ಎಚ್ಎಂಟಿ ಸರ್ಕಲ್ ಬಳಿ ಕಾಲಿಗೆ ಚೈನ್ ಬಿಗಿದಿದ್ದ ಮಾನಸಿಕ‌ ಅಸ್ವಸ್ಥನ ರಂಪಾಟ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿಯಿಂದಾಗಿ ಜನ ಮಾಸ್ಕ್ ಧರಿಸದವರ ಬಳಿ ನಿಲ್ಲಲು ಸಹ ಭಯಪಡುತ್ತಿದ್ದಾರೆ. ಅಂತಹದ್ದರಲ್ಲಿ ಇಂದು ಮಾನಸಿಕ ಅಸ್ವಸ್ಥನೊಬ್ಬ ಮಾಸ್ಕ್ ಧರಿಸದೆ ರಸ್ತೆಯಲ್ಲಿ ಓಡಾಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಾಲಹಳ್ಳಿಯ ಎಚ್ಎಂಟಿ ಸರ್ಕಲ್ ಬಳಿ ಕಾಲಿಗೆ ಚೈನ್ ಇಂದ ಬಂಧಿತನಾಗಿದ್ದ ಮಾನಸಿಕ ಅಸ್ವಸ್ಥನೊಬ್ಬ ಮಾಸ್ಕ್ ಧರಿಸದೆ ರಸ್ತೆಯ ತುಂಬಾ ಓಡಾಡಿದ್ದಾನೆ. ಇದರಿಂದ ತೀವ್ರ ಆಘಾತಗೊಂಡ ಸಾರ್ವಜನಿಕರು ಮಾನಸಿಕ ಅಸ್ವಸ್ಥನಿಂದ ತಪ್ಪಿಸಿಕೊಳ್ಳಲು ದೂರ ಓಡಿದ್ದಾರೆ. ಕೂಡಲೇ ಸ್ಥಳೀಯರು ಸಿವಿಲ್ ಡಿಫೆನ್ಸ್ ಗೆ ಮಾಹಿತಿ […]

ಎಚ್ಎಂಟಿ ಸರ್ಕಲ್ ಬಳಿ ಕಾಲಿಗೆ ಚೈನ್ ಬಿಗಿದಿದ್ದ ಮಾನಸಿಕ‌ ಅಸ್ವಸ್ಥನ ರಂಪಾಟ
ಸಾಧು ಶ್ರೀನಾಥ್​

Updated on: Aug 01, 2020 | 4:30 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿಯಿಂದಾಗಿ ಜನ ಮಾಸ್ಕ್ ಧರಿಸದವರ ಬಳಿ ನಿಲ್ಲಲು ಸಹ ಭಯಪಡುತ್ತಿದ್ದಾರೆ. ಅಂತಹದ್ದರಲ್ಲಿ ಇಂದು ಮಾನಸಿಕ ಅಸ್ವಸ್ಥನೊಬ್ಬ ಮಾಸ್ಕ್ ಧರಿಸದೆ ರಸ್ತೆಯಲ್ಲಿ ಓಡಾಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜಾಲಹಳ್ಳಿಯ ಎಚ್ಎಂಟಿ ಸರ್ಕಲ್ ಬಳಿ ಕಾಲಿಗೆ ಚೈನ್ ಇಂದ ಬಂಧಿತನಾಗಿದ್ದ ಮಾನಸಿಕ ಅಸ್ವಸ್ಥನೊಬ್ಬ ಮಾಸ್ಕ್ ಧರಿಸದೆ ರಸ್ತೆಯ ತುಂಬಾ ಓಡಾಡಿದ್ದಾನೆ. ಇದರಿಂದ ತೀವ್ರ ಆಘಾತಗೊಂಡ ಸಾರ್ವಜನಿಕರು ಮಾನಸಿಕ ಅಸ್ವಸ್ಥನಿಂದ ತಪ್ಪಿಸಿಕೊಳ್ಳಲು ದೂರ ಓಡಿದ್ದಾರೆ.

ಕೂಡಲೇ ಸ್ಥಳೀಯರು ಸಿವಿಲ್ ಡಿಫೆನ್ಸ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಮಾನಸಿಕ ಅಸ್ವಸ್ಥನನ್ನು ಜಾಲಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಮಾನಸಿಕ ಅಸ್ವಸ್ಥ ಜಾಲಹಳ್ಳಿ ಪೊಲೀಸರ ವಶದಲ್ಲಿದ್ದಾನೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us