ಬಡವರ ಕೈ ಸೇರ್ಬೇಕಿದ್ದ ಅಕ್ಕಿ ಅಕ್ರಮ ದಾಸ್ತಾನು, ಸಾವಿರಾರು ಕ್ವಿಂಟಾಲ್ ವಶಕ್ಕೆ

|

Updated on: May 10, 2020 | 8:24 AM

ಕಲಬುರಗಿ: ನಗರದ ಎಪಿಎಂಸಿ ಮಳಿಗೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಬಡ ಜನರಿಗೆ ಉಚಿತವಾಗಿ ಪಡಿತರ ಅಕ್ಕಿಯನ್ನು ನೀಡಬೇಕೆಂದು ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪಡಿತರ ಅಕ್ಕಿಯನ್ನು ಸರ್ಕಾರ ಸರಬರಾಜು ಮಾಡಿದೆ. ಆದರೆ ಕೆಲ ಕಿಡಿಗೇಡಿಗಳು ಬಡವರಿಗೆ ನೀಡಲು ತಂದಿದ್ದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ನೆರೆ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಆಹಾರ ಇಲಾಖೆಯ ಅಧಿಕಾರಿಗಳು ಸಾವಿರಾರು ಕ್ವಿಂಟಾಲ್ ಪಡಿತರ ಜಪ್ತಿ ಮಾಡಿದ್ದಾರೆ. […]

ಬಡವರ ಕೈ ಸೇರ್ಬೇಕಿದ್ದ ಅಕ್ಕಿ ಅಕ್ರಮ ದಾಸ್ತಾನು, ಸಾವಿರಾರು ಕ್ವಿಂಟಾಲ್ ವಶಕ್ಕೆ
Follow us on

ಕಲಬುರಗಿ: ನಗರದ ಎಪಿಎಂಸಿ ಮಳಿಗೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಬಡ ಜನರಿಗೆ ಉಚಿತವಾಗಿ ಪಡಿತರ ಅಕ್ಕಿಯನ್ನು ನೀಡಬೇಕೆಂದು ಸರ್ಕಾರ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಸಾಕಷ್ಟು ಪಡಿತರ ಅಕ್ಕಿಯನ್ನು ಸರ್ಕಾರ ಸರಬರಾಜು ಮಾಡಿದೆ. ಆದರೆ ಕೆಲ ಕಿಡಿಗೇಡಿಗಳು ಬಡವರಿಗೆ ನೀಡಲು ತಂದಿದ್ದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ನೆರೆ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಆಹಾರ ಇಲಾಖೆಯ ಅಧಿಕಾರಿಗಳು ಸಾವಿರಾರು ಕ್ವಿಂಟಾಲ್ ಪಡಿತರ ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 8:24 am, Sun, 10 May 20