ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಮದುವೆ ಛತ್ರಕ್ಕೆ ನೀರು ನುಗ್ಗಿ ಆರತಕ್ಷತೆ ಕಾರ್ಯಕ್ರಮ ಕ್ಯಾನ್ಸಲ್ ಆಗಿದ್ದು ನಾವು ನೋಡಿದ್ವಿ. ಇದೀಗ, ಮುಂಬರುವ ದಿನಗಳಲ್ಲಿ ನಡೆಯಬೇಕಿದ್ದ ನಿಶ್ಚಿತಾರ್ಥದ ಕಾರ್ಯಕ್ರಮಕ್ಕೂ ಮಳೆರಾಯ ಅಡ್ಡಗಾಲು ಹಾಕಿದ್ದಾನೆ.
ಕೆಂಗೇರಿ ಉಪನಗರದಲ್ಲಿ ಸುರಿದ ಭಾರಿ ಮಳೆಗೆ ಯುವತಿಯೊಬ್ಬಳ ಮನೆಗೆ ನೀರು ನುಗ್ಗಿದ್ದು ನಿಶ್ಚಿತಾರ್ಥಕ್ಕೆ ತಂದಿದ್ದ ಎಲ್ಲಾ ವಸ್ತುಗಳು ನೀರಿನಲ್ಲಿ ತೊಯ್ದು ಹೋಗಿ ಹಾನಿಯಾಗಿದೆ. ಹೀಗಾಗಿ, ಯುವತಿಯ ಕುಟುಂಬಸ್ಥರು ಪರದಾಡುವ ಸ್ಥಿತಿ ಎದುರಾಗಿದೆ. ಎಂಗೇಜ್ಮೆಂಟ್ಗೆ ತಂದಿದ್ದ ಬೆಲೆ ಬಾಳುವ ವಸ್ತುಗಳು ಹಾನಿಗೊಳಗಾಗಿದ್ದು ಫಂಕ್ಷನ್ಗೆ ತಂದಿದ್ದ ಬಟ್ಟೆಗಳೂ ಸಹ ನೀರುಪಾಲಾಗಿವೆ. ಹಾಗಾಗಿ, ನಿಶ್ಚಿತಾರ್ಥದ ಖುಷಿಯಲ್ಲಿರಬೇಕಿದ್ದ ಯುವತಿ ಕಂಗಾಲಾಗಿ ಹೋಗಿದ್ದಾಳೆ.
ಮಠದ ಆಹಾರ ಸಾಮಗ್ರಿ ನೀರುಪಾಲು
ಇತ್ತ, ಗಿರಿನಗರದಲ್ಲಿರುವ ಶ್ರೀರಾಮಚಂದ್ರಪುರ ಮಠದಲ್ಲಿ ಇರಿಸಲಾಗಿದ್ದ ಆಹಾರ ಸಾಮಗ್ರಿ ಸಹ ನೀರುಪಾಲಾಗಿರುವ ಘಟನೆ ನಡೆದಿದೆ. ನೂರಾರು ಮೂಟೆ ಅಕ್ಕಿ, ಎಣ್ಣೆ ಪ್ಯಾಕೆಟ್, ತುಪ್ಪ, ಸಕ್ಕರೆ, ಗೋಡಂಬಿ ಮತ್ತು ಗೋಮೂತ್ರ ಉತ್ಪನ್ನಗಳು ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದ ಮಠಕ್ಕೆ ಅಪಾರ ಪ್ರಮಾಣದಲ್ಲಿ ಹಾನಿ ಎದುರಾಗಿದೆ.
Published On - 10:17 am, Sat, 24 October 20