‘ಗಲ್ವಾನ್ ವ್ಯಾಲಿ ಅಟ್ಯಾಕ್’ ಮೇಲೆ ಸಿನಿಮಾ, ನಾಯಕ ಇವರೇ..
ಜೂನ್ 15ರಂದು ಚೀನಾ ಹಾಗೂ ಭಾರತೀಯ ಯೋಧರ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ವಿಷಯ ಹೊರಬೀಳುತ್ತಿದ್ದಂತೆ ಚೀನಾದ ವಿರುದ್ಧ ಭಾರತೀಯರು ಆಕ್ರೋಶ ಹೊರ ಹಾಕಿದ್ದರು. ಇದರ ಪರಿಣಾಮ ಭಾರತ ಸೇಡು ತೀರಿಸಿಕೊಳ್ಳಲು ಚೀನಾದ 59 ಆ್ಯಪ್ಗಳನ್ನ ಬ್ಯಾನ್ ಮಾಡಿ ಡಿಜಿಟಲ್ ಸ್ಟೈಕ್ ಮಾಡಿದೆ. ಇನ್ನೊಂದ್ಕಡೆ ಬಾಲಿವುಡ್ನ ಸೂಪರ್ ಸ್ಟಾರ್ ಗಲ್ವಾನ್ ವ್ಯಾಲಿಯ ಸಂಘರ್ಷವನ್ನ ಎಳೆ ಎಳೆಯಾಗಿ ತೆರೆಮೇಲೆ ತರಲು ಮುಂದಾಗಿದ್ದಾರೆ. ಗಲ್ವಾನ್ ವ್ಯಾಲಿಯಲ್ಲಿ ನಡೆದ ಭಾರತ ಹಾಗೂ ಚೀನಾದ ಸಂಘರ್ಷವನ್ನ ಸಿನಿಮಾ […]
ಜೂನ್ 15ರಂದು ಚೀನಾ ಹಾಗೂ ಭಾರತೀಯ ಯೋಧರ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ವಿಷಯ ಹೊರಬೀಳುತ್ತಿದ್ದಂತೆ ಚೀನಾದ ವಿರುದ್ಧ ಭಾರತೀಯರು ಆಕ್ರೋಶ ಹೊರ ಹಾಕಿದ್ದರು. ಇದರ ಪರಿಣಾಮ ಭಾರತ ಸೇಡು ತೀರಿಸಿಕೊಳ್ಳಲು ಚೀನಾದ 59 ಆ್ಯಪ್ಗಳನ್ನ ಬ್ಯಾನ್ ಮಾಡಿ ಡಿಜಿಟಲ್ ಸ್ಟೈಕ್ ಮಾಡಿದೆ. ಇನ್ನೊಂದ್ಕಡೆ ಬಾಲಿವುಡ್ನ ಸೂಪರ್ ಸ್ಟಾರ್ ಗಲ್ವಾನ್ ವ್ಯಾಲಿಯ ಸಂಘರ್ಷವನ್ನ ಎಳೆ ಎಳೆಯಾಗಿ ತೆರೆಮೇಲೆ ತರಲು ಮುಂದಾಗಿದ್ದಾರೆ.
ಗಲ್ವಾನ್ ವ್ಯಾಲಿಯಲ್ಲಿ ನಡೆದ ಭಾರತ ಹಾಗೂ ಚೀನಾದ ಸಂಘರ್ಷವನ್ನ ಸಿನಿಮಾ ಮಾಡಲು ವೇದಿಕೆ ಸಜ್ಜಾಗುತ್ತಿದೆ. ಬಾಲಿವುಡ್ ಸೂಪರ್ಸ್ಟಾರ್ ಅಜಯ್ ದೇವಗನ್ ಈ ಸಿನಿಮಾದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸೆಲೆಕ್ಟ್ ಮೀಡಿಯಾ ಹೋಲ್ಡಿಂಗ್ಸ್, ಎಲ್ಎಲ್ಪಿ ನಿರ್ಮಾಣ ಸಂಸ್ಥೆ ಸೇರಿ ಗಲ್ವಾನ್ ವ್ಯಾಲಿ ಸಿನಿಮಾವನ್ನ ತೆರೆಮೇಲೆ ತರಲಿದೆ.
ಗಲ್ವಾನ್ ವ್ಯಾಲಿಯ ಈ ಸಿನಿಮಾದಲ್ಲಿ ಅಜಯ್ ದೇವಗನ್ ನಟಿಸುತ್ತಾರಾ? ಈ ಸಿನಿಮಾಗಾಗಿ ಯಾರು ಯಾರು ಬಣ್ಣ ಹಚ್ಚುತ್ತಾರೆ? ನಿರ್ದೇಶಕ ಯಾರು? ಯಾವಾಗ ಶುರುವಾಗುತ್ತೆ? ಅನ್ನೋ ಬಗ್ಗೆ ಮಾಹಿತಿಯಲ್ಲಿ ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ.
ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್ ಅನ್ನ ಆಧರಿಸಿದ ಉರಿ ಸಿನಿಮಾ ತೆರೆಕಂಡಿತ್ತು. ಉರಿ ಯಶಸ್ಸಿನ ಬಳಿಕ ಪುಲ್ವಾಮಾ ದಾಳಿಯನ್ನ ಆಧಾರವಾಗಿಟ್ಟುಕೊಂಡು ಸಂಜಯ್ ಲೀಲಾ ಬನ್ಸಾಲಿ ಏರ್ಸ್ಟ್ರೈಕ್ ಅನ್ನ ತೆರೆಮೇಲೆ ತರಲು ಮುಂದಾಗಿದ್ದರು. ಈಗ ಗಲ್ವಾನ್ ವ್ಯಾಲಿ ಅಟ್ಯಾಕ್ ಅನ್ನ ತೆರೆಮೇಲೆ ತರಲು ಅಜಯ್ ದೇವಗನ್ ಮುಂದಾಗಿದ್ದಾರೆ.