ಮೈಸೂರು: ಶಿಕ್ಷಣ ಕ್ಷೇತ್ರಕ್ಕೆ ಮೈಸೂರು ವಿವಿಯ ಕೊಡುಗೆ ಅಪಾರ. 21ನೇ ಶತಮಾನದ ಅಗತ್ಯಗಳನ್ನು ಪೂರೈಸಬೇಕಾಗಿದೆ. ಪದವಿ ಜೊತೆ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ನಡೆಸಿದರು.
ಮಳೆ ಹಾನಿಪೀಡಿತ ಕುಟುಂಬಗಳಿಗೆ ಸಹಾನುಭೂತಿ
ಕೆಲ ನಿರ್ಬಂಧಗಳ ನಡುವೆಯೂ ವಿವಿಯ ಘಟಿಕೋತ್ಸವವನ್ನು ಉತ್ಸಾಹದಿಂದ ಆಚರಿಸಲಾಗುತ್ತಿದೆ. ಮಳೆಯಿಂದ ಹಾನಿಪೀಡಿತ ಕುಟುಂಬಗಳಿಗೆ ನನ್ನ ಸಹಾನುಭೂತಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪರಿಹಾರ ಕಾರ್ಯ ನಡೆಸಲಾಗುತ್ತಿದೆ ಎಂದು ಸಹ ಹೇಳಿದರು.
ಸುಧಾಮೂರ್ತಿಗೆ ಗೌರವ ಡಾಕ್ಟರೇಟ್ ಪ್ರದಾನ
ಇಂದು ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವ ಸಮಾರಂಭವನ್ನು ಆಯೋಜಿಸಲಾಗಿದ್ದು ಕ್ರಾಫರ್ಡ್ ಹಾಲ್‌ನ ಸಭಾಂಗಣದಲ್ಲಿ ಇಂದು ಕಾರ್ಯಕ್ರಮ ಜರುಗಿತು. ಘಟಿಕೋತ್ಸವದಲ್ಲಿ ಇಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಡಿಸಿಎಂ ಅಶ್ವತ್ಥ್ ನಾರಾಯಣ ಭಾಗಿಯಾಗಿದ್ದರು.
National Education Policy is a huge initiative to bring fundamental change in education setup of country. To make our capable youth even more competitive, a multidimensional approach is being focussed on. Effort is to make youth flexible & adaptable for changing nature of job: PM https://t.co/IbULBTqPI3
— ANI (@ANI) October 19, 2020
Published On - 12:15 pm, Mon, 19 October 20