ಹಬ್ಬಕ್ಕೆ ಬಲಿ ಕೊಡಲು ತಂದಿದ್ದ 8 ಒಂಟೆ ರಕ್ಷಣೆ, ಎಲ್ಲಿ?

|

Updated on: Jul 21, 2020 | 11:11 AM

ಕಲಬುರಗಿ: ಬಕ್ರೀದ್‌ ವೇಳೆ ಬಲಿ ಕೊಡಲು ರಾಜಾಸ್ಥಾನದಿಂದ ತರಲಾಗಿದ್ದ 8 ಒಂಟೆಗಳನ್ನು ಆಳಂದ ಪಟ್ಟಣದ ಹಳೆ ಚೆಕ್ ಪೋಸ್ಟ್ ಬಳಿ ರಕ್ಷಿಸಿರುವ ಘಟನೆ ಇಂದು ನಗರದಲ್ಲಿ ನೆಡೆದಿದೆ. ಆಗಸ್ಟ್ 1ರಂದು ನಡೆಯುವ ಬಕ್ರೀದ್ ಹಬ್ಬ ಸಂದರ್ಭದಲ್ಲಿ ಪ್ರಾಣಿ ವಧೆ ಮಾಡಲೆಂದು ರಾಜಾಸ್ಥಾನದಿಂದ ಒಂಟೆಗಳನ್ನು ತಂದಿದ್ದ ಆರೋಪಿಗಳನ್ನು ಆಳಂದ ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರೆಲ್ಲ ಮಧ್ಯ ಪ್ರದೇಶಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಆಳಂದ ಪಟ್ಟಣದ ಹಳೆ ಚೆಕ್ ಪೋಸ್ಟ್ ಬಳಿ ಒಟ್ಟು 8 ಒಂಟೆಗಳನ್ನು ರಕ್ಷಿಸಿರುವ ಪೊಲೀಸರು ರಾಜಸ್ಥಾನದಿಂದ […]

ಹಬ್ಬಕ್ಕೆ ಬಲಿ ಕೊಡಲು ತಂದಿದ್ದ 8 ಒಂಟೆ ರಕ್ಷಣೆ, ಎಲ್ಲಿ?
Follow us on

ಕಲಬುರಗಿ: ಬಕ್ರೀದ್‌ ವೇಳೆ ಬಲಿ ಕೊಡಲು ರಾಜಾಸ್ಥಾನದಿಂದ ತರಲಾಗಿದ್ದ 8 ಒಂಟೆಗಳನ್ನು ಆಳಂದ ಪಟ್ಟಣದ ಹಳೆ ಚೆಕ್ ಪೋಸ್ಟ್ ಬಳಿ ರಕ್ಷಿಸಿರುವ ಘಟನೆ ಇಂದು ನಗರದಲ್ಲಿ ನೆಡೆದಿದೆ.

ಆಗಸ್ಟ್ 1ರಂದು ನಡೆಯುವ ಬಕ್ರೀದ್ ಹಬ್ಬ ಸಂದರ್ಭದಲ್ಲಿ ಪ್ರಾಣಿ ವಧೆ ಮಾಡಲೆಂದು ರಾಜಾಸ್ಥಾನದಿಂದ ಒಂಟೆಗಳನ್ನು ತಂದಿದ್ದ ಆರೋಪಿಗಳನ್ನು ಆಳಂದ ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರೆಲ್ಲ ಮಧ್ಯ ಪ್ರದೇಶಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ಆಳಂದ ಪಟ್ಟಣದ ಹಳೆ ಚೆಕ್ ಪೋಸ್ಟ್ ಬಳಿ ಒಟ್ಟು 8 ಒಂಟೆಗಳನ್ನು ರಕ್ಷಿಸಿರುವ ಪೊಲೀಸರು ರಾಜಸ್ಥಾನದಿಂದ ಒಂಟೆ ತರುತ್ತಿದ್ದ 6 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸಧ್ಯಕ್ಕೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Published On - 11:02 am, Tue, 21 July 20