AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Auction 2021: ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್​​ ಜತೆ ಆಡಲು ಕಾತುರನಾಗಿದ್ದೇನೆ: ಗ್ಲೆನ್ ಮ್ಯಾಕ್ಸ್​ವೆಲ್

ಕಳೆದ ಸೀಸನ್​ನಲ್ಲಿ ರೂ.10.75 ಕೋಟಿಗಳಿಗೆ ಬಿಕರಿಯಾದರೂ ಆಡಿದ 13 ಪಂದ್ಯಗಳಲ್ಲಿ 15.42ರ ಸರಾಸರಿಯಲ್ಲಿ ಕೇವಲ 103 ರನ್​ ಗಳಿಸಿ, ಇಡೀ ಟೂನಿರ್ಯಲ್ಲಿ ಒಂದೇ ಒಂದು ಸಿಕ್ಸರ್ ಸಹ ಬಾರಿಸಲು ವಿಫಲರಾದ ಮತ್ತು ಕೇವಲ 3 ವಿಕೆಟ್​ಗಳನ್ನು ಪಡೆದ ಮ್ಯಾಕ್ಸ್​ವೆಲ್​ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್​ ಫ್ರಾಂಚೈಸಿಯ ಮಾಲೀಕರು ರಿಲೀಸ್ ಮಾಡಿದ್ದು ನ್ಯಾಯಸಮ್ಮತವಾಗಿತ್ತು.

IPL Auction 2021: ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್​​ ಜತೆ ಆಡಲು ಕಾತುರನಾಗಿದ್ದೇನೆ: ಗ್ಲೆನ್ ಮ್ಯಾಕ್ಸ್​ವೆಲ್
ಗ್ಲೆನ್ ಮ್ಯಾಕ್ಸ್​ವೆಲ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Feb 20, 2021 | 7:08 PM

Share

ಇಂಡಿಯನ್ ಪ್ರಿಮೀಯರ್​ ಲೀಗಿನ ಹರಾಜು ಪ್ರಕ್ರಿಯೆಯಲ್ಲಿ ವಿಸ್ಮಯಗಳು, ಸೋಜಿಗ ಹುಟ್ಟಿಸುವ ಖರೀದಿಗಳು ಸಂಭವಿಸುವುದನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಪವಾಡದಂಥ ಸಂಗತಿಯೊಂದು ಪ್ರಾಯಶಃ ಮೊದಲ ಬಾರಿಗೆ 2021ರ ಐಪಿಎಲ್ ಮಿನಿ-ಲಿಲಾವಿನಲ್ಲಿ ನಡೆದಿದೆ. ಈ ಪವಾಡವನ್ನು ಸೃಷ್ಟಿಸಿದವರು ಬೇರೆ ಯಾರೂ ಅಲ್ಲ, ಆಸ್ಟ್ರೇಲಿಯಾದ ಆಲ್​-ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್! ಯಾಕೆ ಅಂತೀರಾ? ನೀವೇ ಒಮ್ಮೆ ನಿಧಾನಕ್ಕೆ ಯೋಚಿಸಿ ನೋಡಿ. ಕಳೆದ ಸೀಸನ್​ನಲ್ಲಿ ರೂ.10.75 ಕೋಟಿಗಳಿಗೆ ಬಿಕರಿಯಾದರೂ ಆಡಿದ 13 ಪಂದ್ಯಗಳಲ್ಲಿ 15.42ರ ಸರಾಸರಿಯಲ್ಲಿ ಕೇವಲ 103 ರನ್​ ಗಳಿಸಿ, ಇಡೀ ಟೂನಿರ್ಯಲ್ಲಿ ಒಂದೇ ಒಂದು ಸಿಕ್ಸರ್ ಸಹ ಬಾರಿಸಲು ವಿಫಲನಾದ ಮತ್ತು ಕೇವಲ 3 ವಿಕೆಟ್​ಗಳನ್ನು ಪಡೆದ ಮ್ಯಾಕ್ಸ್​ವೆಲ್​ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್​ ಫ್ರಾಂಚೈಸಿಯ ಮಾಲೀಕರು ರಿಲೀಸ್ ಮಾಡಿದ್ದು ನ್ಯಾಯಸಮ್ಮತವಾಗಿತ್ತು. ಆದರೆ, ಇಂಥ ಮಹಾನುಭಾವನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಧಣಿಗಳು ರೂ. 14.25 ಕೋಟಿಗೆ ಖರೀದಿಸುತ್ತಾರೆಂದರೆ ಅದು ಪವಾಡವಲ್ಲದೆ ಮತ್ತೇನು?

ಆರ್​ಸಿಬಿ ತಂಡದ ಅಭಿಮಾನಿಗಳಿಗೆ ಈ ಪರ್ಚೇಸ್ ಖಂಡಿತವಾಗಿಯೂ ಸಂತೋಷವನ್ನುಂಟು ಮಾಡಿರುವುದಿಲ್ಲ. ಆದರೆ ಕಥಾನಾಯಕ ಮಾತ್ರ ಫುಲ್ ಖುಷ್ ಆಗಿದ್ದಾರೆ. ಆಗದೆ ಏನು? ಐಪಿಎಲ್ 2021 ಸೀಸನ್​ಗೆ ತನ್ನನ್ನು ಯಾವುದಾದರೂ ಫ್ರಾಂಚೈಸಿ ಖರೀದಿಸಬಹುದೆಂದು ಖುದ್ದು ಮ್ಯಾಕ್ಸ್​ವೆಲ್​ಗೆ ವಿಶ್ವಾಸವಿರಲಿಲ್ಲ. ಸುದ್ದಿ ತಿಳಿದ ಮೇಲೆ ಸಂತೋಷದ ಅಲೆಯಲ್ಲಿ ತೇಲುತ್ತಿರುವ ಅವರು ಆರ್​ಸಿಬಿ ರಿಲೀಸ್ ವಿಡಿಯೊವೊಂದರಲ್ಲಿ ವಿರಾಟ್​ ಕೊಹ್ಲಿ ನಾಯಕತ್ವದಡಿ ಮತ್ತು ತಂಡದ ಸ್ಟಾರ್ ಬ್ಯಾಟ್ಸ್​ಮನ್ ಎಬಿ ಡಿ ವಿಲಿಯರ್ಸ್ ಜೊತೆ ಆಡಲು ಉತ್ಸುಕನಾಗಿದ್ದೇನೆ ಅಂತ ಹೇಳಿದ್ದಾರೆ.

‘ಎಲ್ಲರಿಗೂ ನಮಸ್ಕಾರ! ನಾನು ಗ್ಲೆನ್ ಮ್ಯಾಕ್ಸ್​ವೆಲ್ ಮಾತಾಡ್ತಿದ್ದೀನಿ. ಆರ್​ಸಿಬಿಯ ಭಾಗವಾಗಿರುವುದಕ್ಕೆ ಸಂತೋಷವಾಗಿದೆಯೆಂದು ನಿಮಗೆ ಹೇಳಬಯಸುತ್ತೇನೆ. ಗುರುವಾರದಂದು ನಡೆದ ಹರಾಜು ಪ್ರಕ್ರಿಯೆ ಆದ್ಭುತವಾಗಿತ್ತು. ರಾತ್ರಿಯಿಡೀ ನಾನು ಎಚ್ಚರವಾಗಿದ್ದೆ, ನನಗೆ ಶುಭ ಕೋರಿರುವವರಿಗೆಲ್ಲ ಧನ್ಯವಾದಗಳು,’ ಆಂತ ಮಾಕ್ಸ್​ವೆಲ್ ಹೇಳಿರುವ ವಿಡಿಯೊವನ್ನು ಆರ್​ಸಿಬಿ ತನ್ನ ಇನ್​ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ಶೇರ್ ಮಾಡಿದೆ.

‘ಈ ಬಾರಿಯ ಐಪಿಎಲ್​ ಸೀಸನ್​ಗೆ ಮುಂಚೆ ಸಿಗುತ್ತಿರುವ ಸಹಕಾರ ಮತ್ತು ಟೂರ್ನಮೆಂಟ್ ಸೃಷ್ಟಿಸುತ್ತಿರುವ ರೋಮಾಂಚನ ಕಂಡು ಬೆರಗುಗೊಂಡಿದ್ದೇನೆ. ಹಾಗೆಯೇ ವಿರಾಟ್​ ಕೊಹ್ಲಿ ನಾಯಕತ್ವದಡಿಯಲ್ಲಿ ಮತ್ತು ಎಬಿ ಡಿ ವಿಲಿಯರ್ಸ್​ ಅವರೊಂದಿಗೆ ಆಡುವುದನ್ನು ಕಾತುರತೆಯಿಂದ ಎದುರುನೋಡುತ್ತಿದ್ದೇನೆ,’ ಎಂದು ವಿಡಿಯೊದಲ್ಲಿ ಮ್ಯಾಕ್ಸ್​ವೆಲ್ ಹೇಳಿದ್ದಾರೆ.

‘ನನ್ನಿಬ್ಬರು ಸ್ನೇಹಿತರಾಗಿರುವ ಆಡಮ್ ಜಂಪಾ ಮತ್ತು ಕೇನ್ ರಿಚರ್ಡ್ಸನ್ ಆರ್​ಸಿಬಿಯಲ್ಲೇ ಇದ್ದಾರೆ. ಯುಜ್ವೇಂದ್ರ ಚಹಲ್​ ನನ್ನ ಹಳೆಯ ಮಿತ್ರರಲ್ಲೊಬ್ಬರು. ಮುಂಬೈ ಟೀಮಿಗೆ ಆಡಿದ ನಂತರ ನಾವಿಬ್ಬರು ಪುನಃ ಜೊತೆಯಾಗಿ ಆಡಿಲ್ಲ. ಇವರೆಲ್ಲರೊಂದಿಗೆ ಆಡಲು ಮತ್ತು ಆರ್​ಸಿಬಿ ಈ ಸಲ ಮೊದಲ ಬಾರಿಗೆ ಟ್ರೋಫಿ ಗೆಲ್ಲಲು ಸಾಧ್ಯವಾಗುವಂತೆ ಮಾಡಲು ಕಾತುರನಾಗಿದ್ದೇನೆ,’ ಎಂದು ಮಾಕ್ಸ್​ವೆಲ್ ಹೇಳಿದ್ದಾರೆ

Virat Kohli and AB de Villiers

ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲ್ಲಿಯರ್ಸ್

ಅಂದಹಾಗೆ, ಮಾಕ್ಸ್​ವೆಲ್ ಈ ಬಾರಿಯ ಐಪಿಎಲ್​ ಸೀಸನ್​ಗೆ ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾಗಿರುವ ವಿದೇಶಿ ಆಟಗಾರನೇನೂ ಅಲ್ಲ. ನ್ಯೂಜಿಲೆಂಡ್​ನ ವೇಗ್ ಬೌಲರ್ ಕೈಲ್ ಮಿಲ್ಸ್ ರೂ15 ಕೋಟಿಗೆ ಬಿಕರಿಯಾಗಿದ್ದರೆ, ದಕ್ಷಿಣ ಆಫ್ರಿಕಾದ ಆಲ್-ರೌಂಡರ್ ಕ್ರಿಸ್ ಮೊರಿಸ್​​ಗೆ ರೂ. 16.25 ಕೊಟಿ ಸಿಕ್ಕಿದೆ. 2012ರಿಂದ ಐಪಿಎಲ್ ಆಡುತ್ತಿರುವ ಮ್ಯಾಕ್ಸ್​ವೆಲ್ ಇದುವೆರೆಗೆ ಆಡಿರುವ 82 ಪಂದ್ಯಗಳಿಂದ 22.13 ಸರಾಸರಿಯಲ್ಲಿ 1,505 ರನ್ ಗಳಿಸಿದ್ದಾರೆ. 95 ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಮತ್ತು 6 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ತಮ್ಮ ಆಫ್-ಸ್ಪಿನ್ ಬೌಲಿಂಗ್​ನಿಂದ 19 ವಿಕೆಟ್​ಗಳನ್ನು ಪಡೆದಿದ್ದಾರೆ.

2014ರ ಐಪಿಎಲ್​ ಸೀಸನ್​ನಲ್ಲಿ ಮಾತ್ರ ಮ್ಯಾಕ್ಸ್​ವೆಲ್ ಉತ್ಕೃಷ್ಟ ಪ್ರದರ್ಶನಗಳನ್ನು ನೀಡಿದ್ದರು. ಆ ಸೀಸನ್​ನಲ್ಲಿ ಆಡಿದ 16 ಪಂದ್ಯಗಳಲ್ಲಿ ಅವರು 34.50 ಸರಾಸರಿಯಲ್ಲಿ 552 ರನ್​ಗಳನ್ನು 187.75 ಸ್ಟ್ರೈಕ್ ರೇಟ್​ನೊಂದಿಗೆ ಬಾರಿಸಿದ್ದರು.

ಇದನ್ನೂ ಓದಿ: IPL 2021 Auction RCB Players List: ಈ ಸಲವಾದರೂ ಕಪ್​ ನಮ್ದೇ? ಹೀಗಿದೆ ನೋಡಿ ಆರ್​​​ಸಿಬಿ ಹೊಸ ತಂಡ..

Published On - 4:49 pm, Sat, 20 February 21

Follow Us
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ