AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯ್​ಫ್ರೆಂಡ್​ಗಾಗಿ.. ಯುವತಿಯರ ಬೆತ್ತಲೆ ವಿಡಿಯೋ ಮಾಡ್ತಿದ್ದ ನರ್ಸ್ ಕೊನೆಗೂ ಅಂದರ್​

ಬಾಯ್​ಫ್ರೆಂಡ್​ಗಾಗಿ ಯುವತಿಯರ ಬೆತ್ತಲೆ ವಿಡಿಯೋ ಮಾಡ್ತಿದ್ದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ವೈಟ್​ಫೀಲ್ಡ್​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪ್ರೇಮಿಗಳನ್ನು ಆಶ್ಚಿನಿ ಹಾಗೂ ಪ್ರಭು ಎಂದು ಗುರುತಿಸಲಾಗಿದೆ.

ಬಾಯ್​ಫ್ರೆಂಡ್​ಗಾಗಿ.. ಯುವತಿಯರ ಬೆತ್ತಲೆ ವಿಡಿಯೋ ಮಾಡ್ತಿದ್ದ ನರ್ಸ್ ಕೊನೆಗೂ ಅಂದರ್​
ಬಂಧಿತ ಆರೋಪಿ ಪ್ರಭು
guruganesh bhat
| Edited By: |

Updated on: Dec 15, 2020 | 5:39 PM

Share

ಬೆಂಗಳೂರು: ಬಾಯ್​ಫ್ರೆಂಡ್​ಗಾಗಿ ಯುವತಿಯರ ಬೆತ್ತಲೆ ವಿಡಿಯೋ ಮಾಡ್ತಿದ್ದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ವೈಟ್​ಫೀಲ್ಡ್​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪ್ರೇಮಿಗಳನ್ನು ಆಶ್ಚಿನಿ ಹಾಗೂ ಪ್ರಭು ಎಂದು ಗುರುತಿಸಲಾಗಿದೆ. ನಗರದ ವೈಟ್​ಫೀಲ್ಡ್​ನಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅಶ್ವಿನಿ ತನ್ನ ಪ್ರಿಯಕರ ಪ್ರಭುವಿನೊಂದಿಗೆ ಜೊತೆಗೂಡಿ ಈ ಕುಕೃತ್ಯದಲ್ಲಿ ಭಾಗಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಆಸ್ಪತ್ರೆಯ ಲೆಡೀಸ್​ ಹಾಸ್ಟಲ್​ನಲ್ಲಿ ತಂಗಿದ್ದ ನರ್ಸ್​ಗಳು ಸ್ನಾನದ ಕೋಣೆಗೆ ತೆರಳುತ್ತಿದ್ದ ವೇಳೆ ಅಶ್ವಿನಿ ಅಲ್ಲಿ ಮೊಬೈಲ್ ಇಟ್ಟು ಅವರ ಬೆತ್ತಲೆ ವಿಡಿಯೋಗಳನ್ನ ರೆಕಾರ್ಡ್​ ಮಾಡಿಕೊಳ್ಳುತ್ತಿದ್ದಳು ಎಂದು ಹೇಳಲಾಗಿದೆ. ಬಳಿಕ ಅದನ್ನು ಚೆನ್ನೈನಲ್ಲಿದ್ದ ತನ್ನ ಬಾಯ್​ಫ್ರೆಂಡ್​ ಪ್ರಭುಗೆ ರವಾನಿಸುತ್ತಿದ್ದಳು ಎಂದು ತಿಳಿದುಬಂದಿದೆ.

ಅಂದ ಹಾಗೆ, ಅಶ್ವಿನಿ ಹಾಗೂ ಪ್ರಭು ಕಳೆದ ಎರಡು ವರ್ಷಗಳ ಹಿಂದೆ ಮಿಸ್ಡ್ ಕಾಲ್ ಮೂಲಕ ಪರಿಚಯವಾಗಿದ್ದರಂತೆ. ಚೆನ್ನೈನ ಐಷಾರಾಮಿ ಹೋಟೆಲ್​ನಲ್ಲಿ ಚೀಫ್ ಶೆಫ್ ಆಗಿ ಕೆಲಸ‌ ಮಾಡ್ತಿದ್ದ ಪ್ರಭು ಮೊದಲು ಅಶ್ವಿನಿಗೆ ತಾನು ಸ್ನಾನ ಮಾಡುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿ ಕಳಿಸು ಎಂದು ಹೇಳಿ ತರಿಸಿಕೊಂಡಿದ್ದನಂತೆ. ಬಳಿಕ ನಿನ್ನ ಸಹೋದ್ಯೋಗಿ ನರ್ಸ್​ಗಳ ಬೆತ್ತಲೆ ವಿಡಿಯೋ ಸಹ ಕಳಿಸು ಎಂದು ಡಿಮ್ಯಾಂಡ್ ಮಾಡಿದ್ದನಂತೆ. ಕರುಡು ಪ್ರೀತಿಯೋ ಏನೋ ಗೊತ್ತಿಲ್ಲ. ಆದರೆ, ಅಶ್ವಿನಿ ತನ್ನ ಪ್ರಿಯಕರಿನಿಗೋಸ್ಕರ ಈ ಕೆಟ್ಟ ಕೆಲಸಕ್ಕೂ ಇಳಿದಿದ್ದಳು ಎಂಬುದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳಂತೆ. ಸದ್ಯ, ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಅಶ್ವಿನಿ ಹಾಗೂ ಚೆನ್ನೈನಿಂದ ಆಕೆಯ ಕಾಮುಕ ಪ್ರೇಮಿ ಪ್ರಭುವನ್ನು ಪೊಲೀಸರು ಬಂಧಿಸಿದ್ದಾರೆ.

ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!