ಈ ಕೋವಿಡ್ ಕೇರ್ ಸೆಂಟರ್​ನಲ್ಲಿ ಬಾತ್‌ ರೂಂ, ಟಾಯ್ಲೆಟ್‌ಗೆ ಬಾಗಿಲುಗಳೇ ಇಲ್ಲ..

ಗದಗ: ಕೊರೊನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ, ಕೊವಿಡ್ ಕೇರ್ ಸೆಂಟರ್‌ಗಳ ವ್ಯವಸ್ಥೆ, ಊಟ ಯಾವುದೂ ಸರಿ ಇಲ್ಲ. ಈ ಬಗ್ಗೆ ಅನೇಕ ಕಡೆ ವರದಿಯಾಗುತ್ತಿವೆ. ಎಲ್ಲೂ ಒಂದೊಂದು ಕಡೆ ಕೊವಿಡ್ ಕೇರ್ ಸೆಂಟರ್‌ಗಳ ವ್ಯವಸ್ಥೆ ಬಗ್ಗೆ ಮೆಚ್ಚುಗೆ ಕಾಣಬಹುದು. ಉಳಿದ ಬಹತೇಕ ಕಡೆ ಅವ್ಯವಸ್ಥೆಯೇ ಹೆಚ್ಚು. ಗದಗ ಜಿಲ್ಲೆ ನರಗುಂದ ತಾಲೂಕಿನ ಬೆನಕೊಪ್ಪ ಗ್ರಾಮದ ಕೊವಿಡ್ ಕೇರ್ ಸೆಂಟರ್‌ನಲ್ಲಿ ಅವ್ಯವಸ್ಥೆ ಆಗರವಾಗಿದೆ. ಇಲ್ಲಿ ಉತ್ತಮ ಆಹಾರ ನೀಡ್ತಿಲ್ಲ. ಕುಡಿಯುವ ನೀರಿಗೂ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು […]

ಈ ಕೋವಿಡ್ ಕೇರ್ ಸೆಂಟರ್​ನಲ್ಲಿ ಬಾತ್‌ ರೂಂ, ಟಾಯ್ಲೆಟ್‌ಗೆ ಬಾಗಿಲುಗಳೇ ಇಲ್ಲ..

Updated on: Aug 04, 2020 | 8:25 AM

ಗದಗ: ಕೊರೊನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ, ಕೊವಿಡ್ ಕೇರ್ ಸೆಂಟರ್‌ಗಳ ವ್ಯವಸ್ಥೆ, ಊಟ ಯಾವುದೂ ಸರಿ ಇಲ್ಲ. ಈ ಬಗ್ಗೆ ಅನೇಕ ಕಡೆ ವರದಿಯಾಗುತ್ತಿವೆ. ಎಲ್ಲೂ ಒಂದೊಂದು ಕಡೆ ಕೊವಿಡ್ ಕೇರ್ ಸೆಂಟರ್‌ಗಳ ವ್ಯವಸ್ಥೆ ಬಗ್ಗೆ ಮೆಚ್ಚುಗೆ ಕಾಣಬಹುದು. ಉಳಿದ ಬಹತೇಕ ಕಡೆ ಅವ್ಯವಸ್ಥೆಯೇ ಹೆಚ್ಚು.

ಗದಗ ಜಿಲ್ಲೆ ನರಗುಂದ ತಾಲೂಕಿನ ಬೆನಕೊಪ್ಪ ಗ್ರಾಮದ ಕೊವಿಡ್ ಕೇರ್ ಸೆಂಟರ್‌ನಲ್ಲಿ ಅವ್ಯವಸ್ಥೆ ಆಗರವಾಗಿದೆ. ಇಲ್ಲಿ ಉತ್ತಮ ಆಹಾರ ನೀಡ್ತಿಲ್ಲ. ಕುಡಿಯುವ ನೀರಿಗೂ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬಾತ್‌ ರೂಂ, ಟಾಯ್ಲೆಟ್‌ಗೆ ಬಾಗಿಲುಗಳೇ ಇಲ್ಲ. ಈ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತಂದ್ರೂ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಸೋಂಕಿತರು ಆರೋಪಿಸಿದ್ದಾರೆ. ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

covid care center of gadag