ಬೆಂಗಳೂರು: ನಗರದ ಜಯದೇವ ಆಸ್ಪತ್ರೆ ಎಂದರೆ ರಾಜ್ಯದ ಹೃದ್ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂಥ ವೈದ್ಯಕೀಯ ಸಂಸ್ಥೆ. ಸರ್ಕಾರಿ ಆಸ್ಪತ್ರೆಯಾಗಿದ್ರೂ ಇಲ್ಲಿಗೆ ಬರುವ ಪೇಷಂಟ್ಗಳನ್ನ ಯಾವುದೇ ಕುಂದು ಕೊರತೆ ಇಲ್ಲದ ಹಾಗೆ ನೋಡಿಕೊಳ್ಳುತ್ತಾರೆ. ಹಾಗಾಗಿ ಜಯದೇವ ಹೃದ್ರೋಗ ಸಂಸ್ಥೆ ಬಡವರ ಜೊತೆಗೆ ಎಲ್ಲರ ಪಾಲಿಗೆ ಸಂಜೀವಿನಿ ಪರ್ವತವಿದ್ದ ಹಾಗೆ.
ಜಯದೇವ ಆಸ್ಪತ್ರೆಗೆ ಎದುರಾಯ್ತು ಕೊರೊನಾ ಕಂಟಕ
ಆದರೆ, ಇದೇ ಜಯದೇವ ಆಸ್ಪತ್ರೆಗೆ ಕೊರೊನಾ ಕಂಟಕ ಎದುರಾಗಿದೆ. ಆಸ್ಪತ್ರೆಯ ವೈದ್ಯರು ಹಾಗೂ ಕೆಲ ಸಿಬ್ಬಂದಿಗೆ ವೈರಸ್ ವಕ್ಕರಿಸಿದೆ. ಹೀಗಾಗಿ ಆಸ್ಪತ್ರೆಯ OPDಯನ್ನು ಜೂನ್ 29ರ ತನಕ ಬಂದ್ ಮಾಡಲಾಗಿತ್ತು. ಆದರೆ, ಇದೀಗ ಮತ್ತೆ ಕೆಲ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಒಪಿಡಿಯನ್ನು ಜುಲೈ 4ರವರೆಗೂ ಮುಚ್ಚಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಕೇವಲ ತುರ್ತು ಸೇವೆಗಳು ಮಾತ್ರ ಲಭ್ಯವಿರಲಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಸುತ್ತೋಲೆ ಹೊರಡಿಸಿದ್ದಾರೆ.
Published On - 4:01 pm, Sat, 27 June 20