India vs England: ಅಂತಿಮ ಟೆಸ್ಟ್​ನಲ್ಲಿ ಉಭಯ ತಂಡದ ಆಟಗಾರರಿಂದ ಸೃಷ್ಟಿಯಾಗಲಿರುವ ಹಲವು ದಾಖಲೆಗಳ ಪಟ್ಟಿ ಇಲ್ಲಿದೆ..!

India vs England: ಅಶ್ವಿನ್ ಇಂಗ್ಲೆಂಡ್ ವಿರುದ್ಧದ 18 ಟೆಸ್ಟ್ ಪಂದ್ಯಗಳಲ್ಲಿ 80 ವಿಕೆಟ್ ಪಡೆದಿದ್ದರೆ, ಕಪಿಲ್ ದೇವ್ 27 ಟೆಸ್ಟ್ ಪಂದ್ಯಗಳಲ್ಲಿ 85 ವಿಕೆಟ್ ಪಡೆದಿದ್ದಾರೆ.

India vs England: ಅಂತಿಮ ಟೆಸ್ಟ್​ನಲ್ಲಿ ಉಭಯ ತಂಡದ ಆಟಗಾರರಿಂದ ಸೃಷ್ಟಿಯಾಗಲಿರುವ ಹಲವು ದಾಖಲೆಗಳ ಪಟ್ಟಿ ಇಲ್ಲಿದೆ..!
pruthvi Shankar

|

Mar 03, 2021 | 3:42 PM

ಅಹಮದಾಬಾದ್​: ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದ ನಂತರ, ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡವು ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನೊಂದಿಗೆ ಸೆಣಸಾಡಲಿದೆ. ನಿರ್ಣಾಯಕ ಪಂದ್ಯದಲ್ಲಿ ಗೆಲುವು ದಾಖಲಿಸುವುದರೊಂದಿಗೆ ಟೀಂ ಇಂಡಿಯಾ ವಿಶ್ವ ಟೆಸ್ಟ್​ ಚಾಂಪಿಯನ್‌ಶಿಪ್ ಫೈನಲ್​ ಪ್ರವೇಶಿಸಲು ಹವಣಿಸುತ್ತಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಲು ಭಾರತಕ್ಕೆ 2-1 ಅಥವಾ 3-1 ರಿಂದ ಸರಣಿ ಗೆಲುವು ಬೇಕಾಗಿದೆ. ಈ ಎರಡು ತಂಡಗಳ ಫೈನಲ್ ಪಂದ್ಯವನ್ನು ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ಆಡಲು ನಿರ್ಧರಿಸಲಾಗಿದೆ. ಕೊಹ್ಲಿ ಹುಡುಗರು, ಇಂಗ್ಲೆಂಡ್ ವಿರುದ್ಧ 3-1 ಅಂತರದಿಂದ ಸರಣಿಯನ್ನು ಗೆಲ್ಲುವುದರೊಂದಿಗೆ, ಎರಡೂ ತಂಡಗಳ ಹಲವು ಆಟಗಾರರು ನಾಲ್ಕನೇ ಟೆಸ್ಟ್​ನಲ್ಲಿ ತಮ್ಮ ವೈಯಕ್ತಿಕ ಖಾತೆಗೆ ಹಲವು ದಾಖಲೆಗಳನ್ನು ಹಾಕಿಕೊಳ್ಳಲ್ಲಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ಆಟಗಾರರು ಮುಂದಿನ ಪಂದ್ಯದಲ್ಲಿ ಸೃಷ್ಟಿಸುವ ದಾಖಲೆಗಳು ಹೀಗಿವೆ..

– ಇಂಗ್ಲೆಂಡ್ ವಿರುದ್ಧ ಹೆಚ್ಚಿನ ವಿಕೆಟ್ ಪಡೆದಿರುವ ಭಾರತದ ಮಾಜಿ ಆಟಗಾರ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯಲು ರವಿಚಂದ್ರನ್ ಅಶ್ವಿನ್‌ಗೆ 6 ವಿಕೆಟ್ ಅಗತ್ಯವಿದೆ. ಅಶ್ವಿನ್ ಇಂಗ್ಲೆಂಡ್ ವಿರುದ್ಧದ 18 ಟೆಸ್ಟ್ ಪಂದ್ಯಗಳಲ್ಲಿ 80 ವಿಕೆಟ್ ಪಡೆದಿದ್ದರೆ, ಕಪಿಲ್ ದೇವ್ 27 ಟೆಸ್ಟ್ ಪಂದ್ಯಗಳಲ್ಲಿ 85 ವಿಕೆಟ್ ಪಡೆದಿದ್ದಾರೆ.

– ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 100 ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಅಶ್ವಿನ್​ಗೆ 1 ವಿಕೆಟ್​ ಬೇಕಾಗಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 107 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

Sourav Ganguly – ವೆಸ್ಟ್​ ಇಂಡೀಸ್​ ತಂಡದ ಕರ್ಟ್ಲಿ ಆಂಬ್ರೋಸ್ ಅವರ 405 ಟೆಸ್ಟ್ ವಿಕೆಟ್‌ಗಳ ದಾಖಲೆಯನ್ನು ಮೀರಿಸಲು ಅಶ್ವಿನ್‌ಗೆ 5 ವಿಕೆಟ್ ಅಗತ್ಯವಿದೆ. ಅಶ್ವಿನ್ ಇದುವರೆಗೆ 77 ಟೆಸ್ಟ್ ಪಂದ್ಯಗಳಲ್ಲಿ 401 ವಿಕೆಟ್ ಪಡೆದಿದ್ದಾರೆ.

– ನಾಲ್ಕನೇ ಟೆಸ್ಟ್‌ನಲ್ಲಿ ಅಶ್ವಿನ್ ಐದು ವಿಕೆಟ್‌ಗಳನ್ನು ಕಬಳಿಸಿದರೆ, ಗ್ಲೆನ್ ಮೆಕ್‌ಗ್ರಾತ್ ಟೆಸ್ಟ್‌ನಲ್ಲಿ ಐದು ವಿಕೆಟ್​ಗಳನ್ನು 29 ಬಾರಿ ತೆಗೆದಿರುವ ದಾಖಲೆಯನ್ನು ಮುರಿಯುತ್ತಾರೆ. ಅಶ್ವಿನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 29 ಬಾರಿ ಐದು ವಿಕೆಟ್ ಪಡೆದಿದ್ದಾರೆ.

– ನಾಲ್ಕನೇ ಟೆಸ್ಟ್‌ನಲ್ಲಿ ಅಶ್ವಿನ್ 10 ವಿಕೆಟ್ ಕಬಳಿಸಲು ಸಾಧ್ಯವಾದರೆ, ಅವರು ಟೆಸ್ಟ್​ನಲ್ಲಿ ಏಳು ಬಾರಿ 10 ವಿಕೆಟ್‌ಗಳನ್ನು ಪಡೆದ ಡೆನಿಸ್ ಲಿಲ್ಲಿಯ ದಾಖಲೆಯನ್ನು ಮೀರಿಸಲ್ಲಿದ್ದಾರೆ.

– ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವವರ ಪಟ್ಟಿಯಲ್ಲಿ ಕ್ಲೈವ್ ಲಾಯ್ಡ್ ಅವರನ್ನು ಮೀರಿಸಲು ವಿರಾಟ್ ಕೊಹ್ಲಿಗೆ 25 ರನ್ ಅಗತ್ಯವಿದೆ. ಕೊಹ್ಲಿ 90 ಟೆಸ್ಟ್ ಪಂದ್ಯಗಳಲ್ಲಿ 7490 ರನ್ ಗಳಿಸಿದರೆ, ಲಾಯ್ಡ್ 110 ಟೆಸ್ಟ್​ಗಳಲ್ಲಿ 7515 ರನ್ ಗಳಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕೊಹ್ಲಿ ಮಾರ್ಕ್ ಟೇಲರ್ (ಆಸ್ಟ್ರೇಲಿಯಾ, 7525 ರನ್), ಮೊಹಮ್ಮದ್ ಯೂಸುಫ್ (ಪಾಕಿಸ್ತಾನ, 7530 ರನ್), ಮತ್ತು ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ, 7540 ರನ್) ಅವರ ದಾಖಲೆಯನ್ನು ಮುರಿಯಬಹುದಾಗಿದೆ.

– ನಾಯಕನಾಗಿ ಅತಿ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಆಡಿದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಯ ದಾಖಲೆ ಸರಿಗಟ್ಟಲು ಕೊಹ್ಲಿಗೆ ಇನ್ನೊಂದು ಪಂದ್ಯ ಮಾತ್ರ ಬೇಕಾಗಿದೆ. ಇದುವರೆಗೆ ಧೋನಿ ನಾಯಕನಾಗಿ 60 ಟೆಸ್ಟ್​ ಪಂದ್ಯಗಳನ್ನ ಆಡಿದ್ದಾರೆ. ಕೊಹ್ಲಿಗೆ ಮುಂದಿನ ಪಂದ್ಯ 60ನೇ ಪಂದ್ಯವಾಗಿದೆ.

virat kohli – ಕೊಹ್ಲಿ ನಾಯಕತ್ವದಲ್ಲಿ ಆಡುತ್ತಿರುವ ಚೇತೇಶ್ವರ ಪೂಜಾರ 4000 ರನ್ ಪೂರ್ಣಗೊಳಿಸಲು 72 ರನ್ ಅಗತ್ಯವಿದೆ. 84 ಟೆಸ್ಟ್‌ಗಳಲ್ಲಿ 46.81 ಸರಾಸರಿಯಲ್ಲಿ 6227 ರನ್ ಗಳಿಸಿರುವ ಪೂಜಾರ, ಧೋನಿ ನಾಯಕತ್ವದಲ್ಲಿ 1979 ರನ್ ಮತ್ತು ರಹಾನೆ ಅವರ ಅಡಿಯಲ್ಲಿ 320 ರನ್ ಗಳಿಸಿದ್ದಾರೆ.

– ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವವರ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ಅವರನ್ನು ಮೀರಿಸಲು ಜೋ ರೂಟ್‌ಗೆ 5 ರನ್ ಅಗತ್ಯವಿದೆ. ರೂಟ್ 102 ಟೆಸ್ಟ್ ಪಂದ್ಯಗಳಲ್ಲಿ 8582 ರನ್ ಗಳಿಸಿದರೆ, ಸೆಹ್ವಾಗ್ 104 ಪಂದ್ಯಗಳಲ್ಲಿ 8586 ರನ್ ಗಳಿಸಿದ್ದಾರೆ. ರೂಟ್ ಹೆಚ್ಚು ಸಮಯ ಬ್ಯಾಟಿಂಗ್ ಮಾಡಲು ಸಾಧ್ಯವಾದರೆ, ಇಂಗ್ಲೆಂಡ್ ನಾಯಕ ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ, 8625 ರನ್) ಮತ್ತು ಮೈಕೆಲ್ ಕ್ಲಾರ್ಕ್ (ಆಸ್ಟ್ರೇಲಿಯಾ, 8643 ರನ್) ಅವರ ದಾಖಲೆಯನ್ನು ಸಹ ಮೀರಬಹುದು.

– ಹೆಚ್ಚು ಟೆಸ್ಟ್ ವಿಕೆಟ್‌ ಪಡೆದವರ ಪಟ್ಟಿಯಲ್ಲಿರುವ ಅನಿಲ್ ಕುಂಬ್ಳೆ (132 ರಲ್ಲಿ 619 ವಿಕೆಟ್) ಅವರನ್ನು ಮೀರಿಸಲು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್‌ಗೆ 9 ವಿಕೆಟ್ ಅಗತ್ಯವಿದೆ. ಆಂಡರ್ಸನ್ ಇದುವರೆಗೆ 159 ಟೆಸ್ಟ್ ಪಂದ್ಯಗಳಲ್ಲಿ 611 ವಿಕೆಟ್ ಪಡೆದಿದ್ದಾರೆ.

– ಕರ್ಟ್ನಿ ವಾಲ್ಷ್ ಅವರ 519 ಟೆಸ್ಟ್ ವಿಕೆಟ್‌ಗಳ ದಾಖಲೆ ಮುರಿಯಲು ಸ್ಟುವರ್ಟ್ ಬ್ರಾಡ್‌ಗೆ ಕೇವಲ 2 ವಿಕೆಟ್‌ಗಳ ಅಗತ್ಯವಿದೆ. ಬ್ರಾಡ್ ಇದುವರೆಗೆ 146 ಟೆಸ್ಟ್‌ಗಳಲ್ಲಿ 517 ವಿಕೆಟ್​ ಪಡೆದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada