
ಬೆಂಗಳೂರು: ರಾಜೀವ್ ಗಾಂಧಿ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ಕೊರೊನಾ ಸೋಂಕಿತರಿಗೆ ಅವ್ಯವಸ್ಥೆ ಎದುರಾಗಿದೆ. ನೀರು ಬೇಕಾದರೆ ಗಲಾಟೆ ಮಾಡಿ ಪಡೆದುಕೊಳ್ಳಬೇಕಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕೊರೊನಾ ಸೋಂಕಿತರು ಆರೋಪಿಸಿದ್ದಾರೆ.
ಒಂದು ಕೊಠಡಿಯಲ್ಲಿ ಸುಮಾರು 20 ಸೋಂಕಿತರಿದ್ದೇವೆ. ನಮಗೆ ಯಾವುದೇ ಸೂಕ್ತ ಚಿಕಿತ್ಸೆ ನೀಡಿಲ್ಲ. ನರ್ಸ್ ಬಂದು ಕೇವಲ 2 ಮಾತ್ರೆ ಕೊಟ್ಟು ಹೋಗುತ್ತಾರೆ. ಅದನ್ನು ಬಿಟ್ಟರೆ ಬೇರೆ ಯಾರೂ ಇಲ್ಲಿಗೆ ಬರುವುದಿಲ್ಲ. ರಾಜೀವ್ ಗಾಂಧಿ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ಅವ್ಯವಸ್ಥೆಯ ಬಗ್ಗೆ ಕೊರೊನಾ ಸೋಂಕಿತರು ಆರೋಪಿಸಿದ್ದಾರೆ.
Published On - 12:13 pm, Sat, 20 June 20