ಚೀನಾಕ್ಕೆ ಮತ್ತೊಂದು ಶಾಕ್, Apple iPhone ತಯಾರಿಕೆ ಭಾರತಕ್ಕೆ ಶಿಫ್ಟ್!
ದೆಹಲಿ: ಚೀನಾ ಮೂಲದ ಕೊರೊನಾ ವೈರಸ್ನಿಂದ ಕಂಗಾಲಾಗಿರುವ ಇಡೀ ವಿಶ್ವ ಇದೀಗ ಕಮ್ಯೂನಿಸ್ಟ್ ರಾಷ್ಟ್ರದ ವಿರುದ್ಧ ಪರೋಕ್ಷವಾಗಿ ಆರ್ಥಿಕ ಸಮರಕ್ಕೆ ಇಳಿದಿದೆ. ಅದರ ಒಂದು ಅಂಶವಾಗಿ ಚೀನಾದಲ್ಲಿ ಸ್ಥಾಪಿಸಲಾಗಿದ್ದ ಹಲವಾರು ಪ್ರತಿಷ್ಠಿತ MNC ಕಂಪನಿಗಳ ಕಾರ್ಖಾನೆಗಳು ಇದೀಗ ಅಲ್ಲಿಂದ ಹೊರನಡೆಯುತ್ತಿವೆ. ಇದೇ ವೇಳೆಯಲ್ಲಿ ಹೂಡಿಕೆಯ ಉತ್ತಮ ತಾಣವಾಗಿ ಮಾರ್ಪಾಡಾಗಿರುವ ಭಾರತದತ್ತ ಎಲ್ಲರೂ ಮುಖ ಮಾಡುತ್ತಿದ್ದಾರೆ. ಮೊಬೈಲ್ ತಯಾರಕರಿಗೆ ಕೇಂದ್ರ ಸರ್ಕಾರವು 41 ಸಾವಿರ ಕೋಟಿ ಪ್ರೋತ್ಸಾಹ ಧನ ನೀಡಲು ಮುಂದಾಗಿರುವ ಬೆನ್ನಲ್ಲೇ ಹಲವಾರು ಮೊಬೈಲ್ ತಯಾರಕರು ದೇಶಕ್ಕೆ […]
ದೆಹಲಿ: ಚೀನಾ ಮೂಲದ ಕೊರೊನಾ ವೈರಸ್ನಿಂದ ಕಂಗಾಲಾಗಿರುವ ಇಡೀ ವಿಶ್ವ ಇದೀಗ ಕಮ್ಯೂನಿಸ್ಟ್ ರಾಷ್ಟ್ರದ ವಿರುದ್ಧ ಪರೋಕ್ಷವಾಗಿ ಆರ್ಥಿಕ ಸಮರಕ್ಕೆ ಇಳಿದಿದೆ. ಅದರ ಒಂದು ಅಂಶವಾಗಿ ಚೀನಾದಲ್ಲಿ ಸ್ಥಾಪಿಸಲಾಗಿದ್ದ ಹಲವಾರು ಪ್ರತಿಷ್ಠಿತ MNC ಕಂಪನಿಗಳ ಕಾರ್ಖಾನೆಗಳು ಇದೀಗ ಅಲ್ಲಿಂದ ಹೊರನಡೆಯುತ್ತಿವೆ.
ಇದೇ ವೇಳೆಯಲ್ಲಿ ಹೂಡಿಕೆಯ ಉತ್ತಮ ತಾಣವಾಗಿ ಮಾರ್ಪಾಡಾಗಿರುವ ಭಾರತದತ್ತ ಎಲ್ಲರೂ ಮುಖ ಮಾಡುತ್ತಿದ್ದಾರೆ. ಮೊಬೈಲ್ ತಯಾರಕರಿಗೆ ಕೇಂದ್ರ ಸರ್ಕಾರವು 41 ಸಾವಿರ ಕೋಟಿ ಪ್ರೋತ್ಸಾಹ ಧನ ನೀಡಲು ಮುಂದಾಗಿರುವ ಬೆನ್ನಲ್ಲೇ ಹಲವಾರು ಮೊಬೈಲ್ ತಯಾರಕರು ದೇಶಕ್ಕೆ ಬರಲು ಆಸಕ್ತಿ ತೋರಿಸಿದ್ದಾರೆ.
ಇದೀಗ ಅಮೆರಿಕಾದ ಪ್ರತಿಷ್ಠಿತ iPhone ತಯಾರಕ ಌಪಲ್ ಕಂಪನಿಯ ಗುತ್ತಿಗೆದಾರನೊಬ್ಬ ಸಹ ಭಾರತದತ್ತ ಬರಲಿದ್ದಾನೆ. ಹೌದು, ಌಪಲ್ ಕಂಪನಿಯ iPhone ನಿರ್ಮಿಸುವ ಈ ಗುತ್ತಿಗೆದಾರ ತನ್ನ ಆರೂ ಉತ್ಪಾದನಾ ಶ್ರೇಣಿ ಅಥವಾ ಪ್ರೊಡಕ್ಷನ್ ಲೈನ್ಗಳನ್ನ ಭಾರತಕ್ಕೆ ವರ್ಗಾಯಿಸಲಿದ್ದಾನೆ.
ಸರಿಸುಮಾರು 5 ಬಿಲಿಯನ್ ಡಾಲರ್ ಬೆಲೆಬಾಳುವ ಈ ಆರು ಪ್ರೊಡಕ್ಷನ್ ಲೈನ್ಗಳು ಈಗಾಗಲೇ ಭಾರತಕ್ಕೆ ಬಂದು ತಲುಪಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರಿಂದ ಭಾರತದಲ್ಲಿ ಸುಮಾರು 50 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ತಿಳಿದುಬಂದಿದೆ.
Published On - 10:55 am, Tue, 4 August 20