ನಗರದ ರಸ್ತೆಗಳಲ್ಲಿ ಭೀತಿ ಹುಟ್ಟಿಸಿದ ಸೋಂಕಿತನ ಓಡಾಟ, ಸ್ಥಳೀಯರಲ್ಲಿ ಹೆಚ್ಚಾಯ್ತು ಆತಂಕ
ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಆಸ್ಪತ್ರೆಗಳು ಬೆಡ್ ಇಲ್ಲ ಎಂದು ಸೋಂಕಿತರನ್ನು ಸೇರಿಸಿಕೊಳ್ಳುತ್ತಿಲ್ಲ. ಌಂಬುಲೆನ್ಸ್ಗಳ ವ್ಯವಸ್ಥೆ ಇಲ್ಲದೆ. ಬೀದಿ ಬೀದಿಗಳಲ್ಲಿ ಸೋಂಕಿತರು ಅಲೆದಾಡುತ್ತಿದ್ದಾರೆ. ಎಷ್ಟೋ ಮಂದಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಪ್ರಾಣವನ್ನೇ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರನ್ನು ಕೇಳೋರೇ ಇಲ್ಲದಂತಾಗಿದೆ. ವಿವಿ ಪುರಂನ ಮಾವಳ್ಳಿ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿ ಏರಿಯಾದಲ್ಲೆಲ್ಲ ಓಡಾಡುತ್ತಿದ್ದಾನೆ ಎಂಬ ಮಾತು ಕೇಳಿ ಬಂದಿದೆ. ಕೊರೊನಾ ಪಾಸಿಟಿವ್ ವ್ಯಕ್ತಿ ಕಳೆದ 2-3 ದಿನಗಳಿಂದ ಓಡಾಡುತ್ತಿದ್ದು ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. […]

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಆಸ್ಪತ್ರೆಗಳು ಬೆಡ್ ಇಲ್ಲ ಎಂದು ಸೋಂಕಿತರನ್ನು ಸೇರಿಸಿಕೊಳ್ಳುತ್ತಿಲ್ಲ. ಌಂಬುಲೆನ್ಸ್ಗಳ ವ್ಯವಸ್ಥೆ ಇಲ್ಲದೆ. ಬೀದಿ ಬೀದಿಗಳಲ್ಲಿ ಸೋಂಕಿತರು ಅಲೆದಾಡುತ್ತಿದ್ದಾರೆ. ಎಷ್ಟೋ ಮಂದಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಪ್ರಾಣವನ್ನೇ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರನ್ನು ಕೇಳೋರೇ ಇಲ್ಲದಂತಾಗಿದೆ.
ವಿವಿ ಪುರಂನ ಮಾವಳ್ಳಿ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿ ಏರಿಯಾದಲ್ಲೆಲ್ಲ ಓಡಾಡುತ್ತಿದ್ದಾನೆ ಎಂಬ ಮಾತು ಕೇಳಿ ಬಂದಿದೆ. ಕೊರೊನಾ ಪಾಸಿಟಿವ್ ವ್ಯಕ್ತಿ ಕಳೆದ 2-3 ದಿನಗಳಿಂದ ಓಡಾಡುತ್ತಿದ್ದು ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಸೋಂಕಿತನಿಗೆ ವಿಚಾರಿಸಿದರೆ ಬಿಬಿಎಂಪಿ ಸಿಬ್ಬಂದಿ ಕರ್ಕೊಂಡು ಹೋಗಿಲ್ಲಾಂದ್ರೆ ನಾನೇನು ಮಾಡಲಿ? ಎನ್ನುತ್ತಿದ್ದಾರೆ. ಹೀಗಾಗಿ ಸೋಂಕಿತ ವ್ಯಕ್ತಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ್ರು.
ಇನ್ನು ಸೋಂಕಿತೆಯೊಬ್ಬರು ಗಂಟೆಗಟ್ಟಲೆ ಕಾದರೂ ಌಂಬುಲೆನ್ಸ್ ಬಂದಿಲ್ಲ. ಕೊರೊನಾ ಪಾಸಿಟಿವ್ ಇದ್ದರೂ ನಿರ್ಲಕ್ಷ್ಯವಹಿಸಲಾಗಿದೆ. ಬಸವೇಶ್ವರ ನಗರದ ಗ್ರೌಂಡ್ ಬಳಿ ಮಹಿಳೆ ಬೆಳಗ್ಗೆ 8 ಗಂಟೆಯಿಂದ ಌಂಬುಲೆನ್ಸ್ಗಾಗಿ ಕಾಯುತ್ತಿದ್ದಾರೆ. ಕಳೆದ 6 ಗಂಟೆಗಳಿಂದ ಕಾದರೂ ಇನ್ನೂ ಌಂಬುಲೆನ್ಸ್ ಬಂದಿಲ್ಲ. ಮಹಿಳೆಗೆ ಸೋಂಕು ಇರೋ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಆತಂಕ ಶುರುವಾಗಿದೆ. ಬಿಬಿಎಂಪಿ, ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಮಹಿಳೆ ಹೈರಾಣಾಗಿದ್ದಾರೆ.




