11 ಕಿ.ಮೀ ದೂರದಲ್ಲಿದ್ದ ಆರೋಪಿಯನ್ನ ವಾಸನೆಯಲ್ಲೇ ಕಂಡು ಹಿಡಿದ ಶ್ವಾನಕ್ಕೆ ಸನ್ಮಾನ

| Updated By: ಸಾಧು ಶ್ರೀನಾಥ್​

Updated on: Aug 15, 2020 | 3:56 PM

ದಾವಣಗೆರೆ: ಸೂಳೆಕೆರೆ ಶೂಟ್ ಔಟ್ ಪ್ರಕರಣವನ್ನ ಯಶಸ್ವಿಯಾಗಿ ಭೇದಿಸಲು ನೆರವಾದ ಪೊಲೀಸ್ ಶ್ವಾನಕ್ಕೆ ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇತ್ತೀಚಿಗೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಬಳಿ ಶೂಟ್ ಔಟ್ ಪ್ರಕರಣವೊಂದರಲ್ಲಿ ಯುವಕನ ಹತ್ಯೆ ಆಗಿತ್ತು. ಈ ಸಂದರ್ಭದಲ್ಲಿ ತನಿಖೆಗೆ ಬಂದಿದ್ದ ಪೊಲೀಸ್​ ಶ್ವಾನ ತುಂಗಾ ಬರೋಬ್ಬರಿ 11 ಕಿಲೋಮೀಟರ್ ದೂರ ಕ್ರಮಿಸಿ ವಾಸನೆಯಲ್ಲೇ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಪ್ರಕರಣ ಭೇದಿಸಲು ಸಹಕಾರಿಯಾದ ಶ್ವಾನ ತುಂಗಾಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ […]

11 ಕಿ.ಮೀ ದೂರದಲ್ಲಿದ್ದ ಆರೋಪಿಯನ್ನ ವಾಸನೆಯಲ್ಲೇ ಕಂಡು ಹಿಡಿದ ಶ್ವಾನಕ್ಕೆ ಸನ್ಮಾನ
Follow us on

ದಾವಣಗೆರೆ: ಸೂಳೆಕೆರೆ ಶೂಟ್ ಔಟ್ ಪ್ರಕರಣವನ್ನ ಯಶಸ್ವಿಯಾಗಿ ಭೇದಿಸಲು ನೆರವಾದ ಪೊಲೀಸ್ ಶ್ವಾನಕ್ಕೆ ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಇತ್ತೀಚಿಗೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಬಳಿ ಶೂಟ್ ಔಟ್ ಪ್ರಕರಣವೊಂದರಲ್ಲಿ ಯುವಕನ ಹತ್ಯೆ ಆಗಿತ್ತು. ಈ ಸಂದರ್ಭದಲ್ಲಿ ತನಿಖೆಗೆ ಬಂದಿದ್ದ ಪೊಲೀಸ್​ ಶ್ವಾನ ತುಂಗಾ ಬರೋಬ್ಬರಿ 11 ಕಿಲೋಮೀಟರ್ ದೂರ ಕ್ರಮಿಸಿ ವಾಸನೆಯಲ್ಲೇ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು.

ಪ್ರಕರಣ ಭೇದಿಸಲು ಸಹಕಾರಿಯಾದ ಶ್ವಾನ ತುಂಗಾಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸನ್ಮಾನ ಮಾಡುವ ಜೊತೆಗೆ ಶ್ವಾನದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Published On - 3:11 pm, Sat, 15 August 20