ಮುಧೋಳದಲ್ಲಿ ಖತರ್ನಾಕ್ ಕಳ್ಳ ಅರೆಸ್ಟ್! ವಶಪಡಿಸಿಕೊಂಡ ಚಿನ್ನಾಭರಣ ಎಷ್ಟು ಗೊತ್ತಾ?

ಹುಸೇನ ಅಲಿ ಇರಾಣಿ ಮುಧೋಳ ಮಹಲಿಂಗಪುರ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನಗಳನ್ನು ಮಾಡ್ತಿದ್ದ. ಜಿಲ್ಲೆಯ ಮುಧೋಳ ಮತ್ತು ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪೊಲೀಸ್ ಠಾಣೆಗಳಲ್ಲಿ ಒಟ್ಟು ಐದು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.

ಮುಧೋಳದಲ್ಲಿ ಖತರ್ನಾಕ್ ಕಳ್ಳ ಅರೆಸ್ಟ್! ವಶಪಡಿಸಿಕೊಂಡ ಚಿನ್ನಾಭರಣ ಎಷ್ಟು ಗೊತ್ತಾ?
ಮುಧೋಳದಲ್ಲಿ ಖತರ್ನಾಕ್ ಕಳ್ಳ ಅರೆಸ್ಟ್!

Updated on: Feb 01, 2021 | 5:17 PM

ಬಾಗಲಕೋಟ: ಮೋಡಿ ಮಾಡಿ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಕಳ್ಳನ‌ನ್ನು ಮುಧೋಳ ಪೊಲೀಸರು ಬಂಧಿಸಿದ್ದಾರೆ. ಹುಸೇನ ಅಲಿ ಇರಾಣಿ(34) ಬಂಧಿತ ಕಳ್ಳ. ಚಿನ್ನಾಭರಣ ಸಾರ್ವಜನಿಕರ ಕೊರಳಲ್ಲಿಯೇ ಇರಬಹುದು ಅಥವಾ ಮೆನಯಲ್ಲಿಯೇ ಇದ್ದರು ಕಳ್ಳ ಹುಸೇನ ಅಲಿ ಮನೆಗೇ ನುಗ್ಗಿ ಕದಿಯುತ್ತಿದ್ದ. ಚಿನ್ನದಂಗಡಿಯಲ್ಲಿಯೂ ಮಂಗಳಸರ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಈ ಖರ್ತರ್ನಾಕ್ ಕಳ್ಳ.

ಮುಧೋಳ ಮಹಲಿಂಗಪುರ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನಗಳನ್ನು ಮಾಡ್ತಿದ್ದ. ಜಿಲ್ಲೆಯ ಮುಧೋಳ ಮತ್ತು ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪೊಲೀಸ್ ಠಾಣೆಗಳಲ್ಲಿ ಒಟ್ಟು ಐದು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಹುಸೇನ ಅಲಿ ಇರಾಣಿ ಮೂಲತಃ ಗದಗ ಜಿಲ್ಲೆ ಬೆಟಗೇರಿ ಗ್ರಾಮದ ನಿವಾಸಿ.