AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟ್​ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆ..!

ಟೆಸ್ಟ್ ಕ್ರಿಕೆಟ್​ನಲ್ಲಿ ಎರಡು ಬಾಲ್​ಗಳನ್ನು ಬಳಸಲಾಗುತ್ತದೆ. ಅಂದರೆ ಡೇ ಟೆಸ್ಟ್ ಪಂದ್ಯಗಳನ್ನು ರೆಡ್ ಬಾಲ್​ನಲ್ಲಿ ಆಯೋಜಿಸಿದರೆ, ಡೇ-ನೈಟ್ ಟೆಸ್ಟ್ ಪಂದ್ಯಗಳನ್ನು ಪಿಂಕ್ ಬಾಲ್​ಗಳಲ್ಲಿ ಆಡಲಾಗುತ್ತದೆ. ಇದೀಗ ಡೇ ಟೆಸ್ಟ್ ಪಂದ್ಯದಲ್ಲೇ ಪಿಂಕ್ ಬಾಲ್ ಬಳಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅನುಮತಿ  ನೀಡಲಾಗಿದೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆ..!
ಸಾಂದರ್ಭಿಕ ಚಿತ್ರImage Credit source: BCCI/Google
ಝಾಹಿರ್ ಯೂಸುಫ್
|

Updated on:Jun 03, 2026 | 9:45 PM

Share

ಟೆಸ್ಟ್ ಕ್ರಿಕೆಟ್‌ನಲ್ಲಿ ಮಂದಬೆಳಕಿನ ಕಾರಣದಿಂದ ಪಂದ್ಯಗಳು ಬೇಗನೆ ಸ್ಥಗಿತಗೊಳ್ಳುವುದು ಮತ್ತು ಪ್ರೇಕ್ಷಕರು ನಿರಾಶರಾಗುವುದು ಹಲವು ವರ್ಷಗಳ ಹಳೆಯ ಸಮಸ್ಯೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಐಸಿಸಿ ಇದೀಗ ಮಹತ್ವದ ಹೆಜ್ಜೆಯನ್ನಟ್ಟಿದೆ. ಅದರಂತೆ ಇನ್ಮುಂದೆ ಮಂದ ಬೆಳಕಿನ ವೇಳೆ ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಿಗೆ ಪಿಂಕ್ ಬಾಲ್ ಬಳಸಲು ಅನುಮತಿ ನೀಡಲಾಗಿದೆ.

ಡೇ ಟೆಸ್ಟ್ ಪಂದ್ಯದ ದಿನದಾಟದ ಅಂತ್ಯದ ವೇಳೆ ಮಂದ ಬೆಳಕಿನ ಸಮಸ್ಯೆ ಎದುರಾಗುವುದು ಸಾಮಾನ್ಯ. ಸಂಜೆ ವೇಳೆ ಕತ್ತಲಾರಂಭಿಸಿದರೆ ಇಲ್ಲಾ ಕಾರ್ಮೋಡ ಕವಿದಾಗ ಫ್ಲಡ್​ ಲೈಟ್​ಗಳ ಸಹಾಯದಿಂದ ಪಂದ್ಯ ನಡೆಸಲು ಅವಕಾಶ ಇದ್ದರೂ, ರೆಡ್ ಬಾಲ್​ನೊಂದಿಗೆ​ ಆಡುವುದು ಕಷ್ಟವಾಗುತ್ತಿತ್ತು. ಹೀಗಾಗಿ ಮಂದ ಬೆಳಕಿನ ಕಾರಣ ದಿನದಾಟವನ್ನು ಬೇಗನೆ ಸ್ಥಗಿತಗೊಳಿಸಲಾಗುತ್ತಿತ್ತು.

ಇದೀಗ ಈ ಸಮಸ್ಯೆಗೆ ಪರಿಹಾರವಾಗಿ ಪಿಂಕ್ ಬಳಸಲು ಐಸಿಸಿ ಅನುಮತಿ ನೀಡಿದೆ. ಅದರಂತೆ ಮುಂಬರುವ ದಿನಗಳಲ್ಲಿ ಡೇ ಟೆಸ್ಟ್​ ಪಂದ್ಯದ ದಿನದಾಟದ ಅಂತ್ಯದ ವೇಳೆ ಮಂದ ಬೆಳಕು ಅಥವಾ ಕಾಮೋರ್ಡ ಕವಿದರೆ ಫ್ಲಡ್​ ಲೈಟ್​ಗಳ ನೆರವಿನೊಂದಿಗೆ ಪಿಂಕ್ ಬಾಲ್​ಗಳಲ್ಲಿ ಪಂದ್ಯವನ್ನು ಮುಂದುವರೆಸಲಾಗುತ್ತದೆ.

ಹೊಸ ನಿಯಮದ ವಿಶೇಷಗಳೆನು?

  •  ಪಂದ್ಯದ ಆರಂಭ: ಟೆಸ್ಟ್ ಪಂದ್ಯವು ಎಂದಿನಂತೆ ಸಾಂಪ್ರದಾಯಿಕ ರೆಡ್ ಬಾಲ್​​ನಲ್ಲೇ ಶುರುವಾಗಲಿದೆ.
  • ಬಾಲ್ ಬದಲಾವಣೆ: ಮಂದಬೆಳಕಿನ ಕಾರಣದಿಂದ ಪಂದ್ಯ ಮುಂದುವರೆಸಲು ಸಾಧ್ಯವಾಗದೇ ಇದ್ದಾಗ ಪಿಂಕ್ ಬಾಲ್​ ಬಳಸಲು ಅವಕಾಶ ನೀಡಲಾಗಿದೆ.
  • ಫ್ಲಡ್ ಲೈಟ್​ ಇರಬೇಕು: ಹೀಗೆ ಪಿಂಕ್ ಬಾಲ್ ಬಳಸಬೇಕಿದ್ದರೆ ಸ್ಟೇಡಿಯಂನಲ್ಲಿ ಫ್ಲಡ್​ಲೈಟ್​ಗಳನ್ನು ಆನ್​ ಮಾಡಬೇಕಾಗುತ್ತದೆ. ಅಂದರೆ ಡೇ ಟೆಸ್ಟ್​ ಅನ್ನು ಮುಂದುವರೆಸಲು ಕನಿಷ್ಠ ಬೆಳಕು ಇರಲೇಬೇಕು ಎಂದು ತಿಳಿಸಲಾಗಿದೆ.
  • ಮುಂಚಿತ ಒಪ್ಪಂದ ಕಡ್ಡಾಯ: ರೆಡ್ ಬಾಲ್ ಜೊತೆ ಪಿಂಕ್ ಬಾಲ್ ಬಳಸಬೇಕಿದ್ದರೆ ಸರಣಿ ಆರಂಭಕ್ಕೂ ಮುನ್ನವೇ ಕಣಕ್ಕಿಳಿಯುವ ಎರಡು ತಂಡಗಳ ಕ್ರಿಕೆಟ್​ ಮಂಡಳಿ ಲಿಖಿತ ಒಪ್ಪಿಗೆ ನೀಡಿರಬೇಕು.

ಬಾಲ್ ಬದಲಾವಣೆ ಯಾಕೆ ಮುಖ್ಯ?

ಕೆಂಪು ಚೆಂಡು ಫ್ಲಡ್‌ಲೈಟ್ ಬೆಳಕಿನಲ್ಲಿ ಬ್ಯಾಟರ್‌ಗಳಿಗೆ ಸರಿಯಾಗಿ ಕಾಣಿಸುವುದಿಲ್ಲ. ಇದು ಆಟಗಾರರ ಸುರಕ್ಷತೆಗೂ ಅಪಾಯಕಾರಿ. ಹೀಗಾಗಿಯೇ ಮಂದ ಬೆಳಕಿನ ವೇಳೆ ಪಂದ್ಯವನ್ನು ಸ್ಥಗಿತಗೊಳಿಸಲಾಗುತ್ತದೆ. ಅದೇ ಪಿಂಕ್ ಬಾಲ್​ ಕೃತಕ ಬೆಳಕಿನಲ್ಲಿ (ಫ್ಲಡ್ ಲೈಟ್​) ಸ್ಪಷ್ಟವಾಗಿ ಗೋಚರಿಸುತ್ತದೆ.

ಇಲ್ಲಿ ಪಿಂಕ್ ಬಾಲ್ ಸ್ಪಷ್ಟವಾಗಿ ಕಾಣಿಸುವುದರಿಂದ ಪಂದ್ಯವನ್ನು ನಿಲ್ಲಿಸದೇ ಫ್ಲಡ್​ಲೈಟ್​ನಲ್ಲಿ ದಿನದಾಟವನ್ನು ಪೂರ್ಣಗೊಳಿಸಬಹುದು. ಹೀಗೆ ಪ್ರತಿ ದಿನದಾಟ ಪೂರ್ಣಗೊಂಡರೆ ಫಲಿತಾಂಶ ಮೂಡಿ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಡೇ ಟೆಸ್ಟ್ ಪಂದ್ಯದಲ್ಲಿ ಇನ್ಮುಂದೆ ರೆಡ್ ಬಾಲ್ ಜೊತೆ ಪಿಂಕ್ ಬಾಲ್ ಬಳಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಭುವನೇಶ್ವರ್ ಕುಮಾರ್​ ಯಶಸ್ಸಿನ ಗುಟ್ಟು ರಟ್ಟು ಮಾಡಿದ ಸಚಿನ್!

ಹೊಸ ನಿಯಮ ಜಾರಿಗೆ ಬರುವುದು ಯಾವಾಗ?

ಮೇ 31 ರಂದು ನಡೆದ ಐಸಿಸಿ ಮಂಡಳಿಯ ಸಭೆಯಲ್ಲಿ ಹೊಸ ನಿಯಮಕ್ಕೆ ಅನುಮೋದನೆ ನೀಡಲಾಗಿದೆ. ಹೀಗಾಗಿ ಈ ನಿಯಮವು ಜೂನ್​ನಲ್ಲಿ ನಡೆಯಲಿರುವ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಅಥವಾ ಮುಂಬರುವ ಟೆಸ್ಟ್​ ಪಂದ್ಯಗಳಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ.

Published On - 11:52 am, Tue, 2 June 26

Follow Us
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಬೆಂಗಳೂರಿನಲ್ಲಿ ಹೋಟೆಲ್​ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ಬೆಂಗಳೂರಿನಲ್ಲಿ ಹೋಟೆಲ್​ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್