
ಬೆಂಗಳೂರು: ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಐಕ್ಯ ಹೋರಾಟ ಸಮಿತಿಯಿಂದ ನಾಳೆ ಕರ್ನಾಟಕ ಬಂದ್ಗೆ ಮುಂದಾಗಿದೆ. ರೈತರ ಹೋರಾಟಕ್ಕೆ ಬೀದಿಬದಿ ವ್ಯಾಪಾರಿಗಳ ಸಂಘ ಕೂಡ ಸಾಥ್ ನೀಡಿದೆ. ಆದರೆ ಯಾವ ಮಾರ್ಕೆಟ್ಗಳನ್ನೂ ಬಂದ್ ಮಾಡುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಖಡಕ್ ಸೂಚನೆ ನೀಡಿದ್ದಾರೆ.
ಸೋಮವಾರದ ಕರ್ನಾಟಕ ಬಂದ್ಗೆ ವ್ಯಾಪಾರಿಗಳಿಂದ ಸಂಪೂರ್ಣ ಬೆಂಬಲ ಸಿಕ್ಕಿತ್ತು. ರೈತರ ಬೆಳೆ ಇಲ್ಲಾ ಅಂದ್ರೆ ವ್ಯಾಪಾರಿಗಳೂ ಇಲ್ಲ ಎಂದು ಸ್ವಇಚ್ಛೆಯಿಂದ ಮಾರ್ಕೆಟ್ ಬಂದ್ಗೆ ವ್ಯಾಪಾರಿಗಳು ನಿರ್ಧರಿಸಿದ್ರು. ಆದರೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಯಾವ ಮಾರ್ಕೆಟ್ಗಳನ್ನು ಬಂದ್ ಮಾಡುವಂತಿಲ್ಲ ಎಂದು ವಾರ್ನಿಂಗ್ ಮಾಡಿದ್ದಾರೆ. ಬಲವಂತವಾಗಿ ಬಂದ್ ಮಾಡಲು ಬಂದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಸೂಚಿಸಿದ್ದಾರೆ.
ಕೆಲ ಕನ್ನಡ ಪರ ಸಂಘಟನೆಗಳು ನಗರದಲ್ಲಿರುವ ಮಾರ್ಕೆಟ್ಗಳನ್ನ ಬಂದ್ ಮಾಡುವ ಪ್ಲಾನ್ ಮಾಡಿಕೊಂಡಿವೆ. ಹೀಗಾಗಿ ಅವರ ಪ್ರಯತ್ನ ಸಫಲವಾಗಬಾರದೆಂದು ಇಂತಹ ನಿರ್ಧಾರಕ್ಕೆ ಬಿಬಿಎಂಪಿ ಆಯುಕ್ತರು ಮುಂದಾಗಿದ್ದಾರೆ. ನಾಳೆ ಯಾವುದೇ ಮಾರುಕಟ್ಟೆಗಳನ್ನ ಕ್ಲೋಸ್ ಮಾಡಬೇಡಿ. ಎಲ್ಲಾ ಮಾರ್ಕೆಟ್ಗಳನ್ನ ಓಪನ್ ಮಾಡಿ ಎಂದು ವ್ಯಾಪಾರಿಗಳಿಗೆ ಸೂಚಿಸಿದ್ದಾರೆ.