AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲನೇ ಹಂತದ ಪ್ರಾಯೋಗಿಕ ಲಸಿಕೆ ಪಡೆದ ಕಾದಂಬರಿಕಾರ ಡಿ.ಸಿ ಪಾಣಿ

ಚಿತ್ರದುರ್ಗ: ವಿಶ್ವದೆಲ್ಲೆಡೆ ತಾಂಡವವಾಡ್ತಿರುವ ಕೋವಿಡ್19 ಪ್ರಾಯೋಗಿಕ ಲಸಿಕೆಯನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಡಿ.ಸಿ ಪಾಣಿ ಎಂಬ ಕಾದಂಬರಿಕಾರರು ಪಡೆದಿದ್ದಾರೆ. ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಮೊದಲನೇ ಹಂತದ ಪ್ರಾಯೋಗಿಕ ಲಸಿಕೆಯನ್ನು ಪಡೆದಿರುವ ಪಾಣಿಯವರು ಸ್ವಯಂ ಪ್ರೇರಿತರಾಗಿ ಈ ಪ್ರಯೋಗದಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಡಾ,ಪಾರಿತೋಷ್ ವಿ ದೇಸಾಯಿ ರವರು ವಿಶೇಷ ಫಾರ್ಮಜೆಟ್ ಮೆಷಿನ್ ಮೂಲಕ ಪ್ರಾಯೋಗಿಕ ಲಸಿಕೆಯನ್ನು ನೀಡಿದ್ದಾರೆ. ಇದೊಂದು ಅವಿಸ್ಮರಣೀಯ ಘಟನೆಯಾಗಿದ್ದೂ, ಅತ್ಯಂತ ಪರಿಣಾಮಕಾರಿಯಾಗಲಿದೆ. ನಮ್ಮ ದೇಶದಲ್ಲಿ ಲಸಿಕೆ ಉತ್ಪಾದನೆ ಆಗಲಿದೆ. ಶೀಘ್ರದಲ್ಲೇ ಕೋವಿಡ್ ಅಂತ್ಯವಾಗಲಿ‌ […]

ಮೊದಲನೇ ಹಂತದ ಪ್ರಾಯೋಗಿಕ ಲಸಿಕೆ ಪಡೆದ ಕಾದಂಬರಿಕಾರ ಡಿ.ಸಿ ಪಾಣಿ
ಆಯೇಷಾ ಬಾನು
ಆಯೇಷಾ ಬಾನು|

Updated on: Aug 18, 2020 | 7:46 AM

Share

ಚಿತ್ರದುರ್ಗ: ವಿಶ್ವದೆಲ್ಲೆಡೆ ತಾಂಡವವಾಡ್ತಿರುವ ಕೋವಿಡ್19 ಪ್ರಾಯೋಗಿಕ ಲಸಿಕೆಯನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಡಿ.ಸಿ ಪಾಣಿ ಎಂಬ ಕಾದಂಬರಿಕಾರರು ಪಡೆದಿದ್ದಾರೆ.

ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಮೊದಲನೇ ಹಂತದ ಪ್ರಾಯೋಗಿಕ ಲಸಿಕೆಯನ್ನು ಪಡೆದಿರುವ ಪಾಣಿಯವರು ಸ್ವಯಂ ಪ್ರೇರಿತರಾಗಿ ಈ ಪ್ರಯೋಗದಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಡಾ,ಪಾರಿತೋಷ್ ವಿ ದೇಸಾಯಿ ರವರು ವಿಶೇಷ ಫಾರ್ಮಜೆಟ್ ಮೆಷಿನ್ ಮೂಲಕ ಪ್ರಾಯೋಗಿಕ ಲಸಿಕೆಯನ್ನು ನೀಡಿದ್ದಾರೆ.

ಇದೊಂದು ಅವಿಸ್ಮರಣೀಯ ಘಟನೆಯಾಗಿದ್ದೂ, ಅತ್ಯಂತ ಪರಿಣಾಮಕಾರಿಯಾಗಲಿದೆ. ನಮ್ಮ ದೇಶದಲ್ಲಿ ಲಸಿಕೆ ಉತ್ಪಾದನೆ ಆಗಲಿದೆ. ಶೀಘ್ರದಲ್ಲೇ ಕೋವಿಡ್ ಅಂತ್ಯವಾಗಲಿ‌ ಎಂಬ ಸದುದ್ದೇಶದಿಂದ ನಾನು ಈ ಪ್ರಯೋಗಕ್ಕೆ ಒಳಗಾಗಿದ್ದೇನೆ. ಈ ಲಸಿಕೆ ಪಡೆಯುವಾಗ ಯಾವುದೇ ಭಯವಾಗಲಿಲ್ಲ.ಅಲ್ದೇ ಈ‌ ಪ್ರಯೋಗಿಕ ಲಸಿಕೆ ಸಕ್ಸಸ್ ಆದರೆ ನಮ್ಮ ದೇಶಕ್ಕೆ‌ ಬಂದಿರುವ ಕಂಟಕ ದೂರವಾಗಲಿದೆ ಎಂದು‌ ಡಿ.ಸಿ.ಪಾಣಿ ತಿಳಿಸಿದ್ದಾರೆ.

ಐಸಿಎಂಆರ್‌, ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್(ಬಿಬಿಐಎಲ್‌) ಪರಸ್ಪರ ಕೈ ಜೋಡಿಸಿ ಈ ಲಸಿಕೆಯನ್ನು ತಯಾರಿಸಿದ್ದಾರೆ.

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.