ಸ್ವಲ್ಪದರಲ್ಲೇ ತಪ್ಪಿತು ಭಾರಿ ಅನಾಹುತ! ಆಕ್ಸಿಜನ್ ಸಿಗದ ರೋಗಿಗಳು ಬೇರೆ ಆಸ್ಪತ್ರೆಗಳಿಗೆ ಶಿಫ್ಟ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯಬೇಕಿದ್ದ ಮಹಾ ದುರಂತ ತಪ್ಪಿದೆ. ಸ್ವಲ್ಪ ಯಾಮಾರಿದ್ರೂ ಕಿಮ್ಸ್ ಆಸ್ಪತ್ರೆಯಲ್ಲಿ ನಡೆಯಬಾರದ ಘಟನೆಯೇ ನಡೆದು ಹೋಗ್ತಿತ್ತು. ಆದ್ರೆ ಕೊನೆ ಕ್ಷಣದಲ್ಲಿ ನಾನ್ ಕೊವಿಡ್ ರೋಗಿಗಳು ಜೀವ ಉಳಿಸಲು ಇನ್ನಿಲ್ಲದ ಕಸರತ್ತು ನಡೆಸಲಾಯ್ತು. ಸರ್ಕಾರದ ಬೇಜವಾಬ್ದಾರಿಯಿಂದ 47 ರೋಗಿಗಳಿಗೆ ಸಂಕಷ್ಟ! ಎಲ್ಲವೂ ಸರಿ ಇದೆ.. ಏನೂ ಸಮಸ್ಯೆ ಇಲ್ಲ. ನಾವು ಪರ್ಫೆಕ್ಟ್. ನಮ್ಮ ವೈದ್ಯಕೀಯ ವ್ಯವಸ್ಥೆ ಪರ್ಫೆಕ್ಟ್ ಎನ್ನುತ್ತಿದ್ದ ಸರ್ಕಾರ ನಿನ್ನೆ ತಲೆತಗ್ಗಿಸುವಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ […]

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯಬೇಕಿದ್ದ ಮಹಾ ದುರಂತ ತಪ್ಪಿದೆ. ಸ್ವಲ್ಪ ಯಾಮಾರಿದ್ರೂ ಕಿಮ್ಸ್ ಆಸ್ಪತ್ರೆಯಲ್ಲಿ ನಡೆಯಬಾರದ ಘಟನೆಯೇ ನಡೆದು ಹೋಗ್ತಿತ್ತು. ಆದ್ರೆ ಕೊನೆ ಕ್ಷಣದಲ್ಲಿ ನಾನ್ ಕೊವಿಡ್ ರೋಗಿಗಳು ಜೀವ ಉಳಿಸಲು ಇನ್ನಿಲ್ಲದ ಕಸರತ್ತು ನಡೆಸಲಾಯ್ತು.
ಸರ್ಕಾರದ ಬೇಜವಾಬ್ದಾರಿಯಿಂದ 47 ರೋಗಿಗಳಿಗೆ ಸಂಕಷ್ಟ! ಎಲ್ಲವೂ ಸರಿ ಇದೆ.. ಏನೂ ಸಮಸ್ಯೆ ಇಲ್ಲ. ನಾವು ಪರ್ಫೆಕ್ಟ್. ನಮ್ಮ ವೈದ್ಯಕೀಯ ವ್ಯವಸ್ಥೆ ಪರ್ಫೆಕ್ಟ್ ಎನ್ನುತ್ತಿದ್ದ ಸರ್ಕಾರ ನಿನ್ನೆ ತಲೆತಗ್ಗಿಸುವಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ ರಾತ್ರೋರಾತ್ರಿ 47 ರೋಗಿಗಳನ್ನ ಶಿಫ್ಟ್ ಮಾಡಲಾಯ್ತು. ಬೌರಿಂಗ್, ವಿಕ್ಟೋರಿಯಾ, ರಾಜೀವ್ ಗಾಂಧಿ ಆಸ್ಪತ್ರೆ ಹೀಗೆ, ರೋಗಿಗಳ ಜೀವ ಉಳಿಸಲು ಕಿಮ್ಸ್ ಸಿಬ್ಬಂದಿ ಹರಸಾಹಸ ಪಟ್ಟರು.
ಕಿಮ್ಸ್ ಸಿಬ್ಬಂದಿ ಮುಂಜಾಗ್ರತೆಯಿಂದ ಉಳಿಯಿತು ಜೀವ! ಅಂದ್ಹಾಗೇ ಕಿಮ್ಸ್ ಆಸ್ಪತ್ರೆಗೆ ಆಕ್ಸಿಜನ್ ಸರಿಯಾಗಿ ಪೂರೈಕೆಯಾಗ್ತಿಲ್ಲ. ಎರಡು ದಿನಗಳಿಂದ ಸರಿಯಾಗಿ ಯುನಿವರ್ಸಲ್ ಆಕ್ಸಿಜನ್ ಏಜೆನ್ಸಿ ಆಕ್ಸಿಜನ್ ಪೂರೈಸಿರಲಿಲ್ಲ. ಕೊರೊನಾ ಸಮಯದಲ್ಲಿ ಆಕ್ಸಿಜನ್‌ಗೆ ಬೇಡಿಕೆ ಹೆಚ್ಚಾಗಿದ್ರಿಂದ ಹಲವೆಡೆ ಸಾಕಷ್ಟು ವ್ಯತ್ಯಯ ಉಂಟಾಗಿದೆ. ಈ ಬಗ್ಗೆ ವಿಚಾರವನ್ನ ಆಸ್ಪತ್ರೆಯ ಆಡಳಿತ ಮಂಡಳಿ ಸರ್ಕಾರದ ಗಮನಕ್ಕೆ ತಂದಿತ್ತು. ಆದ್ರೆ, ಸರ್ಕಾರ ಮಾತ್ರ ಎಚ್ಚೆತ್ತುಕೊಂಡಿರಲಿಲ್ಲ. ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಮಾಡಿರಲಿಲ್ಲ. ನಿನ್ನೆ ಸಂಜೆ ಆಕ್ಸಿಜನ್ ಖಾಲಿಯಾಗ್ತಿರೋದನ್ನ ಗಮನಿಸಿದ ಆಡಳಿತ ಮಂಡಳಿ ರೋಗಿಗಳನ್ನ ಮುನ್ನೆಚ್ಚರಿಕೆಯಿಂದ ಇತರೆ ಆಸ್ಪತ್ರೆ ಸ್ಥಳಾಂತರ ಮಾಡ್ತು.
‘ನಿರ್ಲಕ್ಷ್ಯವಹಿಸಿರುವ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಯಾವಾಗ ರೋಗಿಗಳನ್ನ ಹೀಗೆ ರಾತ್ರೋರಾತ್ರಿ ಶಿಫ್ಟ್ ಮಾಡಬೇಕಾಯ್ತೋ, ಸಚಿವರು ಪೈಪೋಟಿ ಮೇಲೆ ಟ್ವೀಟ್ ಮಾಡಿದ್ರು. ಆರೋಗ್ಯ ಸಚಿವ ಶ್ರೀರಾಮುಲು ನಿರ್ಲಕ್ಷ್ಯ ವಹಿಸಿರುವ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದ್ರೆ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಕಿಮ್ಸ್ಗೆ ಭಾರಿ ಗಾತ್ರದ 20 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ರು.
ಇನ್ನು, ಈ ಘಟನೆ ಬಗ್ಗೆ ಕಿಮ್ಸ್ ಆಸ್ಪತ್ರೆ ವೈದ್ಯ ಡಾ.ವಿನೋದ್, ಸಂಜೆ 4 ಗಂಟೆ ಸುಮಾರಿಗೆ ಆಕ್ಸಿಜನ್ ಕೊರತೆ ಎದುರಾಗಿತ್ತು. 47 ಜನ ರೋಗಿಗಳಿಗೆ ಆಕ್ಸಿಜನ್ ಸಮಸ್ಯೆ ಎದುರಾಗಿತ್ತು. ಎಲ್ಲರನ್ನೂ ವಿಕ್ಟೋರಿಯಾ ಹಾಗೂ ಬೌರಿಂಗ್ ಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಸಮಸ್ಯೆ ಪರಿಹಾರವಾಗಿದೆ ಎಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ರು.
ಒಂದಡೆ ಕೊರೊನಾ.. ಮತ್ತೊಂದ್ಕಡೆ ನಾನ್ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ಸಿಗದೆ ಪರದಾಟ. ಇಂಥಾ ಸಮಯದಲ್ಲಿ ಬೆಂಗಳೂರಿನಲ್ಲೇ ಈ ರೀತಿ ಸಮಸ್ಯೆ ಉಂಟಾಗಿರೋದು ಆತಂಕ ಹುಟ್ಟಿಸಿದೆ. ಸಮಸ್ಯೆ ಬಂದಾಗ ಇತ್ಯರ್ಥ ಪಡಿಸೋದಕ್ಕಿಂತ, ಸಮಸ್ಯೆ ಆಗದಂತೆ ನೋಡಿಕೊಳ್ಳೋ ಕಡೆ ಸರ್ಕಾರ ಗಮನ ಹರಿಸಿದ್ರೆ ಒಳಿತು. ಯಾಕಂದ್ರೆ, ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡಾಗ ಬಾವಿ ತೋಡಿದ್ರೆ ಯಾವುದೇ ಪ್ರಯೋಜನವಿಲ್ಲ.