ಹೊಸಕೋಟೆ ಅಂದ್ರೆ ಹೊಡೆದಾಟ ಅಲ್ಲ, MTB ಬಂದ್ಮೇಲೆ ಎಲ್ಲ ಶಾಂತ: ಶೋಭಾ

|

Updated on: Nov 27, 2019 | 3:10 PM

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ಕ್ಷೇತ್ರಕ್ಕೆ ನನ್ನನ್ನು ಕರೆತಂದು ನಿಲ್ಲಿಸಿದ್ದು ಎಸ್.ಎಂ.ಕೃಷ್ಣ. ಕಾಂಗ್ರೆಸ್​ನಿಂದ ಸ್ಪರ್ಧಿಸಿ ಮುನೇಗೌಡ 3 ಬಾರಿ ಸೋತಿದ್ದರು, ಅದಕ್ಕೆ ಗತಿಯಿಲ್ಲದೆ ಈ ಮಿನಿ ಬಿಹಾರಕ್ಕೆ ತಂದು ನನ್ನನ್ನು ನಿಲ್ಲಿಸಿದ್ದರು. ಈ ಭಾಗದಲ್ಲಿ ನನ್ನಿಂದಾಗಿ ಕಾಂಗ್ರೆಸ್​ಗೆ ವರ್ಚಸ್ಸು ಹೆಚ್ಚಾಯ್ತು ಎಂದು ನಿನ್ನೆಯಷ್ಟೇ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದರು. ಎಂಟಿಬಿ ಬಂದ ಬಳಿಕ ಇಲ್ಲಿ ಶಾಂತಿ ನೆಲೆಸಿದೆ: ಇದೀಗ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, 10 ವರ್ಷದ ಹಿಂದೆ ಹೊಸಕೋಟೆ ಅಂದ್ರೆ ಹೊಡೆದಾಟ […]

ಹೊಸಕೋಟೆ ಅಂದ್ರೆ ಹೊಡೆದಾಟ ಅಲ್ಲ, MTB ಬಂದ್ಮೇಲೆ ಎಲ್ಲ ಶಾಂತ: ಶೋಭಾ
Follow us on

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ಕ್ಷೇತ್ರಕ್ಕೆ ನನ್ನನ್ನು ಕರೆತಂದು ನಿಲ್ಲಿಸಿದ್ದು ಎಸ್.ಎಂ.ಕೃಷ್ಣ. ಕಾಂಗ್ರೆಸ್​ನಿಂದ ಸ್ಪರ್ಧಿಸಿ ಮುನೇಗೌಡ 3 ಬಾರಿ ಸೋತಿದ್ದರು, ಅದಕ್ಕೆ ಗತಿಯಿಲ್ಲದೆ ಈ ಮಿನಿ ಬಿಹಾರಕ್ಕೆ ತಂದು ನನ್ನನ್ನು ನಿಲ್ಲಿಸಿದ್ದರು. ಈ ಭಾಗದಲ್ಲಿ ನನ್ನಿಂದಾಗಿ ಕಾಂಗ್ರೆಸ್​ಗೆ ವರ್ಚಸ್ಸು ಹೆಚ್ಚಾಯ್ತು ಎಂದು ನಿನ್ನೆಯಷ್ಟೇ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದರು.

ಎಂಟಿಬಿ ಬಂದ ಬಳಿಕ ಇಲ್ಲಿ ಶಾಂತಿ ನೆಲೆಸಿದೆ:
ಇದೀಗ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, 10 ವರ್ಷದ ಹಿಂದೆ ಹೊಸಕೋಟೆ ಅಂದ್ರೆ ಹೊಡೆದಾಟ ಎಂದು ಹೇಳುತ್ತಿದ್ದರು. ಈ ಕ್ಷೇತ್ರಕ್ಕೆ ಎಂಟಿಬಿ ನಾಗರಾಜ್ ಬಂದ ಬಳಿಕ ಇಲ್ಲಿ ಶಾಂತಿ ನೆಲೆಸಿದೆ. ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ಅಭಿವೃದ್ದಿ ಕೆಲಸ ಮಾಡಿದ್ದಾರೆ. ಕೆರೆಗಳಿಗೆ ನೀರು ತುಂಬಿಸೋ ಕಾರ್ಯದ ಶಿಲಾನ್ಯಾಸಕ್ಕೆ ಸಿಎಂ ಬಂದಿದ್ರು ಎಂದರು.


ಶರತ್​ಗೆ ಏನು ಅನ್ಯಾಯ ಮಾಡಿದೆವು?
ಸರ್ಕಾರಕ್ಕೆ ಸೆಡ್ಡು ಹೊಡೆದು ಮುಂಬೈನಲ್ಲಿ ರಾಜೀನಾಮೆ ಕೊಟ್ಟ ಶಾಸಕರು ಕೂತಿದ್ರು. ಯಡಿಯೂರಪ್ಪ ಸಿಎಂ ಆಗಲಿ ಎಂದೇ ಶಾಸಕರು ರಾಜೆನಾಮೆ ಕೊಟ್ಟಿದ್ರು. ಜನತಾದಳದಿಂದ ಬಂದ ಬಿ.ಎನ್.ಬಚ್ಚೇಗೌಡರನ್ನ ಗೆಲ್ಲಿಸಿದೆವು. ಮೊದಲ ಬಾರಿಗೆ ಅವರಿಗೆ ಸಚಿವ ಸ್ಥಾನ ನೀಡಲಾಯಿತು. ಆದ್ರೆ ಶರತ್ ಬಚ್ಚೇಗೌಡರಿಗೆ ಏನು ಅನ್ಯಾಯ ಮಾಡಿದೆವು. ಶರತ್ ಬೆಂಬಲಿಗರು ಕಾಂಪೌಂಡ್ ಮೇಲೆ ಕುಳಿತಿದ್ದಾರೆ. ಕಾಂಗ್ರೆಸ್‌ನವರು ಎಲ್ಲೋ ದೂರದಲ್ಲಿ ನಿಂತಿದ್ದಾರೆ. ಬಿಜೆಪಿ ಜೋಶ್ ನೋಡಿಕೊಂಡು ಬರಲು ಅವರು ಕಳುಹಿಸಿರಬೇಕು ಎಂದು ಶೋಭಾ ಕರಂದ್ಲಾಜೆ ಟೀಕಿಸಿದರು.

Published On - 2:56 pm, Wed, 27 November 19