ಏರುತ್ತಲೇ ಇದೆ ತೈಲ ಬೆಲೆ​: ಮುಂದಿನ ವಾರಕ್ಕೆ ಬೆಂಗಳೂರಲ್ಲಿ ರೂ 90 ಗಡಿ ದಾಟಲಿದೆ ಪೆಟ್ರೋಲ್ ದರ!

ಶುಕ್ರವಾರ ಲೀಟರ್​ ಪೆಟ್ರೋಲ್​ ದರ 25 ಪೈಸೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಇಂದು ಕೂಡ 25 ಪೈಸೆ ತುಟ್ಟಿ ಮಾಡಿದೆ. ಈ ಮೂಲಕ ಬೆಂಗಳೂರಲ್ಲಿ ಲೀಟರ್​ ಪೆಟ್ರೋಲ್​ಗೆ 88.58 ರೂಪಾಯಿ ಆಗಿದೆ.

ಏರುತ್ತಲೇ ಇದೆ ತೈಲ ಬೆಲೆ​: ಮುಂದಿನ ವಾರಕ್ಕೆ ಬೆಂಗಳೂರಲ್ಲಿ ರೂ 90 ಗಡಿ ದಾಟಲಿದೆ ಪೆಟ್ರೋಲ್ ದರ!
ಸಾಂದರ್ಭಿಕ ಚಿತ್ರ
Edited By: ಸಾಧು ಶ್ರೀನಾಥ್​

Updated on: Jan 23, 2021 | 1:39 PM

ಬೆಂಗಳೂರು: ಭಾರತದಲ್ಲಿ ಕೊರೊನಾ ವೈರಸ್​ ಕಾಣಿಸಿಕೊಂಡ ನಂತರದಲ್ಲಿ ಲಾಕ್​ಡೌನ್​​ ಘೋಷಣೆ ಮಾಡಲಾಗಿತ್ತು. ಈ ಅವಧಿಯಲ್ಲಿ ಪೆಟ್ರೋಲ್​ ದರ ಯಾವುದೇ ಬದಲಾವಣೆ ಕಾಣದೆ ತಟಸ್ಥವಾಗಿತ್ತು. ಯಾವಾಗ ಲಾಕ್​ಡೌನ್​ ಪೂರ್ಣಗೊಂಡಿತ್ತೋ ಅಂದಿನಿಂದ ತೈಲ ಬೆಲೆ ಏರಿಕೆಯ ಹಾದಿ ಹಿಡಿದಿದೆ. ಕಳೆದ 9 ತಿಂಗಳಲ್ಲಿ ಪೆಟ್ರೋಲ್​ ದರ ಲೀಟರ್​ಗೆ 15 ರೂಪಾಯಿ ಏರಿಕೆ ಕಂಡಿದೆ. ಅಲ್ಲದೆ, ಬೆಂಗಳೂರಲ್ಲಿ ಪೆಟ್ರೋಲ್​ ದರ 90ರ ಗಡಿ ಸಮೀಪಿಸಿದೆ.

ಶುಕ್ರವಾರ ಲೀಟರ್​ ಪೆಟ್ರೋಲ್​ ದರ 25 ಪೈಸೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಇಂದು ಕೂಡ 25 ಪೈಸೆ ತುಟ್ಟಿ ಮಾಡಿದೆ. ಈ ಮೂಲಕ ಬೆಂಗಳೂರಲ್ಲಿ ಲೀಟರ್​ ಪೆಟ್ರೋಲ್​ಗೆ 88.58 ರೂಪಾಯಿ ಆಗಿದೆ. ಇನ್ನು ಒಂದೂವರೆ ರೂಪಾಯಿ ಏರಿಕೆ ಆದರೆ ಪೆಟ್ರೋಲ್​ ದರ 90ರ ಗಡಿ ದಾಟಲಿದೆ. ಡೀಸೆಲ್​ ದರ ಕೂಡ 25 ಪೈಸೆ ಏರಿಕೆ ಕಂಡಿದ್ದು, 80.45 ರೂಪಾಯಿ ಆಗಿದೆ.

ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್​ ದರಗಳಲ್ಲಿ ವ್ಯತ್ಯಾಸವಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಪೆಟ್ರೊಲ್​ ದರ 90 ರೂಪಾಯಿ ದಾಟಿದೆ. ಕಚ್ಚಾ ತೈಲ ದರ ಕಡಿಮೆ ಇದ್ದರೂ ಕೇಂದ್ರ ಸರ್ಕಾರ ದೊಡ್ಡ ಮಟ್ಟದಲ್ಲಿ ತೆರಿಗೆ ಹಾಕುತ್ತಿದೆ. ಹೀಗಾಗಿ, ಪೆಟ್ರೋಲ್​ ದರ ಇಷ್ಟು ದೊಡ್ಡ ಮಟ್ಟಕ್ಕೆ ಏರಿದೆ.

ಮುಂಬೈನಲ್ಲಿ ಪೆಟ್ರೋಲ್​ ಬೆಲೆ 92 ರೂಪಾಯಿ!: ಕರ್ನಾಟಕದಲ್ಲಿ ನಾಳೆ ಎಷ್ಟಾಗಲಿದೆ ದರ?

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us