ನಾಗರಹೊಳೆಯಲ್ಲಿ ಹುಲಿಗಳ ಮೋಜು ಮಸ್ತಿ: ಪ್ರವಾಸಿಗನ ವಿಡಿಯೋ ಆಯ್ತು ಫುಲ್ Viral!
ಮೈಸೂರು: ಕೊರೊನಾದಿಂದ ಎಲ್ಲವೂ ಬದಲಾಗಿದೆ. ವಾಹನಗಳ ಓಡಾಟ ಕಡಿಮೆಯಾಗಿ ಪ್ರಕೃತಿ ತನ್ನ ಹೊಸ ರೂಪವನ್ನೇ ಪಡೆದುಕೊಂಡಿದೆ. ಕೊರೊನಾದಿಂದ ಜನ ಜೀವನಕ್ಕೆ ಸಾಕಷ್ಟು ತೊಂದರೆ ಉಂಟಾಗಿದ್ದರೂ ಪ್ರಕೃತಿಗೆ ಲಾಭ ತಂದು ಕೊಟ್ಟಿದೆ. ಕೊರೊನಾದಿಂದಾಗಿ ಉದ್ಯಾನವನಗಳ ಕಡೆ ಮುಖ ಮಾಡದ ಪ್ರವಾಸಿಗರಿಗೆ ಉದ್ಯಾನವನ ಓಪನ್ ಆಗಿರುವುದು ಸಂತೋಷ ತಂದಿದೆ. ಹಾಗೂ ಬಹಳ ತಿಂಗಳುಗಳ ನಂತರ ತಮ್ಮ ಬೇಸರವನ್ನು ಕಳೆಯಲು ಹಚ್ಚ ಹಸಿರ ಪ್ರಕೃತಿ ಸ್ವಾಗತ ಮಾಡಿದ್ರೆ ಮತ್ತೊಂದು ಕಡೆ ಎರಡು ಹುಲಿಗಳು ಕಾಡಿನ ಮಧ್ಯೆಯ ರಸ್ತೆಯಲ್ಲಿ ಬಿಂದಾಸ್ ಆಗಿ ಓಡಾಡುತ್ತ […]

ಮೈಸೂರು: ಕೊರೊನಾದಿಂದ ಎಲ್ಲವೂ ಬದಲಾಗಿದೆ. ವಾಹನಗಳ ಓಡಾಟ ಕಡಿಮೆಯಾಗಿ ಪ್ರಕೃತಿ ತನ್ನ ಹೊಸ ರೂಪವನ್ನೇ ಪಡೆದುಕೊಂಡಿದೆ. ಕೊರೊನಾದಿಂದ ಜನ ಜೀವನಕ್ಕೆ ಸಾಕಷ್ಟು ತೊಂದರೆ ಉಂಟಾಗಿದ್ದರೂ ಪ್ರಕೃತಿಗೆ ಲಾಭ ತಂದು ಕೊಟ್ಟಿದೆ.
ಕೊರೊನಾದಿಂದಾಗಿ ಉದ್ಯಾನವನಗಳ ಕಡೆ ಮುಖ ಮಾಡದ ಪ್ರವಾಸಿಗರಿಗೆ ಉದ್ಯಾನವನ ಓಪನ್ ಆಗಿರುವುದು ಸಂತೋಷ ತಂದಿದೆ. ಹಾಗೂ ಬಹಳ ತಿಂಗಳುಗಳ ನಂತರ ತಮ್ಮ ಬೇಸರವನ್ನು ಕಳೆಯಲು ಹಚ್ಚ ಹಸಿರ ಪ್ರಕೃತಿ ಸ್ವಾಗತ ಮಾಡಿದ್ರೆ ಮತ್ತೊಂದು ಕಡೆ ಎರಡು ಹುಲಿಗಳು ಕಾಡಿನ ಮಧ್ಯೆಯ ರಸ್ತೆಯಲ್ಲಿ ಬಿಂದಾಸ್ ಆಗಿ ಓಡಾಡುತ್ತ ಆಟವಾಡುತ್ತಿರುವ ದೃಶ್ಯ ಪ್ರವಾಸಿಗರಿಗೆ ರೋಮಾಂಚನ ತಂದಿದೆ.
ಮೈಸೂರು ಜಿಲ್ಲೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಹುಲಿಗಳು ರಸ್ತೆ ಮಧ್ಯೆ ಮೋಜು ಮಸ್ತಿಯಿಂದ ಒಬ್ಬರ ಮೇಲೆ ಒಬ್ಬರು ಬೀಳುತ್ತ ಆಟವಾಡುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಅರವಿಂದ್ ಕಾರ್ತಿಕ್ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದು ಸದ್ಯ ಈಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.





