
ಚಿತ್ರದುರ್ಗ: ವಿಶ್ವದೆಲ್ಲೆಡೆ ತಾಂಡವವಾಡ್ತಿರುವ ಕೋವಿಡ್19 ಪ್ರಾಯೋಗಿಕ ಲಸಿಕೆಯನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಡಿ.ಸಿ ಪಾಣಿ ಎಂಬ ಕಾದಂಬರಿಕಾರರು ಪಡೆದಿದ್ದಾರೆ.
ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಮೊದಲನೇ ಹಂತದ ಪ್ರಾಯೋಗಿಕ ಲಸಿಕೆಯನ್ನು ಪಡೆದಿರುವ ಪಾಣಿಯವರು ಸ್ವಯಂ ಪ್ರೇರಿತರಾಗಿ ಈ ಪ್ರಯೋಗದಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಡಾ,ಪಾರಿತೋಷ್ ವಿ ದೇಸಾಯಿ ರವರು ವಿಶೇಷ ಫಾರ್ಮಜೆಟ್ ಮೆಷಿನ್ ಮೂಲಕ ಪ್ರಾಯೋಗಿಕ ಲಸಿಕೆಯನ್ನು ನೀಡಿದ್ದಾರೆ.
ಐಸಿಎಂಆರ್, ಹೈದರಾಬಾದ್‌ನ ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್(ಬಿಬಿಐಎಲ್) ಪರಸ್ಪರ ಕೈ ಜೋಡಿಸಿ ಈ ಲಸಿಕೆಯನ್ನು ತಯಾರಿಸಿದ್ದಾರೆ.