ಮ್ಯಾಕ್ಸ್​ವೆಲ್​ ಅಬ್ಬರಕ್ಕೆ ಗ್ಯಾಲರಿ ಚೇರ್​​ ಚೂರು ಚೂರು: 14 ಕೋಟಿ ಹೆಚ್ಚಾಯ್ತು ಅಂದವರು ಗಪ್​-ಚುಪ್​!

ಕಳಪೆ ಪ್ರದರ್ಶನದ ನಡುವೆಯೂ ಆರ್​ಸಿಬಿ 14.25 ಕೋಟಿ ಕೊಟ್ಟು ಮ್ಯಾಕ್ಸ್​ವೆಲ್​ ಅವರನ್ನು ಖರೀದಿಸಿದ್ದೇಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು.

ಮ್ಯಾಕ್ಸ್​ವೆಲ್​ ಅಬ್ಬರಕ್ಕೆ ಗ್ಯಾಲರಿ ಚೇರ್​​ ಚೂರು ಚೂರು: 14 ಕೋಟಿ ಹೆಚ್ಚಾಯ್ತು ಅಂದವರು ಗಪ್​-ಚುಪ್​!
Rajesh Duggumane

|

Mar 03, 2021 | 5:30 PM

2021ರ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಆಸ್ಟ್ರೇಲಿಯಾ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ ಅವರನ್ನು 14.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ, ಈ ಎಲ್ಲ ಚರ್ಚೆಗಳಿಗೆ ಗ್ಲೆನ್​ ಮ್ಯಾಕ್ಸ್​​ವೆಲ್​ ತೆರೆ ಎಳೆದಿದ್ದಾರೆ. ನ್ಯೂಜಿಲೆಂಡ್​ ವಿರುದ್ಧದ ಟಿ20 ಪಂದ್ಯದಲ್ಲಿ 31 ಬಾಲ್​ಗಳಿಗೆ 70 ರನ್​ ಸಿಡಿಸಿ ಭೇಷ್​​ ಎನಿಸಿಕೊಂಡಿದ್ದಾರೆ. ಅಲ್ಲದೆ, ಮ್ಯಾಕ್ಸ್​ವೆಲ್​ ಬಗ್ಗೆ ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ. ಆರ್​ಸಿಬಿ ಜತೆ ಆಡಲು ಕಾತುರನಾಗಿದ್ದೇನೆ ಎಂದಿದ್ದರು ಮ್ಯಾಕ್ಸ್​ವೆಲ್. ಹೀಗಾಗಿ, 2021ರ ಐಪಿಎಲ್​ ಹರಾಜಿನಲ್ಲಿ ಮ್ಯಾಕ್ಸ್​ವೆಲ್​ ಅವರನ್ನು ಖರೀದಿಸಲು ಆರ್​ಸಿಬಿ ಉತ್ಸುಕತೆ ತೋರಿತ್ತು. ಅಂತೆಯೇ ಅವರನ್ನು, 14.25 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.

2020ರ ಐಪಿಎಲ್​ನಲ್ಲಿ ಪಂಜಾಬ್​ ಪರ ಆಡಿದ್ದ ಮ್ಯಾಕ್ಸ್​​ವೆಲ್​ ಕಳಪೆ ಪ್ರದರ್ಶನ ನೀಡಿದ್ದರು. ಆಗ 10.75 ಕೋಟಿ ರೂಪಾಯಿಗೆ ಬಿಕರಿಯಾದರೂ ಆಡಿದ 13 ಪಂದ್ಯಗಳಲ್ಲಿ 15.42ರ ಸರಾಸರಿಯಲ್ಲಿ ಕೇವಲ 103 ರನ್​ ಗಳಿಸಿ, ಇಡೀ ಟೂನಿರ್ಯಲ್ಲಿ ಒಂದೇ ಒಂದು ಸಿಕ್ಸರ್ ಸಹ ಬಾರಿಸಲು ಮ್ಯಾಕ್ಸ್​​ವೆಲ್​ ವಿಫಲರಾಗಿದ್ದರು.

ಕಳಪೆ ಪ್ರದರ್ಶನದ ನಡುವೆಯೂ ಆರ್​ಸಿಬಿ 14.25 ಕೋಟಿ ಕೊಟ್ಟು ಮ್ಯಾಕ್ಸ್​ವೆಲ್​ ಅವರನ್ನು ಖರೀದಿಸಿದ್ದೇಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಇನ್ನು, ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ನ್ಯೂಜಿಲೆಂಡ್​ ಟಿ20 ಟೂರ್ನಿಯಲ್ಲಿ ಮ್ಯಾಕ್ಸ್​ವೆಲ್​ ರನ್​ ಎರಡಂಕಿ ದಾಟಿರಲಿಲ್ಲ. ಹೀಗಾಗಿ ಮ್ಯಾಕ್ಸ್​​ವೆಲ್​ಗೆ 14 ಕೋಟಿ ಹೆಚ್ಚಾಯ್ತು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇಂದಿನ ಪಂದ್ಯದಲ್ಲಿ ಮ್ಯಾಕ್ಸ್​ವೆಲ್​ ಅಬ್ಬರಿಸಿ, ಟ್ರೋಲ್​ಗಳಿಗೆ ಬ್ರೇಕ್​ ಹಾಕಿದ್ದಾರೆ.

31 ಬಾಲ್​ಗಳಲ್ಲಿ ಮ್ಯಾಕ್ಸ್​ವೆಲ್​ 70 ರನ್​ ಸಿಡಿಸಿದ್ದಾರೆ. ಇದರಲ್ಲಿ 8 ಫೋರ್​, 5 ಸಿಕ್ಸ್​ಗಳನ್ನು ಒಳಗೊಂಡಿದೆ. ನೀಶಮ್​ ಓವರ್​ನಲ್ಲಿ 4,6,4,4,4,6 ಬಾರಿಸಿ ಅಚ್ಚರಿ ಮೂಡಿಸಿದ್ದಾರೆ. ಮ್ಯಾಕ್ಸ್​ವೆಲ್​​ ಸಿಕ್ಸ್ ಹೊಡೆದ ಅಬ್ಬರಕ್ಕೆ ಗ್ಯಾಲರಿಯಲ್ಲಿದ್ದ ಚೇರ್​ ಮುರಿದು ಹೋಗಿದೆ. ಇವರ ಅಬ್ಬರದ ಆಟದ ನಂತರ ಸಾಕಷ್ಟು ಮೀಮ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಇದನ್ನೂ ಓದಿ: IPL Auction 2021: ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್​​ ಜತೆ ಆಡಲು ಕಾತುರನಾಗಿದ್ದೇನೆ: ಗ್ಲೆನ್ ಮ್ಯಾಕ್ಸ್​ವೆಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada