ಅಪಘಾತಕ್ಕೆ ಪರಿಹಾರ ಇಲ್ಲ! ರಸ್ತೆ ಗುಂಡಿಗೆ ಅವಕಾಶವಿದೆಯೇ?: BBMPಗೆ ಹೈಕೋರ್ಟ್ ತರಾಟೆ
ಬೆಂಗಳೂರು: ರಸ್ತೆಗುಂಡಿಗಳಿಂದಾದ ಅಪಘಾತಕ್ಕೆ ಪರಿಹಾರ ನೀಡುವ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠ ಇಂದು ಪಿಐಎಲ್ ವಿಚಾರಣೆ ನಡೆಸಿತು. ಗುಂಡಿಗಳಿಂದಾದ ಅಪಘಾತಕ್ಕೆ ಪರಿಹಾರ ನೀಡಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ವಕೀಲರು ಹೇಳಿದರು. ಇದಕ್ಕೆ ಸಿಜೆ ಅಭಯ್ ಎಸ್.ಒಕಾ ರಸ್ತೆ ಗುಂಡಿ, ಅಕ್ರಮ ಕಟ್ಟಡಕ್ಕೆ ಅವಕಾಶವಿದೆಯೇ? ಎಂದು ಬಿಬಿಎಂಪಿ ಪರ ವಕೀಲರನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡರು. ಹೈಕೋರ್ಟ್ ಆದೇಶ ಪಾಲಿಸಲು ಬಿಬಿಎಂಪಿ ಹಿಂದೇಟು ಹಾಕಿದೆ. ಈ ಕುರಿತು ನಿರ್ಣಯ ತೆಗೆದುಕೊಳ್ಳಲು ಹೈಕೋರ್ಟ್ ಆದೇಶವನ್ನೇ ಕೌನ್ಸಿಲ್ ಮುಂದಿಡಲು ನಿರ್ಧರಿಸಿದೆ. ಈ […]
ಬೆಂಗಳೂರು: ರಸ್ತೆಗುಂಡಿಗಳಿಂದಾದ ಅಪಘಾತಕ್ಕೆ ಪರಿಹಾರ ನೀಡುವ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠ ಇಂದು ಪಿಐಎಲ್ ವಿಚಾರಣೆ ನಡೆಸಿತು. ಗುಂಡಿಗಳಿಂದಾದ ಅಪಘಾತಕ್ಕೆ ಪರಿಹಾರ ನೀಡಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ವಕೀಲರು ಹೇಳಿದರು. ಇದಕ್ಕೆ ಸಿಜೆ ಅಭಯ್ ಎಸ್.ಒಕಾ ರಸ್ತೆ ಗುಂಡಿ, ಅಕ್ರಮ ಕಟ್ಟಡಕ್ಕೆ ಅವಕಾಶವಿದೆಯೇ? ಎಂದು ಬಿಬಿಎಂಪಿ ಪರ ವಕೀಲರನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡರು.
ಹೈಕೋರ್ಟ್ ಆದೇಶ ಪಾಲಿಸಲು ಬಿಬಿಎಂಪಿ ಹಿಂದೇಟು ಹಾಕಿದೆ. ಈ ಕುರಿತು ನಿರ್ಣಯ ತೆಗೆದುಕೊಳ್ಳಲು ಹೈಕೋರ್ಟ್ ಆದೇಶವನ್ನೇ ಕೌನ್ಸಿಲ್ ಮುಂದಿಡಲು ನಿರ್ಧರಿಸಿದೆ. ಈ ಸಂಬಂಧ ಬಿಬಿಎಂಪಿ ಸಲ್ಲಿಸಿರುವ ಪ್ರಮಾಣಪತ್ರಕ್ಕೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬಿಬಿಎಂಪಿ ಮತ್ತು ರಾಜಕಾರಣಿಗಳು ಕಾನೂನಿಗಿಂತ ಮೇಲಿನವರಲ್ಲ. ನ್ಯಾಯಾಲಯದ ಆದೇಶದಲ್ಲಿ ಯಾರ ಹಸ್ತಕ್ಷೇಪವನ್ನೂ ಸಹಿಸುವುದಿಲ್ಲ. ಹೈಕೋರ್ಟ್ ಆದೇಶವನ್ನು ಕೌನ್ಸಿಲ್ ಮುಂದಿಡಲು ನಿರ್ಧರಿಸಿದ್ಯಾರು? ಇದು ಮೇಯರ್, ಉಪಮೇಯರ್, ವಿಪಕ್ಷ ನಾಯಕರ ನಿರ್ಧಾರವೇ? ಎಂದು ಹೈಕೋರ್ಟ್ ಝಾಡಿಸಿದೆ.
ಕೋರ್ಟ್ ಆದೇಶವನ್ನು ನಾಳೆ ಕೌನ್ಸಿಲ್ ಮುಂದಿಡಲು ನಿರ್ಧರಿಸಿದವರ ಹೆಸರುಗಳನ್ನು ಸಲ್ಲಿಸಲು ಹೈಕೋರ್ಟ್ ಸೂಚಿಸಿದೆ. ಜೊತೆಗೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದೆ. ಈ ಮಧ್ಯೆ, ಪಿಐಎಲ್ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ.
Published On - 5:15 pm, Wed, 27 November 19