ಪಾರ್ಟಿ ಮಾಡೋಣ ಬಾ.. ಎಂದು ಕರೆದು ಯುವತಿ ಮೇಲೆ ಎರಗಿದ ಕಾಮುಕ ಸ್ನೇಹಿತರು! ಒಬ್ಬ ಅರೆಸ್ಟ್
ಪಾರ್ಟಿ ಮಾಡೋಣ ಬಾ ಅಂತ ಕರೆದು ಎಣ್ಣೆ ಮತ್ತಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಆರ್.ಆರ್ ನಗರದಲ್ಲಿ ನಡೆದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರು: ಪಾರ್ಟಿ ಮಾಡೋಣ ಬಾ ಅಂತ ಕರೆದು ಎಣ್ಣೆ ಮತ್ತಲ್ಲಿ ಕ್ಲಾಸ್ ಮೇಟ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಆರ್.ಆರ್. ನಗರ ವ್ಯಾಪ್ತಿಯ ಐಡಿಯಲ್ ಹೋಮ್ಸ್ ಲೇಔಟ್ನಲ್ಲಿ ನಡೆದಿದೆ.
ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳು ಪಾರ್ಟಿ ಮಾಡುವ ನೆಪದಲ್ಲಿ ಯುವತಿಯನ್ನು ಫ್ಲಾಟ್ಗೆ ಕರೆದು ಅವಳ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಛತ್ತೀಸ್‌ಗಢ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ತುಷಾರ್ ಎಂಬ ಯುವಕ ಮತ್ತು ಆತನ ಸ್ನೇಹಿತರು ಪಾರ್ಟಿಗೆ ಆಹ್ವಾನಿಸಿದ್ದರು. ಎಲ್ಲರೂ ತಿಳಿದವರೇ, ಗೆಳೆಯರೇ ಎಂದು ಸಂತ್ರಸ್ಥ ಯುವತಿ ಪಾರ್ಟಿಗೆ ಹೋಗಿದ್ದಾಳೆ.
ಆದರೆ ಅಲ್ಲಿ ಯುವತಿಯ ಕೈಯಲ್ಲೇ ಮದ್ಯವನ್ನು ತರಿಸಿಕೊಂಡು ತುಷಾರ್ ಮತ್ತು ಆತನ ಸ್ನೇಹಿತರು ರಾತ್ರಿ ಪೂರ್ತಿ ಫ್ಲಾಟ್ನಲ್ಲೇ ಎಣ್ಣೆ ಪಾರ್ಟಿ ಮಾಡಿ ಫುಲ್ ಟೈಟ್ ಆಗಿದ್ದಾರೆ. ಬಳಿಕ ನಿದ್ರೆಗೆ ಜಾರಿದ ಯುವತಿಯ ಮೇಲೆ ಎರಗಿ ಮೃಗಗಳಂತೆ ವರ್ತಿಸಿದ್ದಾರೆ. ಸ್ನೇಹಿತರು ಎಂದು ನಂಬಿದ್ದವರೆ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ಕೂಡಲೇ ಅಪಾರ್ಟ್ಮೆಂಟ್ನಿಂದ ಹೊರಬಂದು ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ. ಈ ಬಗ್ಗೆ ಸಂತ್ರಸ್ಥ ಯುವತಿ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ಆಧರಿಸಿ ಪೊಲೀಸರು ಆರೋಪಿ ತುಷಾರ್ನನ್ನು ಬಂಧಿಸಿದ್ದಾರೆ.
ಕೊರೊನಾ ವೇಳೆ ಮನೆಯಲ್ಲಿದ್ದ ಬಾಲಕಿ ಮೇಲೆ ವೃದ್ಧನಿಂದ ರೇಪ್: ಗರ್ಭಿಣಿ ಪೋಷಕರಿಂದ ದೂರು, ಕಾಮುಕ ಅರೆಸ್ಟ್