ಬೆಂಗಳೂರು: ಕೊರೊನಾ ಗುಪ್ತಗಾಮಿನಿಯಂತೆ ದೇಶದಲ್ಲಿ ತನ್ನ ಅಟ್ಟಹಾಸ ಮುಂದುವರಿಸಿದೆ. ಮಹಾಮಾರಿ ಸೋಂಕಿನಿಂದ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆ. ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಈರಪ್ಪ ಪಾಟೀಲ್ ಕಳೆದ ಕೆಲವು ದಿನಗಳಿಂದ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದರು. ನಂತರ ಸ್ವಾಬ್ ಟೆಸ್ಟ್ನಲ್ಲಿ ಕೊರೊನಾ ಸೋಂಕು ಇರುವಿದು ದೃಢಪಟ್ಟಿತ್ತು. ಬಳಿಕ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಕಾನ್ಸ್ಟೇಬಲ್ ಈರಪ್ಪ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸೋಂಕಿನ ತೀರದ ಸಾವಿನ ದಾಹ: ಶಿವಮೊಗ್ಗದಲ್ಲಿ ಕೊರೊನಾಗೆ ASI ಬಲಿ
ಬೆಂಗಳೂರು: ಕೊರೊನಾ ಗುಪ್ತಗಾಮಿನಿಯಂತೆ ದೇಶದಲ್ಲಿ ತನ್ನ ಅಟ್ಟಹಾಸ ಮುಂದುವರಿಸಿದೆ. ಮಹಾಮಾರಿ ಸೋಂಕಿನಿಂದ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆ.
ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಈರಪ್ಪ ಪಾಟೀಲ್ ಕಳೆದ ಕೆಲವು ದಿನಗಳಿಂದ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದರು. ನಂತರ ಸ್ವಾಬ್ ಟೆಸ್ಟ್ನಲ್ಲಿ ಕೊರೊನಾ ಸೋಂಕು ಇರುವಿದು ದೃಢಪಟ್ಟಿತ್ತು. ಬಳಿಕ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಕಾನ್ಸ್ಟೇಬಲ್ ಈರಪ್ಪ ಮೃತಪಟ್ಟಿದ್ದಾರೆ.