನ ನಿರ್ಧಾರ ಹಿಂಪಡೆದು ಮೊದಲಿನಂತೆ ಕ್ರಮ ಕೈಗೊಂಡಿದೆ. ರೋಗಿಗಳಿಗೆ ಕೈಗೆ ರಿಪೋರ್ಟ್ ನೀಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಇನ್ಮುಂದೆ ಲ್ಯಾಬ್ ರಿಪೋರ್ಟ್​ ಸೋಂಕಿತರ ಕೈಸೇರಲಿದೆ. ಇದ್ರ ಜೊತೆಗೆ ಖಾಸಗಿ ಲ್ಯಾಬ್ ವರದಿ ಕೂಡ ನೇರವಾಗಿ ರೋಗಿಗಳ ಕೈಸೇರಲಿದೆ.

ಟಿವಿ9 ಇಂಪ್ಯಾಕ್ಟ್​ ನಂ.2
ರೋಗಿಗಳು ಆಸ್ಪತ್ರೆಗೆ ಬಂದ್ರೆ ತಕ್ಷಣ ಚಿಕಿತ್ಸೆಗೆ ಏರ್ಪಾಡು!
ಇಷ್ಟೇ ಅಲ್ಲ, ಲ್ಯಾಬ್ ರಿಪೋರ್ಟ್ ಸಿಗೋದು ತಡವಾಗ್ತಿದೆ ಅನ್ನೋ ಬಗ್ಗೆ ಟಿವಿ9 ಸರ್ಕಾರದ ಕಣ್ತೆರೆಸಿದ್ರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಗುಣಲಕ್ಷಣವಿಲ್ಲದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗ್ತಿಲ್ಲ ಅನ್ನೋ ಬಗ್ಗೆಯೂ ನಿಮ್ಮ ಟಿವಿ9 ನಿರಂತರ ವರದಿ ಪ್ರಸಾರ ಮಾಡಿತ್ತು. ಇದ್ರಿಂದಲೂ ಅಲರ್ಟ್ ಆಗಿರೋ ರಾಜ್ಯ ಸರ್ಕಾರ ಯಾವುದೇ ರೋಗಿಗಳು ಆಸ್ಪತ್ರೆಗೆ ಬಂದರೆ ಚಿಕಿತ್ಸೆ ನಿರಾಕರಿಸದಂತೆ ಖಡಕ್ ಆದೇಶ ಹೊರಡಿಸಿದೆ. ಅಲ್ಲದೇ ಗುಣಲಕ್ಷಣವಿಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಹೊಸ ರೂಲ್ಸ್ ಕೂಡ ಜಾರಿಗೆ ತಂದಿದೆ. ಟಿವಿ9 ನಿರಂತರ ವರದಿಯಿಂದ ಎಚ್ಚೆತ್ತ ಸರ್ಕಾರ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಹೊಸ ಮಾರ್ಗಸೂಚಿ ರಿಲೀಸ್ ಮಾಡಿದೆ.

ಹಾಗಿದ್ರೆ, ಸರ್ಕಾರ ರಿಲೀಸ್ ಮಾಡಿರೋ ಆ ಹೊಸ ಮಾರ್ಗಸೂಚಿಯಲ್ಲಿ ಏನೇನ್ ಇದೆ ಅನ್ನೋದನ್ನ ನೋಡೋದಾದ್ರೆ
ಟಿವಿ9 ಬಿಗ್ ಇಂಪ್ಯಾಕ್ಟ್​..!
ಇನ್ನು, ಕೊರೊನಾ ರೋಗಿಗಳು ಆಸ್ಪತ್ರೆಗೆ ಬಂದರೆ ಚಿಕಿತ್ಸೆ ನಿರಾಕರಿಸಂಗಿಲ್ಲ. ಅಲ್ಲದೇ, ಕೊರೊನಾ ಗುಣಲಕ್ಷಣವಿಲ್ಲದ ರೋಗಿಗಳಿಗೆ ಟ್ರೀಟ್ಮೆಂ್ ನೀಡ್ಬೇಕು. ಸಾರಿ, ಐಎಲ್​ಐ, ಸಿಒಪಿಡಿ ಹಾಗೂ ಅಸ್ತಮಾ ರೋಗಿಗಳಿಗೆ ತಕ್ಷಣ ಸ್ಪಂದಿಸಬೇಕು. ಅಲ್ಲದೇ ‘1912’ಕ್ಕೆ ಕರೆ ಮಾಡಿದ್ರೆ ತಕ್ಷಣ ಬೆಡ್ ವ್ಯವಸ್ಥೆ ಮಾಡ್ಬೇಕು ಅಂತ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ.

ಇನ್ನು, 108 ಮೂಲಕ ತಕ್ಷಣ ರೋಗಿಗಳನ್ನು ಶಿಫ್ಟ್ ಮಾಡಲು ಸ್ಟ್ರಿಕ್ಟ್​ರೂಲ್ಸ್ ಜಾರಿಗೆ ತರಲಾಗಿದೆ. ಸಾರಿ, ಐಎಲ್​ಐ, ಸಿಒಪಿಡಿ, ಅಸ್ತಮಾ ರೋಗಿಗಳು ಆಸ್ಪತ್ರೆಗೆ ಸ್ಥಳಾಂತರ ಮಾಡಿ ಚಿಕಿತ್ಸೆ ಆರಂಭವಾದ ಬಳಿಕ ಸ್ವ್ಯಾಬ್​ ತೆಗೆದು ಪರೀಕ್ಷೆಗೆ ಕಳುಹಿಸುತ್ತಾರೆ. ರಿಪೋರ್ಟ್​​ನಲ್ಲಿ ಕೊರೊನಾ ಪಾಸಿಟಿವ್ ಬಂದರೆ ಅಂಥವರನ್ನ ಐಸೋಲೇಷನ್ ವಾರ್ಡ್​ಗೆ ಶಿಫ್ಟ್​ ಮಾಡಲು ಆದೇಶಿಸಲಾಗಿದೆ. ನೆಗೆಟಿವ್ ಆದ್ರೆ ನಾನ್​ ಕೊವಿಡ್ ಐಸೋಲೇಷನ್​ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲು ರೂಲ್ಸ್ ಜಾರಿಗೆ ತರಲಾಗಿದೆ. ಇನ್ನು ಬಿಬಿಎಂಪಿ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಬೆಸ್ಕಾಂ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್​ ನಡುವೆ ಸಮನ್ವಯತೆಗೂ ಸರ್ಕಾರ ಆದೇಶ ಹೊರಡಿಸಿದೆ.

ಒಟ್ನಲ್ಲಿ ಕೊರೊನಾದಿಂದ ಕಂಗೆಟ್ಟಿರೋ ಕರುನಾಡಿನ ಜನರ ಪರವಾಗಿ ಟಿವಿ9 ನಿರಂತರವಾಗಿ ನಿಂತಿದೆ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಕೂಪಕ್ಕೆ ಬಿದ್ದು ಕಣ್ಣೀರಿಡ್ತಿದ್ದ.. ಸೂಕ್ತ ಚಿಕಿತ್ಸೆ ಸಿಗದೆ ಕಂಗೆಟ್ಟು ಕೂತಿದ್ದವರ ಬೆನ್ನಿಗೆ ನಿಮ್ಮ ಟಿವಿ9 ಶಕ್ತಿಯಾಗಿ ನಿಂತಿದೆ.. ಬಡ ರೋಗಿಗಳು ಪಡ್ತಿದ್ದ ಸಂಕಷ್ಟದ ಪರ ದನಿ ಎತ್ತಿ ನಿದ್ದೆಗೆ ಜಾರಿದ್ದ ಸರ್ಕಾರವನ್ನ ಟಿವಿ9 ಬಡಿದೆಬ್ಬಿಸಿದೆ. ಸರ್ಕಾರ ಕೊನೆಗೂ ಎಚ್ಚೆತ್ತು ಎಡವಟ್ಟಿನ ನಿರ್ಧಾರದಿಂದ ಕೊನೆಗೂ ಹಿಂದೆ ಸರಿದಿದೆ. ಇದು ಇದು ನಿಮ್ಮ ಗೆಲುವು.. ಇದು ಉತ್ತಮ ಸಮಾಜಕ್ಕಾಗಿ ಸಿಕ್ಕ ಮಹಾ ಗೆಲುವು.. ಬಡವರ ಬೆನ್ನಿಗೆ ನಿಂತ ಟಿವಿ9 ಬಿಗ್ ಇಂಪ್ಯಾಕ್ಟ್​.

Published On - 7:03 am, Sun, 5 July 20