ಮಹಾರಾಷ್ಟ್ರದ ರಾಜಧಾನಿ ಮುಂಬೈನ ಗೋರೆಗಾಂವ್ನಲ್ಲಿರುವ ಸ್ಟುಡಿಯೋ ಒಂದರಲ್ಲಿ ಇಂದು ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಈ ಸ್ಟುಡಿಯೋದಲ್ಲಿ ಪ್ರಭಾಸ್ (Prabhas) ಅಭಿನಯದ ಆದಿ ಪುರುಷ್ (Adipurush) ಸಿನಿಮಾದ ಸೆಟ್ ಹಾಕಲಾಗಿತ್ತು ಎನ್ನಲಾಗಿದೆ.ಗೋರೆಗಾಂವ್ನ ಇನಾರ್ಬಿಟ್ ಮಾಲ್ ಸಮೀಪ ಈ ಸ್ಟುಡಿಯೋ ಇದೆ. ಬೆಂಕಿಯ ಕೆನ್ನಾಲಿಗೆ ಎಲ್ಲ ಕಡೆಗಳಲ್ಲೂ ಚಾಚಿದ್ದು, 8 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿವೆ.
ಸಿನಿಮಾ ನಿರ್ದೇಶಕ ಓಂ ರಾವತ್ ಮತ್ತು ಮರಾಠಿ ನಟ ಸೂರ್ಯ ಸೆಟ್ನಲ್ಲಿದ್ದರು. ಪ್ರಭಾಸ್ ಕೂಡ ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ಘಟನೆ ವೇಳೆ ಯಾರಿಗೂ ತೊಂದರೆ ಉಂಟಾಗಿಲ್ಲ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಸದ್ಯ, ಬೆಂಕಿ ನಂದಿಸುವ ಕೆಲಸ ಪ್ರಗತಿಯಲ್ಲಿದೆ.
#WATCH I Mumbai: A fire has broken out at a studio in Goregaon; 8 fire tenders present at the spot. No injuries reported yet. More details awaited. pic.twitter.com/GJ9pNB0q0x
— ANI (@ANI) February 2, 2021
Published On - 7:25 pm, Tue, 2 February 21