ಫ್ರೆಂಡ್ಸ್ ಡಾಬಾದ ಮಾಲೀಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

|

Updated on: Oct 25, 2020 | 4:01 PM

ಬಾಗಲಕೋಟೆ: ನೇಣು ಬಿಗಿದ ಸ್ಥಿತಿಯಲ್ಲಿ ಡಾಬಾ ಮಾಲೀಕನ ಶವ ಪತ್ತೆಯಾಗಿದೆ. ಜಿಲ್ಲೆಯ ಇಳಕಲ್ ತಾಲೂಕಿನ ಗೊರಬಾಳ ಗ್ರಾಮದ ಬಳಿಯ ಎನ್.ಎಚ್. 50 ಹೆದ್ದಾರಿಗೆ ಹೊಂದಿಕೊಂಳುವ ರಸ್ತೆಯಲ್ಲಿ ಫ್ರೆಂಡ್ಸ್ ಡಾಬಾದಲ್ಲಿ ಮಾಲೀಕ ಶವ ಸಿಕ್ಕಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಭೀಮಸಿ ಚಿತ್ತರಗಿ(22) ಮೃತ ಫ್ರೆಂಡ್ಸ್ ಡಾಬಾ ಮಾಲೀಕ. ಈತನ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಡಾಬಾ ಮುಂದೆ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಇಳಕಲ್ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು […]

ಫ್ರೆಂಡ್ಸ್ ಡಾಬಾದ ಮಾಲೀಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!
Follow us on

ಬಾಗಲಕೋಟೆ: ನೇಣು ಬಿಗಿದ ಸ್ಥಿತಿಯಲ್ಲಿ ಡಾಬಾ ಮಾಲೀಕನ ಶವ ಪತ್ತೆಯಾಗಿದೆ. ಜಿಲ್ಲೆಯ ಇಳಕಲ್ ತಾಲೂಕಿನ ಗೊರಬಾಳ ಗ್ರಾಮದ ಬಳಿಯ ಎನ್.ಎಚ್. 50 ಹೆದ್ದಾರಿಗೆ ಹೊಂದಿಕೊಂಳುವ ರಸ್ತೆಯಲ್ಲಿ ಫ್ರೆಂಡ್ಸ್ ಡಾಬಾದಲ್ಲಿ ಮಾಲೀಕ ಶವ ಸಿಕ್ಕಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಭೀಮಸಿ ಚಿತ್ತರಗಿ(22) ಮೃತ ಫ್ರೆಂಡ್ಸ್ ಡಾಬಾ ಮಾಲೀಕ. ಈತನ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಡಾಬಾ ಮುಂದೆ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಇಳಕಲ್ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಖಿನ್ನತೆಯೋ, ಆತ್ಮಹತ್ಯೆಯೋ ಅಥವಾ ಕೊಲೆ ಮಾಡಿ ಆತ್ಮಹತ್ಯೆಯಂತೆ ಬಿಂಬಿಸಲಾಗಿದೆಯೋ ಎಂಬ ಬಗ್ಗೆ ತನಿಖೆ ಶುರುವಾಗಿದೆ.