ಕಾಡು ಬಿಟ್ಟು ನಾಡಿನತ್ತ.. ಜಮೀನಿನಲ್ಲಿ ತೆವಳುತ್ತಾ, ಆತಂಕ ಹುಟ್ಟಿಸಿದ್ದ ಭಾರಿ ಗಾತ್ರದ ಹೆಬ್ಬಾವು ಸೆರೆ

ಕಾಡು ಬಿಟ್ಟು ನಾಡಿನತ್ತ ಪ್ರಯಾಣ ಬೆಳೆಸಿದ್ದ ಭಾರಿ ಗಾತ್ರದ ಹೆಬ್ಬಾವೊಂದನ್ನು ಸೆರೆಹಿಡಿದಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಅತ್ತೂರಿನಲ್ಲಿ ನಡೆದಿದೆ. ಸುಮಾರು 10 ಅಡಿ ಉದ್ದ ಹಾಗೂ 12 ಕೆ.ಜಿ. ತೂಕದ ಹೆಬ್ಬಾವನ್ನು ಸೆರೆಹಿಡಿಯಲಾಗಿದೆ.

ಕಾಡು ಬಿಟ್ಟು ನಾಡಿನತ್ತ.. ಜಮೀನಿನಲ್ಲಿ ತೆವಳುತ್ತಾ, ಆತಂಕ ಹುಟ್ಟಿಸಿದ್ದ ಭಾರಿ ಗಾತ್ರದ ಹೆಬ್ಬಾವು ಸೆರೆ
ಭಾರಿ ಗಾತ್ರದ ಹೆಬ್ಬಾವು ಸೆರೆ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Dec 15, 2020 | 11:22 AM

ಕೊಡಗು: ಕಾಡು ಬಿಟ್ಟು ನಾಡಿನತ್ತ ಪ್ರಯಾಣ ಬೆಳೆಸಿದ್ದ ಭಾರಿ ಗಾತ್ರದ ಹೆಬ್ಬಾವೊಂದನ್ನು ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಅತ್ತೂರಿನಲ್ಲಿ ನಡೆದಿದೆ. ಸುಮಾರು 10 ಅಡಿ ಉದ್ದ ಹಾಗೂ 12 ಕೆ.ಜಿ. ತೂಕದ ಹೆಬ್ಬಾವನ್ನು ಸೆರೆಹಿಡಿಯಲಾಗಿದೆ.

ಅತ್ತೂರಿನ ನಿವಾಸಿ ಕುರುಂಜಿ ವಿನು ಎಂಬುವವರ ಜಮೀನಿನಲ್ಲಿ ಹೆಬ್ಬಾವು ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಸ್ನೇಕ್ ಸಾಜಿಯಿಂದ ಹೆಬ್ಬಾವನ್ನ ರಕ್ಷಿಸಿದ್ದಾರೆ. ಸದ್ಯ, ಸೆರೆಹಿಡಿದ ಹೆಬ್ಬಾವನ್ನ ಆನೆಕಾಡು ಮಿಸಲು ಅರಣ್ಯದಲ್ಲಿ ಬಿಡುಗಡೆ ಮಾಡಿದ್ದಾರೆ.