AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BSNL ಗ್ರಾಹಕರಿಗೆ ಬಂಪರ್​ ಕೊಡುಗೆ.. 199 ರೂ. ಪಾವತಿಸಿದರೆ ಎಲ್ಲಾ ಓಟಿಟಿ ವೇದಿಕೆಗಳೂ ಫ್ರೀ!

BSNL Cinema Plus ಯೋಜನೆಯನ್ನು ಪಡೆಯಲು BSNL ಗ್ರಾಹಕರು ಸಂಸ್ಥೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಮೊಬೈಲ್​ ನಂಬರ್​, ಇಮೇಲ್​ ಐಡಿ, ಹೆಸರು ಮತ್ತು ಪ್ರದೇಶವನ್ನು ನಮೂದಿಸಬೇಕಿದೆ.

BSNL ಗ್ರಾಹಕರಿಗೆ ಬಂಪರ್​ ಕೊಡುಗೆ.. 199 ರೂ. ಪಾವತಿಸಿದರೆ ಎಲ್ಲಾ ಓಟಿಟಿ ವೇದಿಕೆಗಳೂ ಫ್ರೀ!
ಸಾಂದರ್ಭಿಕ ಚಿತ್ರ
Skanda
| Edited By: |

Updated on: Feb 02, 2021 | 7:02 PM

Share

ಖಾಸಗಿ ನೆಟ್​ವರ್ಕ್​ಗಳಿಗೆ ಪ್ರಬಲ ಪೈಪೋಟಿ ನೀಡುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ (BSNL) ಸಂಸ್ಥೆ ತನ್ನ ಗ್ರಾಹಕರಿಗಾಗಿ ಆಕರ್ಷಕ ಯೋಜನೆಗಳನ್ನು ಜಾರಿಗೊಳಿಸಿದೆ. ಜನರು ಇಂಟರ್ನೆಟ್​ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದು, ಮನರಂಜನೆಗೆ ಓಟಿಟಿ ವೇದಿಕೆಗಳನ್ನೇ ಅವಲಂಬಿಸುತ್ತಿರುವ ಕಾರಣ ಅವರನ್ನು ಸೆಳೆಯಲೆಂದೇ ಬಿಎಸ್​ಎನ್​ಎಲ್​ ಸಿನಿಮಾ ಪ್ಲಸ್​ (BSNL Cinema Plus) ಎಂಬ ವಿಶೇಷ ಓಟಿಟಿ ಯೋಜನೆಯನ್ನು ಚಾಲ್ತಿಗೆ ತಂದಿದೆ.

ನೂತನ ಯೋಜನೆಗಳಡಿಯಲ್ಲಿ SonyLIV, YuppTV, Voot Select, Zee5 ಅಪ್ಲಿಕೇಶನ್​ಗಳನ್ನು ಬಳಕೆ ಮಾಡಬಹುದಾಗಿದೆ. ಗ್ರಾಹಕರು ಒಂದು ತಿಂಗಳಿಗೆ ₹199 ಪಾವತಿ ಮಾಡಬೇಕಿದ್ದು, ಯೋಜನೆಯು ಆರಂಭಿಕ 3 ತಿಂಗಳವರೆಗೆ ಮಾತ್ರ ಜಾರಿಯಲ್ಲಿರಲಿದೆ. ಬಿಎಸ್​ಎನ್​ಎಲ್​ ಸಿನಿಮಾ ಪ್ಲಸ್​ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರಿಗೆ 300ಕ್ಕೂ ಅಧಿಕ ಟಿವಿ ವಾಹಿನಿಗಳು, 8,000ಕ್ಕೂ ಅಧಿಕ ಸಿನಿಮಾಗಳು, 80 ಲೈವ್​ ಟಿವಿ ವಾಹಿನಿಗಳು, ಒರಿಜಿನಲ್​ ಟಿವಿ ಕಾರ್ಯಕ್ರಮಗಳು ವೀಕ್ಷಣೆಗೆ ಲಭ್ಯವಿರಲಿವೆ ಎಂದು ಬಿಎಸ್​ಎನ್​ಎಲ್​ನ ಹಿರಿಯ ಅಧಿಕಾರಿ ನಾಗೆಲ್ಲಾ ತ್ರಿನಾಥ್ ಟ್ವೀಟ್ ಮಾಡಿದ್ದಾರೆ.

ಬಿಎಸ್​ಎನ್​ಎಲ್​ ಸಿನಿಮಾ ಪ್ಲಸ್​ ಯೋಜನೆ ಪಡೆಯುವುದು ಹೇಗೆ ಈ ಯೋಜನೆಯನ್ನು ಪಡೆಯಲು BSNL ಗ್ರಾಹಕರು ಸಂಸ್ಥೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಮೊಬೈಲ್​ ನಂಬರ್​, ಇಮೇಲ್​ ಐಡಿ, ಹೆಸರು ಮತ್ತು ಪ್ರದೇಶವನ್ನು ನಮೂದಿಸಬೇಕಿದೆ. ನಂತರ ಬಿಎಸ್​ಎನ್​ಎಲ್​ ಸಿನಿಮಾ ಪ್ಲಸ್​ ಯೋಜನೆಯನ್ನು ಪಡೆದು ಸೌಲಭ್ಯಗಳನ್ನು ಅನುಭವಿಸಬಹುದಾಗಿದೆ.

ಹಾಟ್​ಸ್ಟಾರ್​ನೊಂದಿಗೂ ಕೈ ಜೋಡಿಸಿದ ಬಿಎಸ್​ಎನ್​ಎಲ್​ ಬಿಎಸ್​ಎನ್​ಎಲ್​ ತನ್ನ ಪ್ರೀಪೇಯ್ಡ್​ ಗ್ರಾಹಕರಿಗೆ ಬಿಎಸ್​ಎನ್​ಎಲ್​ ಸೂಪರ್​ಸ್ಟಾರ್​ ಎಂಬ ಹೊಸ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯಲ್ಲಿ 500ಜಿಬಿ ಡೇಟಾ ನೀಡಲಾಗುತ್ತಿದ್ದು, ಹಾಟ್​ಸ್ಟಾರ್​ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​ ಕೂಡ ಸಿಗಲಿದೆ. ಈ ಯೋಜನೆಯನ್ನು ಪಡೆಯಲು ಪ್ರೀಪೇಯ್ಡ್ ಗ್ರಾಹಕರು ತಿಂಗಳಿಗೆ ₹949 ಪಾವತಿಸಬೇಕಿದ್ದು, ಅನಿಯಮಿತ ಕರೆ ಹಾಗೂ 50 Mbps ವೇಗದಲ್ಲಿ ಡೇಟಾ ಸಿಗಲಿದೆ.

ಈ ಯೋಜನೆಗಳನ್ನು ಪಡೆಯಲು ಗ್ರಾಹಕರು ತಮ್ಮ STD ಕೋಡ್​ಗಳ ಜೊತೆಗೆ ದೂರವಾಣಿ ಸಂಖ್ಯೆಯನ್ನು ಹಾಕಿ ಓಟಿಪಿ ನಮೂದಿಸಬೇಕಿದೆ. ಖಾಸಗಿ ಸಂಸ್ಥೆಗಳ ಪೈಪೋಟಿ ಜೋರಾಗುತ್ತಿರುವ ಸಂದರ್ಭದಲ್ಲೇ ಮತ್ತೆ ಮುನ್ನೆಲೆಗೆ ಬರಲು ಬಿಎಸ್​ಎನ್​ಎಲ್​ ಈ ಮಾರ್ಗವನ್ನು ಅನುಸರಿಸುತ್ತಿರುವಂತೆ ಕಾಣುತ್ತಿದೆ.

Budget 2021 | ಬೆಂಗಳೂರು ಮೆಟ್ರೋಗೆ ಭರ್ಜರಿ ಕೊಡುಗೆ: 58.19 ಕಿಮೀ ವಿಸ್ತರಣೆಗೆ ₹ 14 ಸಾವಿರ ಕೋಟಿ ಅನುದಾನ

ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!