RCBಗೆ ಬೆಂಬಲಿಸಿ ನ್ಯಾಷನಲ್ ಕ್ರಷ್ ಆಗಿದ್ದ ದೀಪಿಕಾ ಘೋಷ್, ಈ ಬಾರಿ ತಂಡವನ್ನು ಹೇಗೆ ಸಪೋರ್ಟ್ ಮಾಡ್ತಾರೆ ಗೊತ್ತಾ?

|

Updated on: Sep 21, 2020 | 9:00 AM

ಈ ಚೆಲುವೆಯನ್ನ ನೋಡಿದ್ರೆ ಯಾರು ಅನ್ನೋದು ನಿಮಗೆ ಗೊತ್ತೆ ಇರುತ್ತೆ.. ಕೆಂಪು ಬಣ್ಣದ ಡ್ರೆಸ್ ಧರಿಸಿ, ಆರ್​ಸಿಬಿ ಬಾವುಟ ಹಿಡಿದು ಮುದ್ದು ಮುದ್ದಾದ ಸ್ಮೈಲ್ ಕೊಡ್ತಿರೋ ಈ ಚೆಂದುಳ್ಳಿ ಚೆಲುವೆ, ಕಳೆದ ವರ್ಷ ರಾತ್ರೋರಾತ್ರಿ ನ್ಯಾಷನಲ್ ಕ್ರಷ್ ಆಗಿದ್ಳು. ಕಳೆದ ವರ್ಷ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸನ್​ರೈಸರ್ಸ್ ಹಾಗೂ ಆರ್​ಸಿಬಿ ಪಂದ್ಯದ ವೇಳೆ, ದೀಪಿಕಾ ಘೋಷ್ ಅನ್ನೋ ಮೋಹಾನಂಗಿ ಕಾಣಿಸಿಕೊಂಡಿದ್ಳು.. ಆ ಪಂದ್ಯದಲ್ಲಿ ಶಿಮ್ರಾನ್ ಹೆಟ್ಮೆರ್ ಹಾಗೂ ಗುರುಕೀರತ್ ಸಿಂಗ್, ಬೌಂಡರಿ ಸಿಕ್ಸರ್ ಬಾರಿಸ್ತಿದ್ದಂತೆ ದೀಪಿಕಾ ಘೋಷ್, […]

RCBಗೆ ಬೆಂಬಲಿಸಿ ನ್ಯಾಷನಲ್ ಕ್ರಷ್ ಆಗಿದ್ದ ದೀಪಿಕಾ ಘೋಷ್, ಈ ಬಾರಿ ತಂಡವನ್ನು ಹೇಗೆ ಸಪೋರ್ಟ್ ಮಾಡ್ತಾರೆ ಗೊತ್ತಾ?
Follow us on

ಈ ಚೆಲುವೆಯನ್ನ ನೋಡಿದ್ರೆ ಯಾರು ಅನ್ನೋದು ನಿಮಗೆ ಗೊತ್ತೆ ಇರುತ್ತೆ.. ಕೆಂಪು ಬಣ್ಣದ ಡ್ರೆಸ್ ಧರಿಸಿ, ಆರ್​ಸಿಬಿ ಬಾವುಟ ಹಿಡಿದು ಮುದ್ದು ಮುದ್ದಾದ ಸ್ಮೈಲ್ ಕೊಡ್ತಿರೋ ಈ ಚೆಂದುಳ್ಳಿ ಚೆಲುವೆ, ಕಳೆದ ವರ್ಷ ರಾತ್ರೋರಾತ್ರಿ ನ್ಯಾಷನಲ್ ಕ್ರಷ್ ಆಗಿದ್ಳು.

ಕಳೆದ ವರ್ಷ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸನ್​ರೈಸರ್ಸ್ ಹಾಗೂ ಆರ್​ಸಿಬಿ ಪಂದ್ಯದ ವೇಳೆ, ದೀಪಿಕಾ ಘೋಷ್ ಅನ್ನೋ ಮೋಹಾನಂಗಿ ಕಾಣಿಸಿಕೊಂಡಿದ್ಳು.. ಆ ಪಂದ್ಯದಲ್ಲಿ ಶಿಮ್ರಾನ್ ಹೆಟ್ಮೆರ್ ಹಾಗೂ ಗುರುಕೀರತ್ ಸಿಂಗ್, ಬೌಂಡರಿ ಸಿಕ್ಸರ್ ಬಾರಿಸ್ತಿದ್ದಂತೆ ದೀಪಿಕಾ ಘೋಷ್, ಆರ್​ಸಿಬಿ ಬಾವುಟ ಹಿಡಿದು ಗ್ಯಾಲರಿಯಲ್ಲಿ ಕುಣಿಯುತ್ತಾ ಸಂಭ್ರಮಿಸುತ್ತಿದ್ಳು.

ಈ ಪಂದ್ಯದಲ್ಲಿ ಆರ್​ಸಿಬಿ ಗೆಲ್ತು ಅನ್ನೋದಕ್ಕಿಂತ ಹೆಚ್ಚಾಗಿ, ಈ ವೈಯಾರಿಯೇ ಹೆಚ್ಚು ವೈರಲ್ ಆಗಿದ್ಳು.. ಈ ಸುಂದರಿ ಟಿವಿಯಲ್ಲಿ ಕಾಣ್ತಿದ್ದಂತೆ ಕ್ಲೀನ್ ಬೋಲ್ಡ್ ಆಗಿದ್ದ ಅದೆಷ್ಟೋ ಪಡ್ಡೆಹೈಕ್ಳು, ಸೋಶಿಯಲ್ ಮೀಡಿಯಾದಲ್ಲಿ ಈಕೆಯನ್ನ ಹುಡುಕೋದಕ್ಕೆ ಶುರುಮಾಡಿದ್ರು.

ಆರ್​ಸಿಬಿಗೆ ಚಿಯರ್ ಅಪ್ ಮಾಡಿದ ದೀಪಿಕಾ!
ಆರ್​ಸಿಬಿಯ ಪಕ್ಕಾ ಅಭಿಮಾನಿಯಾಗಿರೋ ದೀಪಿಕಾ ಘೋಷ್, ಈ ಭಾರಿ ಕೊಹ್ಲಿ ಪಡೆ ಗೆಲ್ಲಲಿ ಅಂತ ಚಿಯರ್​ಅಪ್ ಮಾಡಿದ್ದಾಳೆ. ಕಳೆದ ವರ್ಷ ಸ್ಟೇಡಿಯಂನಲ್ಲಿ ಹಾಕಿದ್ದ ಕೆಂಪು ಬಣ್ಣದ ತುಂಡುಡಿಗೆ ಹಾಕಿಕೊಂಡು ಕೆನ್ನೆಗೆ ಆರ್​ಸಿಬಿ ಬರೆದುಕೊಂಡು, ಭರ್ಜರಿ ಸ್ಟೆಪ್ಸ್ ಹಾಕೋದ್ರೊಂದಿಗೆ ದೀಪಿಕಾ, ಆರ್​ಸಿಬಿ ತಂಡಕ್ಕೆ ಚಿಯರ್ ಅಪ್ ಮಾಡಿದ್ದಾಳೆ.

ಆರ್​ಸಿಬಿ ಮಿಸ್ ಮಾಡಿಕೊಳ್ತಿದ್ದೇನೆ.
‘‘ಆರ್​ಸಿಬಿ ತಂಡಕ್ಕೆ ಚಿಯರ್​ಅಪ್ ಮಾಡೋದನ್ನ ಈ ವರ್ಷ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಐಪಿಎಲ್ ಮತ್ತೆ ಬಂದಿದ್ದು, ತುಂಬಾ ಉತ್ಸುಕಳಾಗಿದ್ದೇನೆ. ಎಲ್ಲಾ ಅಭಿಮಾನಿಗಳು ಚಿಯರ್​ಅಪ್ ಮಾಡಲು ವಿನಂತಿಸುತ್ತೇನೆ. ಮನೆಯಲ್ಲೇ ಇದ್ದು ಆರ್​ಸಿಬಿಗೆ ಬೆಂಬಲಿಸಿ.”
-ದೀಪಿಕಾ ಘೋಷ್, ಆರ್​ಸಿಬಿ ಅಭಿಮಾನಿ

ಇನ್ನೂ ಕಳೆದ ವರ್ಷ ನ್ಯಾಷನಲ್ ಕ್ರಷ್ ಆಗಿದ್ದ ದೀಪಿಕಾ, ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದಾಳೆ. ಆದ್ರೆ, ದೀಪಿಕಾ ಸೋಶಿಯಲ್ ಲೈಫ್ ಬಗ್ಗೆ ನಾನು ಯೋಚನೆ ಮಾಡಲ್ಲ ಅಂತಿದ್ದಾರೆ. ಇನ್​ಸ್ಟಾಗ್ರಾಂ ಮತ್ತು ಸೋಶಿಯಲ್ ಮೀಡಿಯಾ ನಿಜವಾದ ಜೀವನ ಅಲ್ಲ. ಉಳಿದಂತೆ ಎಲ್ಲವೂ ಸುಂದರವಾಗಿದ್ದು, ನಾನು ಮೊದಲಿನಂತೆ ಇದ್ದೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಒಟ್ನಲ್ಲಿ ಕಳೆದ ಸೀಸನ್​ನಲ್ಲಿ ಆರ್​ಸಿಬಿಗೆ ಬೆಂಬಲ ನೀಡಿ ನ್ಯಾಷನಲ್ ಕ್ರಷ್ ಆಗಿದ್ದ ದೀಪಿಕಾ, ಈ ಬಾರಿ ಕೊರೊನಾದಿಂದಾಗಿ ಮನೆಯಲ್ಲೇ ಆರ್​ಸಿಬಿ ಮೇಲಿನ ಅಭಿಮಾನವನ್ನ ಮೆರೆದಿದ್ದಾಳೆ.

Published On - 8:59 am, Mon, 21 September 20