ಸಿದ್ದರಾಮಯ್ಯಗೆ ಕೊರೊನಾ ಸೋಂಕು ಅಂಟಿಕೊಳ್ಳಲು ಇದೇ ಕಾರಣವಾಯ್ತಾ?

|

Updated on: Aug 04, 2020 | 9:30 AM

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ದೈಹಿಕ ಅಂತರ ಕಾಯ್ದುಕೊಳ್ಳದಿರುವುದೇ ಸಿದ್ದರಾಮಯ್ಯಗೆ ಕಂಟಕವಾಯ್ತಾ? ಎಂಬ ಅನುಮಾನ ಬಂದಿದೆ. ಇತ್ತೀಚೆಗೆ ಸಿದ್ದರಾಮಯ್ಯ ಸಾಕಷ್ಟು ಸುದ್ದಿಗೋಷ್ಠಿ, ಧರಣಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ದೈಹಿಕ ಅಂತರ ಕಾಯ್ದುಕೊಂಡಿಲ್ಲ. ಇದರಿಂದಲೇ ಸಿದ್ದರಾಮಯ್ಯಗೆ ಕೊರೊನಾ ಹರಡಿದೆಯಾ? ಎಂಬ ಪ್ರಶ್ನೆ ಉದ್ಭವಿಸಿದೆ. ಮೈಸೂರು ಪತ್ರಕರ್ತರಲ್ಲಿ ಹೆಚ್ಚಿದ ಆತಂಕ ಇನ್ನು ಮಾಜಿ ಸಿಎಂ ಸಿದ್ದರಾಮಯ್ಯಗೆ ಕೊರೊನಾ ಪಾಸಿಟಿವ್ ಬಂದ ಮೇಲೆ ಮೈಸೂರಿನ ಪತ್ರಕರ್ತರಲ್ಲಿ ಆತಂಕ ಹೆಚ್ಚಾಗಿದೆ. ಜುಲೈ 30ರಂದು ಮಾಧ್ಯಮ […]

ಸಿದ್ದರಾಮಯ್ಯಗೆ ಕೊರೊನಾ ಸೋಂಕು ಅಂಟಿಕೊಳ್ಳಲು ಇದೇ ಕಾರಣವಾಯ್ತಾ?
Follow us on

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ದೈಹಿಕ ಅಂತರ ಕಾಯ್ದುಕೊಳ್ಳದಿರುವುದೇ ಸಿದ್ದರಾಮಯ್ಯಗೆ ಕಂಟಕವಾಯ್ತಾ? ಎಂಬ ಅನುಮಾನ ಬಂದಿದೆ.

ಇತ್ತೀಚೆಗೆ ಸಿದ್ದರಾಮಯ್ಯ ಸಾಕಷ್ಟು ಸುದ್ದಿಗೋಷ್ಠಿ, ಧರಣಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ದೈಹಿಕ ಅಂತರ ಕಾಯ್ದುಕೊಂಡಿಲ್ಲ. ಇದರಿಂದಲೇ ಸಿದ್ದರಾಮಯ್ಯಗೆ ಕೊರೊನಾ ಹರಡಿದೆಯಾ? ಎಂಬ ಪ್ರಶ್ನೆ ಉದ್ಭವಿಸಿದೆ.

ಮೈಸೂರು ಪತ್ರಕರ್ತರಲ್ಲಿ ಹೆಚ್ಚಿದ ಆತಂಕ
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯಗೆ ಕೊರೊನಾ ಪಾಸಿಟಿವ್ ಬಂದ ಮೇಲೆ ಮೈಸೂರಿನ ಪತ್ರಕರ್ತರಲ್ಲಿ ಆತಂಕ ಹೆಚ್ಚಾಗಿದೆ. ಜುಲೈ 30ರಂದು ಮಾಧ್ಯಮ ಸಂವಾದದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ ಅವರ ಜೊತೆ 50ಕ್ಕೂ ಹೆಚ್ಚು ಪತ್ರಕರ್ತರು ವೇದಿಕೆ ಹಂಚಿಕೊಂಡಿದ್ದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ರಾಜ್ಯ ಸಮಿತಿ ಸದಸ್ಯ ಸಂವಾದದಲ್ಲಿ ಭಾಗವಹಿಸಿದ್ದರು.

ನಂತರ ಸಿದ್ದರಾಮಯ್ಯ ಆಗಸ್ಟ್ 1ರಂದು ಮಾಧ್ಯಮಗಳಿಗೆ ಮೈಸೂರಿನ ಟಿಕೆ ಬಡಾವಣೆ ಬಳಿ ಸಂದರ್ಶನ ನೀಡಿದ್ದರು. ಈ ವೇಳೆ 10ಕ್ಕೂ ಹೆಚ್ಚು ದೃಶ್ಯ ಮಾಧ್ಯಮದ ಪತ್ರಕರ್ತರು ಕ್ಯಾಮೆರಾ ಪರ್ಸನ್ಸ್ ಹಾಜರಿದ್ದರು. ಹೀಗಾಗಿ ಈಗ ಮೈಸೂರಿನ ಪತ್ರಕರ್ತರು ಸೋಂಕು ಹರಡಿರಬಹುದಾ ಎಂಬ ಆತಂಕದಲ್ಲಿದ್ದಾರೆ.