ಪೊಲೀಸ್‌ ಫೈರಿಂಗ್‌ನಲ್ಲಿ ಮೃತನಾದ ಮೂರನೇ ವ್ಯಕ್ತಿಯ ಗುರುತು ಪತ್ತೆ

ಬೆಂಗಳೂರು: ಬೆಂಗಳೂರಿನ ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಸಾವನ್ನಪ್ಪಿದ ಮತ್ತೋರ್ವ ವ್ಯಕ್ತಿಯ ಗುರುತು‌ ಪತ್ತೆಯಾಗಿದೆ. ಇದುವರೆಗೆ ಕೇವಲ ಇಬ್ಬರು ವ್ಯಕ್ತಿಗಳ ಗುರುತು ಮಾತ್ರ ಪತ್ತಯಾಗಿತ್ತು. ಈಗ ಮೂರನೇ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆತನನ್ನು 24ವರ್ಷದ ಶೇಖ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ನಾಗವಾರದಲ್ಲಿ ಆಟೋ ಓಡಿಸಿಕೊಂಡಿದ್ದ ಶೇಖ್ ಸಿದ್ದಿಕಿ ಸ್ನೇಹಿತರ ಜೊತೆ ಹೊರಗೆ ತೆರಳಿದ್ದಾಗ ಫೈರಿಂಗ್‌ನಲ್ಲಿ ಮೃತನಾಗಿದ್ದಾನೆ ಎಂದು ಆತನ ತಾಯಿ ಈಗ ಕಣ್ಣೀರು ಹಾಕುತ್ತಿದ್ದಾರೆ. ಬೌರಿಂಗ್​ ಆಸ್ಪತ್ರೆ […]

ಪೊಲೀಸ್‌ ಫೈರಿಂಗ್‌ನಲ್ಲಿ ಮೃತನಾದ ಮೂರನೇ ವ್ಯಕ್ತಿಯ ಗುರುತು ಪತ್ತೆ
Guru

Updated on: Aug 12, 2020 | 7:54 PM

ಬೆಂಗಳೂರು: ಬೆಂಗಳೂರಿನ ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಸಾವನ್ನಪ್ಪಿದ ಮತ್ತೋರ್ವ ವ್ಯಕ್ತಿಯ ಗುರುತು‌ ಪತ್ತೆಯಾಗಿದೆ.

ಇದುವರೆಗೆ ಕೇವಲ ಇಬ್ಬರು ವ್ಯಕ್ತಿಗಳ ಗುರುತು ಮಾತ್ರ ಪತ್ತಯಾಗಿತ್ತು. ಈಗ ಮೂರನೇ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆತನನ್ನು 24ವರ್ಷದ ಶೇಖ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ನಾಗವಾರದಲ್ಲಿ ಆಟೋ ಓಡಿಸಿಕೊಂಡಿದ್ದ ಶೇಖ್ ಸಿದ್ದಿಕಿ ಸ್ನೇಹಿತರ ಜೊತೆ ಹೊರಗೆ ತೆರಳಿದ್ದಾಗ ಫೈರಿಂಗ್‌ನಲ್ಲಿ ಮೃತನಾಗಿದ್ದಾನೆ ಎಂದು ಆತನ ತಾಯಿ ಈಗ ಕಣ್ಣೀರು ಹಾಕುತ್ತಿದ್ದಾರೆ. ಬೌರಿಂಗ್​ ಆಸ್ಪತ್ರೆ ಶವಾಗಾರದ ಬಳಿ ಕುಳಿತಿರುವ ಆತನ ತಾಯಿ, ಈಗ ಮಗನನ್ನು ಕಳೆದುಕೊಂಡ ನೋವಿನಲ್ಲಿ ಕಣ್ಣೀರು ಹಾಕುತ್ತಿದ್ದಾಳೆ.

ಈ ನಡುವೆ ಪೊಲೀಸ್‌ ಪೈರಿಂಗ್‌ನಲ್ಲಿ ಸಾವನ್ನಪ್ಪಿದ ಇನ್ನಿಬ್ಬರು ವ್ಯಕ್ತಿಗಳನ್ನು ನಂದಿದುರ್ಗ ರಸ್ತೆಯಲ್ಲಿರುವ ಖುದ್ದೂಸ್ ಸಾಹೇಬ್ ಬರಿಯಲ್ ಗ್ರೌಂಡ್‌ನಲ್ಲಿ ಸಿದ್ಧತೆ ಅಂತ್ಯಸಂಸ್ಕಾರ ಮಾಡಲು ಸಿದ್ದತೆ ನಡೆದಿದದ್ದು, ಭಾರೀ ಪೊಲೀಸ್‌ ಬಂದೋಬಸ್ತ್‌ನಲ್ಲಿ ಮೃತದೇಹಗಳನ್ನು ಬೌರಿಂಗ್‌ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಲಾಗಿದೆ.

Published On - 7:52 pm, Wed, 12 August 20

Loading...
Unable to load recommendations.
Follow Us