ಜೀವನಾಡಿಯಾಗಿದ್ದ ಚಂದಾಪುರ ಕೆರೆ ಅವಸಾನದತ್ತ.. ಕೆರೆಯ ಗೋಳು ಕೇಳೋರು ಯಾರು?

ಅದೊಂದು ಕಾಲದಲ್ಲಿ ಸುಂದರವಾದ ಕೆರೆ. ಜಾನುವಾರುಗಳು ಮತ್ತು ಕುಡಿಯೋ ನೀರಿಗೆ ಸುತ್ತಮುತ್ತಲಿನ ಹಳ್ಳಿಗಳಿಗೆ ಯಾವುದೇ ತೊಂದರೆ ಇರಲಿಲ್ಲ. ಆದ್ರೆ ದಿನ ಕಳೆದಂದೆತ ಕೆಮಿಕಲ್‌ ಮಿಶ್ರಣದಿಂದಾಗಿ ಆ ಕೆರೆ ಸಂಪೂರ್ಣ ಹಾಳಾಗಿದ್ದು, ಕೃಷಿಗೂ ಬಳಸಿಕೊಳ್ಳೋದಕ್ಕೂ ಆಗ್ತಿಲ್ಲ.

ಜೀವನಾಡಿಯಾಗಿದ್ದ ಚಂದಾಪುರ ಕೆರೆ ಅವಸಾನದತ್ತ.. ಕೆರೆಯ ಗೋಳು ಕೇಳೋರು ಯಾರು?
ಚಂದಾಪುರ ಕೆರೆ
Follow us
ಆಯೇಷಾ ಬಾನು
| Updated By: guruganesh bhat

Updated on:Dec 15, 2020 | 2:53 PM

ಆನೇಕಲ್: ನೋಡೋದಕ್ಕೆ ಸುಂದರವಾದ, ಸಂಪೂರ್ಣವಾಗಿ ಭರ್ತಿಯಾದ ಕೆರೆ. ಆದರೆ ಈ ಕೆರೆ, ಕೇವಲ ನೋಡುಗರ ಕಣ್ಣುಗಳನ್ನು ತಣಿಸುವದಕ್ಕೆ ಮಾತ್ರ ಮೀಸಲಾಗಿದೆ. ಇದರಿಂದ ಯಾವುದೇ ಉಪಯೋಗ ಆಗುತ್ತಿಲ್ಲ. ಅಂದಹಾಗೆ, ನಾವು ಹೇಳುತ್ತಿರುವುದು ನಗರದ ಚಂದಾಪುರದ ಕೆರೆಯ ಬಗ್ಗೆ.

ಒಂದು ಕಾಲದಲ್ಲಿ ಈ ಚಂದಾಪುರ ಕೆರೆ ಹತ್ತಾರು ಹಳ್ಳಿಗಳಿಗೆ ಜೀವನಾಡಿಯಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿರುವ ಈ ಕೆರೆ ಹಿಂದೆ ಒಂದು ಸುಂದರವಾದ ತಾಣವಾಗಿತ್ತು. ಆದರೀಗ, ಇದರ ಬಳಿ ಸುಳಿಯಲು ಜನ ಹಿಂದೇಟು ಹಾಕುತ್ತಿದ್ದಾರೆ. ಕಾರಣ, ಕೆರೆಯಲ್ಲಿ ಉಂಟಾಗಿರುವ ಮಾಲಿನ್ಯ.

ಹೌದು, ನಗರಗಳು ಬೆಳೆಯುತ್ತಿದ್ದಂತೆ ಪ್ರಕೃತಿಗೆ ಸಂಕಷ್ಟ ಎದುರಾಗುತ್ತದೆ ಅನ್ನುವುದು ಇಲ್ಲಿ ನಿಜವಾಗಿದೆ. ಅಂದಹಾಗೆ, ಈ ಕೆರೆ ಪಕ್ಕದಲ್ಲಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶವಿದೆ. ಹಾಗಾಗಿ, ಪ್ರತಿನಿತ್ಯ ಇಲ್ಲಿನ ಕಾರ್ಖಾನೆಗಳಿಂದ ಸಾವಿರಾರು ಲೀಟರ್‌ ಕೆಮಿಕಲ್ ಮಿಶ್ರಿತ ನೀರು‌ ಕೆರೆಪಾಲಾಗಿ ಕೆರೆ ಸಂಪೂರ್ಣವಾಗಿ ಮಾಲಿನ್ಯಗೊಂಡಿದ್ದು, ಅದರ ನೀರು ಜಾನುವಾರುಗಳಿಗೆ ಕುಡಿಯೋದಕ್ಕೂ ಯೋಗ್ಯವಿರದಷ್ಟೂ ಮಲಿನಗೊಂಡಿದೆ. ಜೊತೆಗೆ, ಕೆರೆದಂಡೆಯಲ್ಲಿ ಎಗ್ಗಿಲ್ಲದೆ ಬಿಸಾಡುತ್ತಿರುವ ತ್ಯಾಜ್ಯದ ರಾಶಿ ಕೆರೆಯ ಪರಿಸರವನ್ನು ಮತ್ತಷ್ಟು ಹಾಳುಮಾಡಿದೆ.

ಇನ್ನು, ಈ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಎಷ್ಟೇ ಬಾರಿ ದೂರು ನೀಡಿದರೂ ಅವರು ಮಾತ್ರ ಇತ್ತ ತಲೆಹಾಕುತ್ತಿಲ್ಲ. ಉದ್ಯಾನನಗರಿ, ಕೆರೆಗಳ ತವರೂರು ಎಂದೇ ಖ್ಯಾತಿ ಪಡೆದಿರುವ ನಗರದಲ್ಲಿ ಇದೀಗ ಬೆರಳೆಣಿಕೆಯಷ್ಟು ಮಾತ್ರ ಕೆರೆಗಳು ಉಳಿದಿವೆ. ಈಗ, ಚಂದಾಪುರ ಕೆರೆಯಲ್ಲೂ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಒಂದು ಕಾಲದಲ್ಲಿ ಇಲ್ಲೊಂದು ಕೆರೆಯಿತ್ತು ಅನ್ನುವ ವಿಷಯವನ್ನು ಮುಂದಿನ ಪೀಳಿಗೆ ತಮ್ಮ ಹಿರಿಯರು ಹೇಳುವ ಕಥೆಯಲ್ಲಿ ಮಾತ್ರ ತಿಳಿದುಕೊಳ್ಳುವ ಸ್ಥಿತಿ ಎದುರಾಗಬಹುದು. -ಅಜಯ್ ಕುಮಾರ್

ಔಷಧಿ ತಯಾರಿಕಾ ಘಟಕದ ತ್ಯಾಜ್ಯ ಸೀದಾ ಕೆರೆಗೆ: ಜೀವ ಸಂಕುಲಕ್ಕೆ ಎದುರಾಯ್ತು ಪ್ರಾಣ ಸಂಕಟ

Published On - 1:02 pm, Tue, 15 December 20