ಬೀದರ್ನಲ್ಲಿ ಕಲ್ಲುಗಣಿಗಾರಿಕೆ ಅಕ್ರಮ: ಬಂಡೆಯಂತೆ ಕೈಕಟ್ಟಿ ಕುಳಿತ ಅಧಿಕಾರಿಗಳು!
ಬೀದರ್: ಭಾಲ್ಕಿ ತಾಲೂಕಿನಲ್ಲಿ ಕೆಂಪು ಕಲ್ಲಿನ ಕ್ಯಾರಿಗಳು ಅಕ್ರಮದ ಸದ್ದು ಮಾಡ್ತಿವೆ. ಚಟ್ನಳ್ಳಿ, ಅಣದೂರು ವಾಡಿ, ಸಗೋಳ್ಳಗಿ ತಾಂಡಾ ಹಾಗೂ ಖಾನಾಪುರ ಸುತ್ತಮುತ್ತಲೂ ಅಕ್ರಮ ಗಣಿಗಾರಿಕೆ ಜೋರಾಗಿ ನಡೀತಿದೆ. ಅಧಿಕಾರಿಗಳು, ರಾಜಕೀಯ ಮುಖಂಡರ ಬೆನ್ನಿಗಿಟ್ಟುಕೊಂಡು ದೊಡ್ಡ ದೊಡ್ಡ ಯಂತ್ರಗಳಿಂದ ಕಲ್ಲು ಕೊರೆದು ಸಾಗಿಸ್ತಿದ್ದಾರೆ. ಸರ್ಕಾರದ ನೀತಿ ನಿಯಮಗಳನ್ನೂ ಲೆಕ್ಕಿಸದೆ ಎಲ್ಲೆಂದರಲ್ಲಿ ರಾಜಾರೋಷವಾಗಿ, ಮನಬಂದಂತೆ ಭೂತಾಯಿಯನ್ನ ನಾಶ ಮಾಡ್ತಿದ್ದಾರೆ. ಇಷ್ಟೆಲ್ಲಾ ಆಗ್ತಿದ್ರೂ ಪೊಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳು ಕೇಳಿ […]
ಬೀದರ್: ಭಾಲ್ಕಿ ತಾಲೂಕಿನಲ್ಲಿ ಕೆಂಪು ಕಲ್ಲಿನ ಕ್ಯಾರಿಗಳು ಅಕ್ರಮದ ಸದ್ದು ಮಾಡ್ತಿವೆ. ಚಟ್ನಳ್ಳಿ, ಅಣದೂರು ವಾಡಿ, ಸಗೋಳ್ಳಗಿ ತಾಂಡಾ ಹಾಗೂ ಖಾನಾಪುರ ಸುತ್ತಮುತ್ತಲೂ ಅಕ್ರಮ ಗಣಿಗಾರಿಕೆ ಜೋರಾಗಿ ನಡೀತಿದೆ. ಅಧಿಕಾರಿಗಳು, ರಾಜಕೀಯ ಮುಖಂಡರ ಬೆನ್ನಿಗಿಟ್ಟುಕೊಂಡು ದೊಡ್ಡ ದೊಡ್ಡ ಯಂತ್ರಗಳಿಂದ ಕಲ್ಲು ಕೊರೆದು ಸಾಗಿಸ್ತಿದ್ದಾರೆ.
ಸರ್ಕಾರದ ನೀತಿ ನಿಯಮಗಳನ್ನೂ ಲೆಕ್ಕಿಸದೆ ಎಲ್ಲೆಂದರಲ್ಲಿ ರಾಜಾರೋಷವಾಗಿ, ಮನಬಂದಂತೆ ಭೂತಾಯಿಯನ್ನ ನಾಶ ಮಾಡ್ತಿದ್ದಾರೆ. ಇಷ್ಟೆಲ್ಲಾ ಆಗ್ತಿದ್ರೂ ಪೊಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಫಲವತ್ತಾದ ಜಮೀನಲ್ಲಿ, ಪ್ರವಾಸಿ ಸ್ಥಳ, ಊರು ಹಾಗೂ ರಸ್ತೆ ಅಕ್ಕಪಕ್ಕದಲ್ಲಿ ಗಣಿಗಾರಿಕೆ ನಡೆಸದಂತೆ ಕಾನೂನಿದೆ. ಆದ್ರೆ, ದಂಧೆಕೋರರು ಯಾವುದಕ್ಕೂ ಡೋಂಟ್ಕೇರ್ ಎನ್ನದೇ ತಮ್ಮ ಆಟ ಮುಂದುವರಿಸಿದ್ದಾರೆ. ಜನರು ಯಾವಾಗ ಆಕ್ರೋಶ ಹೊರಹಾಕಿದರೂ ಖದೀಮರು ಒಂದೆರಡು ದಿನ ಕಲ್ಲು ಗಣಿಕಾರಿಕೆ ನಿಲ್ಲಿಸಿ ಮತ್ತೆ ತಮ್ಮ ಕೆಲಸ ಆರಂಭಿಸುತ್ತಿದ್ದಾರೆ.
ಇನ್ನು ಗಣಿಗಾರಿಕೆ ನಡೆಸ್ತಿರೋರಿಗೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ದಂಡ ವಿಧಿಸೋದು ಬಿಟ್ರೆ ಕಠಿಣ ಕ್ರಮ ಕೈಗೊಂಡಿಲ್ಲ. ಇದ್ರಿಂದ ಸುಂದರ ಪರಿಸರದ ಜೊತೆಗೆ, ಗಣಿಗಾರಿಕೆಯಿಂದ ಮೇಲೆದ್ದು ಬರ್ತಿರೋ ಧೂಳು ಜನರಿಗೆ ಸಮಸ್ಯೆ ಉಂಟುಮಾಡಿದೆ. ಈ ಬಗ್ಗೆ ಅಧಿಕಾರಿಗಳು ಗಣಿಗಾರಿಕೆ ಬಗ್ಗೆ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ತೀನಿ ಎಂದಿದ್ದಾರೆ.