Artificial insemination: ಕೆಲವರು ಶೋಕಿಗೊಸ್ಕರ ಕೃತಕ ಗರ್ಭಧಾರಣೆ ಅವಕಾಶ ದುರುಪಯೋಗ ಪಡಿಸಿಕೊಳ್ತಿದ್ದಾರೆ – ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ವಿಷಾದ

| Updated By: ಸಾಧು ಶ್ರೀನಾಥ್​

Updated on: Jul 08, 2023 | 3:40 PM

ವಿಶ್ವ ಜನಸಂಖ್ಯೆ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಮದುವೆಯೆ ಇಲ್ಲದೆ ಕೆಲವರು ಮಕ್ಕಳನ್ನು ಪಡೆಯುತ್ತಿದ್ದಾರೆ. ಮದುವೆಯಾದ ಕೆಲವೆ ದಿನಗಳಲ್ಲಿ ಕೆಲವರು ಹೆರಿಗೆ ಮಾಡಿಸಿಕೊಳ್ತಿದ್ದಾರೆ. ಮದುವೆಯಾಗಿ ತಾಯಿಯಾದರೆ ದೇಹದ ಸೌದರ್ಯ ಹಾಳಾಗುತ್ತೆ ಅನ್ನುವುದು ತಪ್ಪು ಎಂದು ಅವರು ವ್ಯಾಖ್ಯಾನಿಸಿದ್ದಾರೆ.

Artificial insemination: ಕೆಲವರು ಶೋಕಿಗೊಸ್ಕರ ಕೃತಕ ಗರ್ಭಧಾರಣೆ ಅವಕಾಶ ದುರುಪಯೋಗ ಪಡಿಸಿಕೊಳ್ತಿದ್ದಾರೆ - ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ವಿಷಾದ
ಕೆಲವರು ಶೋಕಿಗೊಸ್ಕರ ಕೃತಕ ಗರ್ಭಧಾರಣೆ ಅವಕಾಶ ದುರುಪಯೋಗ ಪಡಿಸಿಕೊಳ್ತಿದ್ದಾರೆ - ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ವಿಷಾದ
Follow us on

ಚಿಕ್ಕಬಳ್ಳಾಪುರ: ಕೆಲವರ ಶೋಕಿಗೊಸ್ಕರ ಕೃತಕ ಗರ್ಭಧಾರಣೆ (Artificial insemination) ಅವಕಾಶ ದುರುಪಯೋಗ ಆಗ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ (Chintamani) ನಗರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ (Dr MC Sudhakar) ವಿಷಾದ ವ್ಯಕ್ತಪಡಿಸಿದ್ದಾರೆ. ವಿಶ್ವ ಜನಸಂಖ್ಯೆ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಮದುವೆಯೆ ಇಲ್ಲದೆ ಕೆಲವರು ಮಕ್ಕಳನ್ನು ಪಡೆಯುತ್ತಿದ್ದಾರೆ. ಮದುವೆಯಾದ ಕೆಲವೆ ದಿನಗಳಲ್ಲಿ ಕೆಲವರು ಹೆರಿಗೆ ಮಾಡಿಸಿಕೊಳ್ತಿದ್ದಾರೆ. ಮದುವೆಯಾಗಿ ತಾಯಿಯಾದರೆ ದೇಹದ ಸೌದರ್ಯ ಹಾಳಾಗುತ್ತೆ ಅನ್ನುವುದು ತಪ್ಪು ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಗೋಳಿಸುವ ಮುನ್ಸೂಚನೆ ಸಿಕ್ಕಿದೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಫುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಮಾತನಾಡಿದ ಅವರು ಎನ್.ಇ.ಪಿ ಬದಲು ಕೌಶಲ್ಯಾಧರಿತ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡಲಾಗುವುದು. ದೇಶದಲ್ಲಿ ಎಷ್ಟು ರಾಜ್ಯಗಳಲ್ಲಿ ಎನ್.ಇ.ಪಿ ಜಾರಿಗೋಲಿಸಲಾಗಿದೆ. ಇಡಿ ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಎನ್.ಇ.ಪಿ ಜಾರಿ ಆಗಿದೆ. ಬಿಜೆಪಿ ಆಡಳಿತ ಇರುವ ಇನ್ನಿತರ ರಾಜ್ಯಗಳಲ್ಲಿ ಎನ್.ಇ.ಪಿ. ಜಾರಿ ಮಾಡಿಲ್ಲವೆಂದು ಅವರು ಹೇಳಿದರು.

ಎರಡೂವರೆ ಲಕ್ಷ ಉದ್ಯೋಗಗಳು ಖಾಲಿ ಇವೆ, ಹಂತ ಹಂತವಾಗಿ ಭರ್ತಿಗೆ ಕ್ರಮ- ಸುಧಾಕರ್

ರಾಜ್ಯದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಎರಡೂವರೆ ಲಕ್ಷ ಉದ್ಯೋಗಗಳು ಖಾಲಿ ಇವೆ. ಹಂತ ಹಂತವಾಗಿ ಖಾಲಿ ಉದ್ಯೋಗಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ವಿವಿಗಳು ಹಾಗೂ ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಉದ್ಯೋಗಗಳು ಖಾಲಿ ಇವೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಈಗ ಕ್ರಮ ಕೈಗೊಳ್ಳಲಾಗಿದೆ. ಅತಿಥಿ ಉಪನ್ಯಾಸಕರುಗಳ ಮೂಲಕ ಎಲ್ಲಾ ವಿವಿಗಳಲ್ಲಿ ಉಪನ್ಯಾಸ ಮಾಡಿಸಲಾಗ್ತಿದೆ ಎಂದು ತಿಳಿಸಿದರು.

ಚಿಂತಾಮಣಿ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

Published On - 3:20 pm, Sat, 8 July 23