ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕರಾವಳಿ ಕೆಂಡವಾಗಲು ಗಲಭೆಕೋರರಿಂದ ನಡೆದಿತ್ತಾ ಮೊದಲೇ ಪ್ಲ್ಯಾನ್..? ಎಂಬ ಅನುಮಾನ ಕಾಡುತ್ತಿದೆ. ಅಲ್ಲದೆ ಪ್ರತಿಭಟನೆಯಲ್ಲಿ ಇನ್ನಷ್ಟು ಕಿಚ್ಚು ಹಚ್ಚಲು ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರತಿಭಟನೆ ವೇಳೆ ಪೊಲೀಸರ ಶಸ್ತ್ರಾಗಾರವನ್ನೇ ದೋಚಿ ದಾಳಿ ನಡೆಸಲು ಕಿಡಿಗೇಡಿಗಳು ಭಯಾನಕ ಸ್ಕೆಚ್ ಹಾಕಿದ್ರು ಎನ್ನಲಾಗಿದೆ. ಒಂದು ವೇಳೆ ಗಲಭೆಕೋರರ ಕೈಗೆ ಬಂದೂಕು, ಮದ್ದು-ಗುಂಡು ಸಿಕ್ಕಿದ್ರೆ ಅಂದು ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು. ಅಲ್ಲದೆ ಖಾಲಿ ರಸ್ತೆಗೆ ಗೂಡ್ಸ್ ಆಟೋದಲ್ಲಿ ಕಲ್ಲಿನ ಮೂಟೆಗಳನ್ನು ತಂದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ದಾಳಿ ನಡೆಸಿದ್ದಾರೆ. ದಾಳಿ ನಡೆಸಿರುವ ದುಷ್ಕರ್ಮಿಗಳು ಯಾರೆಂದು ಪೊಲೀಸರ ತನಿಖೆಯಿಂದಷ್ಟೇ ಬಯಲಾಗಬೇಕಿದೆ.
Published On - 12:26 pm, Tue, 24 December 19