ರಾಜಧಾನಿಯಲ್ಲಿ ಕೊರೊನಾಗೆ ಪಿಎಸ್‌ಐ ಬಲಿ

ಬೆಂಗಳೂರು: ಕಿಲ್ಲರ್ ಕೋವಿಡ್​ಗೆ ಕೊರೊನಾ ವಾರಿಯರ್​ನಂತೆ ಕಾರ್ಯ ನಿರ್ವಹಿಸುತ್ತಿದ್ದ 59 ವರ್ಷದ ಪಿಎಸ್​ಐ ಬಲಿಯಾಗಿದ್ದಾರೆ. ಭಾನುವಾರ ಚಿಕಿತ್ಸೆಗೆ ಎಂದು ಅತ್ತಿಬೆಲೆಯ ಸಾಯಿ ಆಸ್ಪತ್ರೆಗೆ ದಾಖಲಾಗಿದ್ರು. ಆದರೆ ಚಿಕಿತ್ಸೆ ಫಲಿಸದೆ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಬೆಂಗಳೂರು ಕಂಟ್ರೋಲ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಕಳೆದ ಹಲವು ದಿನಗಳಿಂದ ಕರ್ತವ್ಯಕ್ಕೆ ಹಾಜಾರಗಿರಲಿಲ್ಲ. ನಗರದಲ್ಲಿ ಇದುವರೆಗೆ ಏಳು ಪೊಲೀಸರು ಕೊರೊನದಿಂದ ಮೃತಪಟ್ಟಿದ್ದಾರೆ. ಒಟ್ಟು 578 ಪೊಲೀಸರಿಗೆ ಸೋಂಕು ತಗುಲಿದೆ. 732 ಜನ ಪೊಲೀಸರು ಕ್ವಾರಂಟೈನ್​ನಲ್ಲಿದ್ದಾರೆ. ಐವತ್ತು ವರ್ಷ ಮೇಲ್ಪಟ್ಟ ಪೊಲೀಸರಿಗೆ ಮನೆಯಿಂದ ಕರ್ತವ್ಯ […]

ರಾಜಧಾನಿಯಲ್ಲಿ ಕೊರೊನಾಗೆ ಪಿಎಸ್‌ಐ ಬಲಿ
ಆಯೇಷಾ ಬಾನು

Updated on: Jul 14, 2020 | 11:10 AM

ಬೆಂಗಳೂರು: ಕಿಲ್ಲರ್ ಕೋವಿಡ್​ಗೆ ಕೊರೊನಾ ವಾರಿಯರ್​ನಂತೆ ಕಾರ್ಯ ನಿರ್ವಹಿಸುತ್ತಿದ್ದ 59 ವರ್ಷದ ಪಿಎಸ್​ಐ ಬಲಿಯಾಗಿದ್ದಾರೆ. ಭಾನುವಾರ ಚಿಕಿತ್ಸೆಗೆ ಎಂದು ಅತ್ತಿಬೆಲೆಯ ಸಾಯಿ ಆಸ್ಪತ್ರೆಗೆ ದಾಖಲಾಗಿದ್ರು. ಆದರೆ ಚಿಕಿತ್ಸೆ ಫಲಿಸದೆ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಬೆಂಗಳೂರು ಕಂಟ್ರೋಲ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಕಳೆದ ಹಲವು ದಿನಗಳಿಂದ ಕರ್ತವ್ಯಕ್ಕೆ ಹಾಜಾರಗಿರಲಿಲ್ಲ.

ನಗರದಲ್ಲಿ ಇದುವರೆಗೆ ಏಳು ಪೊಲೀಸರು ಕೊರೊನದಿಂದ ಮೃತಪಟ್ಟಿದ್ದಾರೆ. ಒಟ್ಟು 578 ಪೊಲೀಸರಿಗೆ ಸೋಂಕು ತಗುಲಿದೆ. 732 ಜನ ಪೊಲೀಸರು ಕ್ವಾರಂಟೈನ್​ನಲ್ಲಿದ್ದಾರೆ. ಐವತ್ತು ವರ್ಷ ಮೇಲ್ಪಟ್ಟ ಪೊಲೀಸರಿಗೆ ಮನೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿತ್ತು. ಹೀಗಾಗಿ ಮೃತ ಪಿಎಸ್​ಐ ಕಳೆದ ಹಲವು ದಿನಗಳಿಂದ ಮನೆಯಲ್ಲಿ ಇದ್ದರು. ಸೋಂಕಿತನ ಮೂಲ ಎಲ್ಲಿಯದ್ದು ಎಂಬುದು ಪತ್ತೆಯಾಗಿಲ್ಲ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us