ಜಿಕೆವಿಕೆ ಕ್ವಾರಂಟೈನ್‌ ಅವ್ಯವಸ್ಥೆ: ವಿಡಿಯೋ ಮಾಡಿ ಆಕ್ರೋಶ ಹೊರ ಹಾಕಿದ ಅಧಿಕಾರಿಗಳು

ಬೆಂಗಳೂರು: ಸರ್ಕಾರ ಮಾಡಿರುವ ಕ್ವಾರಂಟೈನ್‌ ವ್ಯವಸ್ಥೆ ಬಗ್ಗೆ ಸರ್ಕಾರಿ ಸ್ವಾಮ್ಯದ ಸಿಬ್ಬಂದಿಗಳಿಂದಲೇ ಆಕ್ರೋಶ ವ್ಯಕ್ತವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದ ಅಕಾಡೆಮಿಯ ಇಬ್ಬರು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಆ ಸಿಬಂದಿಯನ್ನು ಜಿಕೆವಿಕೆ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದ್ರೆ ಅಲ್ಲಿನ ಅವ್ಯವಸ್ಥೆ ಬಗ್ಗೆ ಈ ಸಿಬ್ಬಂದಿಯೇ ರೋಸಿ ಹೋಗಿದ್ದಾರೆ. ಕ್ವಾರಂಟೈನ್‌ ಸೆಂಟರ್‌ನಲ್ಲಿ ಸರಿಯಾದ ಸಮಯಕ್ಕೆ ಊಟ, ತಿಂಡಿ ನೀಡ್ತಿಲ್ಲ. ಶೌಚಾಲಯಕ್ಕೆ ಹೋಗಲು ಗಂಟೆ ಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಾದ ಸ್ಥಿತಿ […]

ಜಿಕೆವಿಕೆ ಕ್ವಾರಂಟೈನ್‌ ಅವ್ಯವಸ್ಥೆ: ವಿಡಿಯೋ ಮಾಡಿ ಆಕ್ರೋಶ ಹೊರ ಹಾಕಿದ ಅಧಿಕಾರಿಗಳು
Edited By:

Updated on: Jul 05, 2020 | 2:11 PM

ಬೆಂಗಳೂರು: ಸರ್ಕಾರ ಮಾಡಿರುವ ಕ್ವಾರಂಟೈನ್‌ ವ್ಯವಸ್ಥೆ ಬಗ್ಗೆ ಸರ್ಕಾರಿ ಸ್ವಾಮ್ಯದ ಸಿಬ್ಬಂದಿಗಳಿಂದಲೇ ಆಕ್ರೋಶ ವ್ಯಕ್ತವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದ ಅಕಾಡೆಮಿಯ ಇಬ್ಬರು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಆ ಸಿಬಂದಿಯನ್ನು ಜಿಕೆವಿಕೆ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದ್ರೆ ಅಲ್ಲಿನ ಅವ್ಯವಸ್ಥೆ ಬಗ್ಗೆ ಈ ಸಿಬ್ಬಂದಿಯೇ ರೋಸಿ ಹೋಗಿದ್ದಾರೆ.

ಕ್ವಾರಂಟೈನ್‌ ಸೆಂಟರ್‌ನಲ್ಲಿ ಸರಿಯಾದ ಸಮಯಕ್ಕೆ ಊಟ, ತಿಂಡಿ ನೀಡ್ತಿಲ್ಲ. ಶೌಚಾಲಯಕ್ಕೆ ಹೋಗಲು ಗಂಟೆ ಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ಯಾವುದೇ ವೈದ್ಯರಾಗಲಿ, ನರ್ಸ್‌ಗಳಾಗಲಿ ಬಂದು ಸೋಂಕಿತರನ್ನು ಪರೀಕ್ಷೆ ಮಾಡುತ್ತಿಲ್ಲ. ಇಂಥ ಕ್ವಾರಂಟೈನ್ ಸೆಂಟರ್‌ನಲ್ಲಿ ಬಿಡುವ ಬದಲು ರಸ್ತೆಗೆ ಬಿಡೋದು ಸೂಕ್ತ ಎಂದು ವೀಡಿಯೋದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.