ರಮೇಶ್ ಜಾರಕಿಹೊಳಿ ಪೂರ್ವಿಕರು ಜೈಲಿನಲ್ಲಿ ಇದ್ದವರು: ಮೊಯ್ಲಿ ಸ್ಫೋಟಕ ಮಾಹಿತಿ

|

Updated on: Nov 25, 2019 | 2:17 PM

ಬೆಂಗಳೂರು: ಕೆ.ಆರ್. ಪುರಂ ಉಪ ಚುನಾವಣೆ ಅಂಗವಾಗಿ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಪರ ಅನೇಕ ನಾಯಕರು ಇಂದು ಭಾರಿ ಪ್ರಚಾರ ನಡೆಸಿದ್ದಾರೆ. ನಾರಾಯಣಸ್ವಾಮಿ ಪರ ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮತ್ತು ಮಾಜಿ ಸಚಿವೆ ಉಮಾಶ್ರೀ ಅವರುಗಳು ಹೊರಮಾವು, ಮೇಘನಾ ಪಾಳ್ಯ ಸೇರಿದಂತೆ ಹಲವು ಭಾಗದಲ್ಲಿ ಪ್ರಚಾರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹಣ ಮಾಡೊ ಆಸೆಯಿಂದ ಬಿಜೆಪಿ ಅಭ್ಯರ್ಥಿ ಅಲ್ಲಿಗೆ ಹೋಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಇದೆ. […]

ರಮೇಶ್ ಜಾರಕಿಹೊಳಿ ಪೂರ್ವಿಕರು ಜೈಲಿನಲ್ಲಿ ಇದ್ದವರು: ಮೊಯ್ಲಿ ಸ್ಫೋಟಕ ಮಾಹಿತಿ
Follow us on

ಬೆಂಗಳೂರು: ಕೆ.ಆರ್. ಪುರಂ ಉಪ ಚುನಾವಣೆ ಅಂಗವಾಗಿ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಪರ ಅನೇಕ ನಾಯಕರು ಇಂದು ಭಾರಿ ಪ್ರಚಾರ ನಡೆಸಿದ್ದಾರೆ. ನಾರಾಯಣಸ್ವಾಮಿ ಪರ ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮತ್ತು ಮಾಜಿ ಸಚಿವೆ ಉಮಾಶ್ರೀ ಅವರುಗಳು ಹೊರಮಾವು, ಮೇಘನಾ ಪಾಳ್ಯ ಸೇರಿದಂತೆ ಹಲವು ಭಾಗದಲ್ಲಿ ಪ್ರಚಾರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಹಣ ಮಾಡೊ ಆಸೆಯಿಂದ ಬಿಜೆಪಿ ಅಭ್ಯರ್ಥಿ ಅಲ್ಲಿಗೆ ಹೋಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಇದೆ. ಎಲ್ಲಾ‌ ಸೇರ್ಕೊಂಡು ಮತ್ತಷ್ಟು ಶ್ರೀಮಂತರಾಗೋಣ ಅಂತಾ ಬಿಜೆಪಿಗೆ ಹೋಗಿದ್ದಾರೆ ಎಂದು ವೀರಪ್ಪ ಮೊಯ್ಲಿ ಲೇವಡಿ ಮಾಡಿದರು.

ಭೈರತಿ ಗೆಲ್ಲೊಲ್ಲ, ಯಡಿಯೂರಪ್ಪ ಸಿಎಂ ಆಗಿ ಇರೋಲ್ಲ..
8 ಸ್ಥಾನ ಬಂದ್ರೆ ಮಾತ್ರ ಯಡಿಯೂರಪ್ಪ ಸರ್ಕಾರ ಉಳಿಯೋದು. ಆದ್ರೆ ಕಾಂಗ್ರೆಸ್ 13 ಸ್ಥಾನ ಗೆಲ್ಲುತ್ತೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಯುತ್ತಾರೆ. ಯಡಿಯೂರಪ್ಪ ಸರ್ಕಾರ ಇದ್ದರೆ ತಾನೆ.. ಭೈರತಿ ಬಸವರಾಜ್ ಗೆದ್ದರೆ ತಾನೆ.. ಸಚಿವರಾಗೋದು‌!

ಕಾಂಗ್ರೆಸ್ಸಿಗೆ ಮೋಸ ಮಾಡಿದವರಿಗೆ ಜನ ಪಾಠ ಕಲಿಸ್ತಾರೆ..
ಕಾಂಗ್ರೆಸ್ ಪರ ಜನರಿಗೆ ಒಲವಿದೆ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ. ಕಾಂಗ್ರೆಸ್ ಗೆ ಮೋಸ ಮಾಡಿದವರಿಗೆ ಜನ ಸರಿಯಾಗಿ ಪಾಠ ಕಲಿಸ್ತಾರೆ ಎಂದು ವೀರಪ್ಪ ಮೊಯ್ಲಿ ಹೇಳಿದರು. ಕಾಂಗ್ರೆಸ್ ನ 35 ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ‌. ಮನಸ್ಸು ಮಾಡಿದ್ರೆ ಕಾಂಗ್ರೆಸ್ ಖಾಲಿ ಮಾಡ್ತೀನಿ ಎಂಬ ರಮೇಶ್ ಜಾರಕಿಹೋಳಿ ಹೇಳಿಕೆ ವಿಚಾರವಾಗಿ ವೀರಪ್ಪ ಮೊಯ್ಲಿ ಪ್ರತಿಕ್ರಿಯೆ ನೀಡಿದರು.

ರಮೇಶ್ ಜಾರಕಿಹೋಳಿ ಎಲ್ಲಿದ್ದರು? ಅವ್ರ ಪೂರ್ವಿಕರು ಜೈಲಿನಲ್ಲಿ ಇದ್ದವರು. ರಮೇಶ್ ಜಾರಕಿಹೋಳಿ ಅಂತಹ ಮುಖಂಡನೇನೂ ಅಲ್ಲ. ಒಳ್ಳೆ ಚಾರಿತ್ರ್ಯವನ್ನು ಅವ್ರು ಹೊಂದಿಲ್ಲ. ಅವ್ರು ರಾಜಕೀಯಕ್ಕೆ ಬಂದಿದ್ದೇ ಇತ್ತೀಚೆಗೆ. ಅವ್ರು ಕಾಂಗ್ರೆಸ್​ನಲ್ಲಿ ಪ್ರಾಮಾಣಿಕವಾಗಿ ಕೆಲಸವೇ ಮಾಡಿಲ್ಲ. ಯಾವ 35 ಜನರೂ ಹೋಗೊಲ್ಲ. ಮೊನ್ನೆ ಹರಸಾಹಸ ಮಾಡಿದಾಗಲೇ ಹೋಗಬೇಕಿತ್ತು. ಆಗ ಯಾಕೆ ಹೋಗಿಲ್ಲ? ಬಿಜೆಪಿಯಲ್ಲಿ ಇರೋರೆ ಪಕ್ಷ ಬಿಟ್ಟು ತೊಲಗುತ್ತಾರೆ ಎಂದು ಮೊಯ್ಲಿ ಮಾರ್ಮಿಕವಾಗಿ ಹೇಳಿದರು.

Published On - 2:16 pm, Mon, 25 November 19