ಅಬ್ಬಾ! ಮನೆಯ ಮೆಟ್ಟಿಲ ಕೆಳಗೆ ಹೆಬ್ಬಾವು ಪ್ರತ್ಯಕ್ಷ.. ಹಾವನ್ನು ನೋಡಿ ಹೌಹಾರಿದ ಮನೆ ಮಂದಿ

| Updated By: ಸಾಧು ಶ್ರೀನಾಥ್​

Updated on: Mar 04, 2021 | 10:07 AM

ರಾಯಚೂರಿನಲ್ಲಿರುವ ಟಿವಿ9 ಕಚೇರಿಯ ಪಕ್ಕದ ಮನೆಯಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಮನೆಯ ಸ್ಟೇರ್ ಕೆಳಗಡೆ ಹೆಬ್ಬಾವು ಅವಿತಿದ್ದದನ್ನು ಕಂಡು ಜನ ಹೌಹಾರಿದ್ದಾರೆ. ಮನೆ ಮಂದಿ ಹೆಬ್ಬಾವು ಕಂಡು ಆತಂಕಗೊಂಡಿದ್ದಾರೆ.

ಅಬ್ಬಾ! ಮನೆಯ ಮೆಟ್ಟಿಲ ಕೆಳಗೆ ಹೆಬ್ಬಾವು ಪ್ರತ್ಯಕ್ಷ.. ಹಾವನ್ನು ನೋಡಿ ಹೌಹಾರಿದ ಮನೆ ಮಂದಿ
ಮನೆಯ ಮೆಟ್ಟಿಲ ಕೆಳಗೆ ಹೆಬ್ಬಾವು ಪ್ರತ್ಯಕ್ಷ
Follow us on

ರಾಯಚೂರು: ಚಿರತೆ, ಹುಲಿಗಳು ನಾಡಿಗೆ ಲಗ್ಗೆ ಇಟ್ಟು ಹಸು, ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ ಎಂಬ ಸುದ್ದಿಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿವೆ. ಜೊತೆಗೆ ಕೆಲ ಕಡೆ ಬೇಸಿಗೆಯ ಬೇಗೆಗೆ ಕಾಡು ಬೆಂಕಿಯ ಕೆನ್ನಾಲಿಗೆಯಲ್ಲಿ ಬೇಯುವಂತಹ ಘಟನೆಗಳು ಸಹ ನಡೆಯುತ್ತಿವೆ. ಈಗ ಕಾಡಿನಿಂದ ಕಾಡಿಗೆ ಬಂದ ಮತ್ತೋರ್ವ ಅತಿಥಿಯಂತೆ ಹೆಬ್ಬಾವೊಂದು ಮನೆಯಲ್ಲಿ ಪ್ರತ್ಯಕ್ಷವಾಗಿದ್ದು ಮನೆಯಲ್ಲಿದ್ದವರು ಬೆಚ್ಚಿಬಿದ್ದಿರುವ ಘಟನೆ ರಾಯಚೂರಿನ ಐಡಿಎಸ್ಎಂಟಿ ಬಡಾವಣೆಯಲ್ಲಿ ನಡೆದಿದೆ.

ರಾಯಚೂರಿನಲ್ಲಿರುವ ಟಿವಿ9 ಕಚೇರಿಯ ಪಕ್ಕದ ಮನೆಯಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಮನೆಯ ಸ್ಟೇರ್ ಕೆಳಗಡೆ ಹೆಬ್ಬಾವು ಅವಿತಿದ್ದದನ್ನು ಕಂಡು ಜನ ಹೌಹಾರಿದ್ದಾರೆ. ಮನೆ ಮಂದಿ ಹೆಬ್ಬಾವು ಕಂಡು ಆತಂಕಗೊಂಡಿದ್ದಾರೆ. ಸದ್ಯ ಹಾವು ಹಿಡಿಯುವವರಿಗೆ ವಿಷಯ ತಿಳಿಸಿದ್ದು ವೈಲ್ಡ್ ಲೈಫ್ ಸೊಸೈಟಿ ಮುಖ್ಯಸ್ಥ ಅಪ್ಸರ್ ಹುಸೇನ್ ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಇನ್ನು ಒಂದು ವಾರದ ಹಿಂದಷ್ಟೇ ಒಂದೇ ಮನೆಯಲ್ಲಿ ಎರಡು ಹೆಬ್ಬಾವು ಪ್ರತ್ಯಕ್ಷವಾಗಿದ್ದವು. ಈದೀಗ ಮತ್ತೊಂದು ಹೆಬ್ಬಾವು ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಮನೆ ಮಂದಿಗೆಲ್ಲ ಆತಂಕ ಹೆಚ್ಚಾಗಿದೆ.

ಮನೆಯ ಮೆಟ್ಟಿಲ ಕೆಳಗೆ ಹೆಬ್ಬಾವು ಪ್ರತ್ಯಕ್ಷ

ಚಳಿಗಾಲವಿದ್ದರು ಚಳಿ ನಾಪತ್ತೆಯಾಗಿದೆ. ಹವಾಮಾನ ಇಲಾಖೆಯು (IMD) ಮಾರ್ಚ್ 02ರಂದು ಬಿಡುಗಡೆ ಮಾಡಿರುವ ವರದಿಯ ಪ್ರಕಾರ ನಾವು ಮೊನ್ನೆ ಕಳೆದ ಚಳಿಗಾಲವು ಕಳೆದ 120 ವರ್ಷಗಳಲ್ಲಿಯೇ ಅತಿ ಹೆಚ್ಚು ತಾಪಮಾನದಿಂದ ಕೂಡಿದ ಎರಡನೇ ಚಳಿಗಾಲವಾಗಿತ್ತು. ಭಾರತದಲ್ಲಿ ಜನವರಿ ಮತ್ತು ಫೆಬ್ರುವರಿ ತಿಂಗಳುಗಳನ್ನು ಚಳಿಗಾಲದ ತಿಂಗಳುಗಳೆಂದು ಪರಿಗಣಿಸಲಾಗುತ್ತದೆ.

ಈ ಎರಡು ಮಾಸಗಳಲ್ಲಿ ಕನಿಷ್ಠ ತಾಪಮಾನ 15.39 ಡಿಗ್ರೀ ಸೆಲ್ಸಿಯಸ್ ದಾಖಲಾಗಿದ್ದು ಇದು ಫೆಬ್ರುವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಸಾಮಾನ್ಯವಾಗಿ ದಾಖಲಾಗುವ ಉಷ್ಣಾಂಶಕ್ಕಿಂತ 0.79 ಡಿಗ್ರಿಯಷ್ಟು ಜಾಸ್ತಿಯಾಗಿದೆ. ಇದೇ ಅವಧಿಯಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನವು 27.47 ಡಿಗ್ರೀ ಸೆಲ್ಸಿಯ್​ಗಳಷ್ಟಿತ್ತು ಮತ್ತು ಇದು ಸಾಮಾನ್ಯಕ್ಕಿಂತ 0.47 ಡಿಗ್ರೀಯಷ್ಟು ಜಾಸ್ತಿಯಾಗಿದೆ.

ಬೇಸಿಗೆ ಹೆಚ್ಚಾದ ಹಿನ್ನೆಲೆಯಲ್ಲಿ ಹಾವುಗಳು ಹುತ್ತದಿಂದ ಹೊರ ಬರುತ್ತಿವೆ. ತಣ್ಣನೆಯ ಜಾಗಕ್ಕಾಗಿ ಹುಡುಕಾಡುತ್ತಿವೆ. ಹೀಗಾಗಿ ಹಾವುಗಳು ಮನೆಗೆ ಬಂದ್ರೆ ಹೆದರದೆ, ಅವುಗಳಿಗೆ ಹಾನಿ ಮಾಡದೆ ಉರಗ ತಜ್ಞರ ಸಹಾಯದಿಂದ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವ ಪ್ರಯತ್ನ ಮಾಡಿ.

ಜೊತೆಗೆ ಅದಕ್ಕಿಂತ ಮೊದಲು, ಇದೀಗ ಎಲೆ ಉದುರುವ ಕಾಲವಾಗಿದ್ದು, ಒಣ ತಲೆಗೆರೆಗಳಿಗೆ ಬೆಂಕಿ ಹಾಕುವ ಕೆಟ್ಟ ಪ್ರವೃತ್ತಿಯೂ ಮನುಷ್ಯನಲ್ಲಿದೆ. ಆದರೆ ಆ  ಎಲೆಗಳು ಗಿಡಗಳಿಗೆ ಒಳ್ಳೆಯ ಗೊಬ್ಬರಾಗುತ್ತದೆ. ಅದಕ್ಕೂ ಮುನ್ನ ಹಾವಿನಂತರಹ ಸರೀಸೃಪಗಳಿಗೆ ತಣ್ಣನೆಯ ಮನೆಯಾಗಿರುತ್ತದೆ ಎಂಬುದನ್ನು ಗಮನಿಸಬೇಕು. ಹಾಗಿರುವಾಗ ಎಲೆಗಳಿಗೆ ಬೆಂಕಿ ಹಚ್ಚುವ ಕೆಟ್ಟ ಪ್ರವೃತ್ತಿಯನ್ನು ಬಿಡಿ ಎಂದಷ್ಟೇ ಹೇಳಬಹುದು.

ಹೆಬ್ಬಾವು ಹಿಡಿದ ಅಪ್ಸರ್ ಹುಸೇನ್

ಇದನ್ನೂ ಓದಿ: ಕಾಡು ಬಿಟ್ಟು ನಾಡಿನತ್ತ.. ಜಮೀನಿನಲ್ಲಿ ತೆವಳುತ್ತಾ, ಆತಂಕ ಹುಟ್ಟಿಸಿದ್ದ ಭಾರಿ ಗಾತ್ರದ ಹೆಬ್ಬಾವು ಸೆರೆ