ಹಿಂದಿನ ಓವರ್​ನಲ್ಲಿ ಹ್ಯಾಟ್ರಿಕ್​ ತೆಗೆದಿದ್ದ ಬೌಲರ್​ಗೆ ಒಂದೇ ಓವರ್​ನಲ್ಲಿ ಆರು ಸಿಕ್ಸರ್​​ ಬಾರಿಸಿದ ಕೀರನ್ ಪೊಲಾರ್ಡ್!

|

Updated on: Mar 04, 2021 | 10:59 AM

West Indies vs Sri Lanka: ಶ್ರೀಲಂಕಾ ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಂಡಿದೆ. ಇಂದು ನಡೆದ ಟಿ-20 ಪಂದ್ಯದಲ್ಲಿ ಶ್ರೀಲಂಕಾ ಮೊದಲ ಬ್ಯಾಟಿಂಗ್​ಗೆ ಇಳಿದಿತ್ತು. 20 ಓವರ್​ಗಳಲ್ಲಿ 131ರನ್​ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು.

ಹಿಂದಿನ ಓವರ್​ನಲ್ಲಿ ಹ್ಯಾಟ್ರಿಕ್​ ತೆಗೆದಿದ್ದ ಬೌಲರ್​ಗೆ ಒಂದೇ ಓವರ್​ನಲ್ಲಿ ಆರು ಸಿಕ್ಸರ್​​ ಬಾರಿಸಿದ ಕೀರನ್ ಪೊಲಾರ್ಡ್!
Follow us on

ಜೀವನವೇ ಹಾಗೆ. ಸುಖ-ದುಖಃ ಯಾವಾಗ ಬರುತ್ತದೆಯೋ ಹೇಳುವುದಕ್ಕೆ ಆಗುವುದಿಲ್ಲ. ಇಲ್ಲೊಬ್ಬ ಬೌಲರ್​, ಕ್ರಿಕೆಟ್​ ಆಟದಲ್ಲಿ ಅತ್ಯಪರೂಪ ಎನಿಸುವಂತೆ ಒಂದು ಓವರ್​ನಲ್ಲಿ ಹ್ಯಾಟ್ರಿಕ್​ ತೆಗೆದು ಸಾಧನೆ ಮಾಡಿದ್ದಾರೆ. ಆದರೆ, ಅದರ ಸಂಭ್ರಮದ ಕ್ಷಣಗಳು ಮರು ಓವರ್​ನಲ್ಲಿಯೇ ಇಲ್ಲವಾಗಿದೆ. ಏಕೆಂದರೆ, ಅವರ ಮುಂದಿನ ಓವರ್​ನಲ್ಲೇ ಬ್ಯಾಟ್ಸ್​​ಮನ್​ ಆರು ಬಾಲ್​ಗೆ ಆರು ಸಿಕ್ಸ್​ ಬಾರಿಸಿದ್ದಾರೆ.  ವೆಸ್ಟ್​ ಇಂಡೀಸ್​ ಸೀಮಿತ ಓವರ್​ಗಳ ನಾಯಕ ಕೀರನ್​ ಪೊಲಾರ್ಡ್​ ಶ್ರೀಲಂಕಾ ವಿರುದ್ಧ ಅಬ್ಬರಿಸಿದ್ದಾರೆ. ಆರು ಬಾಲ್​ಗೆ ಆರು ಸಿಕ್ಸ್​ ಹೊಡೆಯುವ ಮೂಲಕ ವೆಸ್ಟ್​ ಇಂಡೀಸ್​​ ತಂಡವನ್ನು ಗೆಲುವಿನ ದಡ ಹತ್ತಿಸಿದ್ದಾರೆ. ಹ್ಯಾಟ್ರಿಕ್​ ತೆಗೆದ ಬಾಲರ್​ಗೆ ಕೀರನ್​ ಸಿಕ್ಸ್​ ಬಾರಿಸಿದ್ದು ವಿಶೇಷ.

ಶ್ರೀಲಂಕಾ ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಂಡಿದೆ. ಇಂದು ನಡೆದ ಟಿ-20 ಪಂದ್ಯದಲ್ಲಿ ಶ್ರೀಲಂಕಾ ಮೊದಲ ಬ್ಯಾಟಿಂಗ್​ಗೆ ಇಳಿದಿತ್ತು. 20 ಓವರ್​ಗಳಲ್ಲಿ 131ರನ್​ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು. ಆತ್ಮ ವಿಶ್ವಾಸದೊಂದಿಗೆ ವೆಸ್ಟ್​ ಇಂಡೀಸ್​ ಆಟಗಾರರು ಬ್ಯಾಟಿಂಗ್​ಗೆ ಇಳಿದಿದ್ದರು. ವೆಸ್ಟ್​​ ಇಂಡೀಸ್​ ತಂಡ 52 ರನ್​ಗೆ ಒಂದು ವಿಕೆಟ್​ ಕಳೆದುಕೊಂಡು ಆಡುತ್ತಿರುವಾಗ ಅಖಿಲ ಧನಂಜಯ್​ ಬೌಲಿಂಗ್​ಗೆ ಇಳಿದಿದ್ದರು. ತಮ್ಮ ಸ್ಪಿನ್​ ಮಾಂತ್ರಿಕತೆಯಿಂದ ಹ್ಯಾಟ್ರಿಕ್​ ತೆಗೆದರು. ಈ ಮೂಲಕ ವೆಸ್ಟ್​ ಇಂಡೀಸ್​ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಆಗ ಬ್ಯಾಟಿಂಗ್​ಗೆ ಇಳಿದಿದ್ದರು ಪೊಲಾರ್ಡ್​.

ಒಂದು ಓವರ್ ಬಳಿಕೆ ಮತ್ತೆ ಅಖಿಲ ಧನಂಜಯ್​ ಬೌಲಿಂಗ್​ಗೆ ಇಳಿದರು. ಕಳೆದ ಓವರ್​ನಲ್ಲಿದ್ದ ವಿಶ್ವಾಸ ಈ ಬಾರಿ ದ್ವಿಗುಣಗೊಂಡಿತ್ತು. ಆದರೆ, ಪೊಲಾರ್ಡ್​ ಆಟದ ಗತಿಯನ್ನೇ ಬದಲಾಯಿಸಿಬಿಟ್ಟರು. ಅಖಿಲ ಬೌಲಿಂಗ್​ನಲ್ಲಿ ಆರು ಬಾಲ್​ಗೆ ಆರು ಸಿಕ್ಸ್​ ಬಾರಿಸಿ ಅವರು ಭೇಷ್​ ಎನಿಸಿಕೊಂಡರು.

ವೆಸ್ಟ್​ ಇಂಡೀಸ್​​ ತಂಡ ಈ ದೈತ್ಯ ದೇಹಿ ಸಿಕ್ಸರ್​​​ಗಳನ್ನು ಬಾರಿಸುವುದರೊಂದಿಗೆ ಇನ್ನಿಂಗ್ಸ್​​ ಆರಂಭಿಸಬೇಕು ಎಂಬಂತೆ ಸ್ಕ್ರೀಸ್​ಗೆ ಬಂದು ಬ್ಯಾಟ್​ ಬೀಸಿದ್ದಾರೆ. ಮೊದಲ ನಾಲ್ಕು ಸಿಕ್ಸರ್​​ಗಳನ್ನು ತುಸು ಶ್ರಮ ಹಾಕಿ ಬಾರಿಸಿದ್ದ ಪೊಲ್ಲಾರ್ಡ್​​, ಬಾರಿಸಿರುವ 5 ನೆಯ ಸಿಕ್ಸರ್​​ ನೋಡಿದರೆ ಅಬ್ಬಬ್ಬಾ ಅಂತೀರಿ! ಪೊಲಾಡ್ಸ್​ ಬ್ಯಾಟ್​​ನಿಂದ ಆಕಾಶಕ್ಕೆ ಚಿಮ್ಮಿದ ಬಾಲ್​ ನೋಡುವುದೇ ನಿಜಕ್ಕೂ ಸೊಗಸು, ಸೊಗಸು. ಮುಂದೆ ಕೊನೆಯ ಸಿಕ್ಸರ್​​ ಅನ್ನು ಈ ಪೊಲಾರ್ಡ್ ಹೇಗೆ ಎತ್ತಿದ್ದಾರೆ ಅಂದ್ರೆ ನಾಲ್ಕೈದು ಸಿಕ್ಸರ್​​ ಬಾರಿಸಿದ ಬಳಿಕ ಅದು ತನಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಮತ್ತೊಂದು ಸೊಗಸಾದ ಸಿಕ್ಸರ್​ ಅನ್ನು ಸ್ಕ್ವೇರ್​ ಡ್ರೈವ್​ ಮೂಲಕ ಮೈದಾನದಿಂದ ಹೊರಕ್ಕೆ ಎತ್ತಿದ್ದಾರೆ. ಈ ಮಧ್ಯೆ ಆ ಬೌಲರ್​ ಮುಖದಲ್ಲಿ ಎಷ್ಟು ಬೇಸರ ಅಸಹಾಯಕತೆ ಮನೆಮಾಡಿತ್ತು ಅಂದ್ರೆ ಮೂರನೆಯ ಸಿಕ್ಸರ್​ ಹೊಡೆಸಿಕೊಂಡಾಗಲೇ ಕಸಿವಿಸಿಗೊಂಡಿದ್ದರು. ಮತ್ತೆ ಮತ್ತೆ ಸಿಕ್ಸರ್​ ಹೊಡೆಯುವುದನ್ನು ನೋಡಿ ಅಸಹಾಯಕತೆಯಂದ ಕೈಚೆಲ್ಲಿ ನೋಡತೊಡಗಿದ್ದರು. ಅಂತಿಮವಾಗಿ 13.1 ಓವರ್​​ನಲ್ಲಿ 6 ವಿಕೆಟ್​ ಕಳೆದುಕೊಂಡು ವೆಸ್ಟ್​ ಇಂಡೀಸ್ ಗೆಲುವಿನ ದಡ ಸೇರಿತು.

ಇದನ್ನೂ ಓದಿ: ಮ್ಯಾಕ್ಸ್​ವೆಲ್​ ಅಬ್ಬರಕ್ಕೆ ಗ್ಯಾಲರಿ ಚೇರ್​​ ಚೂರು ಚೂರು: 14 ಕೋಟಿ ಹೆಚ್ಚಾಯ್ತು ಅಂದವರು ಗಪ್​-ಚುಪ್​!

Published On - 9:48 am, Thu, 4 March 21