
ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಶುಕ್ರವಾರದಂದು ಎಲಿಮಿನೇಟರ್ ಪಂದ್ಯದ ನಂತರ ಟೀಮಿನ ಡಗ್ ಔಟ್ನಲ್ಲಿ ಉಳಿದ ಆಟಗಾರರಿಗಿಂತ ದೂರದಲ್ಲಿ ಕೂತಿದ್ದ ವಿರಾಟ್ ಕೊಹ್ಲಿ ಮುಖದ ಮೇಲಿನ ಪ್ರೇತಕಳೆ ಮಿಕ್ಕಿದೆಲ್ಲವನ್ನು ವ್ಯಾಖ್ಯಾನಿಸುವಂತಿತ್ತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಮತ್ತೊಂದು ನಿರಾಶಾದಾಯಕ ಅಭಿಯಾನ ಮುಗಿಸಿದೆ. ಅತ್ಯಂತ ಪ್ರಯಾಸದಿಂದ ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಳಿಸಿ ಎಲಿಮಿನೇಟರ್ ಸುತ್ತಿನ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಟೀಮಿನ ವಿರುದ್ಧ ಸೋಲುವುದರೊಂದಿಗೆ ಕೊಹ್ಲಿಯ ತಂಡ ಈ ಸಲವೂ ತನ್ನ ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ. 13ನೇ ಅವೃತ್ತಿ ಶುರುವಾಗುವ ಮೊದಲೇ ‘ಈ ಸಲ ಕಪ್ ನಮ್ದೇ’ ಅಂತಿದ್ದ ಆರ್ಸಿಬಿಯ ಕಟ್ಟಾ ಅಭಿಮಾನಿಗಳು ಯಾಕಾದರೂ ನಾವು ಈ ಟೀಮನ್ನು ಇಷ್ಟೊಂದು ಪ್ರೀತಿಸುತ್ತೇವೆ, ಇಷ್ಟಪಡುತ್ತೇವೆ ಅಂತ ವ್ಯಥೆಪಡುತ್ತಿದ್ದಾರೆ.
ಅಭಿಮಾನಿಗಳಿಗೆ ಪ್ರತಿಸಲ ನಿರಾಶೆ ಕಟ್ಟಿಟ್ಟ ಬುತ್ತಿಯಂತಾಗಿಬಿಟ್ಟಿದೆ. ಆದರೂ ಅವರು ಹಿಂದಿನ ಸೀಸನ್ಗಳ ಕಹಿಗಳನ್ನೆಲ್ಲ ಮರೆತು ಮತ್ತೊಂದು ಸೀಸನ್ಗಾಗಿ ಕಾಯಲಾರಂಭಿಸುತ್ತಾರೆ. ಕಳೆದ 13 ವರ್ಷಗಳಿಂದ ಇದೇ ನಡೆದುಕೊಂಡು ಬಂದಿದೆ.
ಈ ಕ್ರೀಡೆಯೇ ಹಾಗೆ, ಅಮೋಘ ಅನಿಶ್ಚಿತತೆಗಳ ಆಟ. ಆದರೆ ಟೀಮಿನ ಅಥವಾ ನಾಯಕ ಕೊಹ್ಲಿಯ ಸ್ವಯಂಕೃತಾಪರಾಧಗಳನ್ನು ಕಡೆಗಣಿಸುವಂತಿಲ್ಲ. ಟೀಮಿನ ಕಾಂಪೊಸಿಷನ್ ಬಗ್ಗೆ ಹಲವಾರು ಮಾತುಗಳು ಕೇಳಿಬರುತ್ತಿವೆ. ಕ್ರಿಸ್ ಗೇಲ್ ಸ್ಥಾನಕ್ಕೆ ಆರ್ಸಿಬಿಯ ಧಣಿಗಳು ಖರೀದಿಸಿದ್ದು ಆಸ್ಟ್ರೇಲಿಯಾದ ಆರನ್ ಫಿಂಚ್ರನ್ನು. ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ತನ್ನ ದೇಶದ ನಾಯಕನಾಗಿರುವ ಫಿಂಚ್ ನಿಸ್ಸಂದೇಹವಾಗಿ ವಿಸ್ಫೋಟಕ ಬ್ಯಾಟ್ಸ್ಮನ್. ಟಿ20 ಅಂತರರಾಷ್ಸ್ರೀಯ ಪಂದ್ಯಗಳಲ್ಲಿ ಅವರ ಸ್ಟ್ರೈಕ್ರೇಟ್ 155 ರಷ್ಟಿದೆ ಮತ್ತು ಸರಾಸರಿ 38.44 ಇದೆ. ಆದರೆ ಐಪಿಎಲ್ 2020ನಲ್ಲಿ 12 ಪಂದ್ಯಗಳಾಡಿದ ಫಿಂಚ್, ಕೇವಲ 22.33 ಸರಾಸರಿಯಲ್ಲಿ 268 ರನ್ ಗಳಿಸಿದರು, ಇಲ್ಲಿ ಅವರ ಸ್ಟ್ರೈಕ್ರೇಟ್ ಕೇವಲ 111 ರಷ್ಟಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಅವರನ್ನು ಆಡಿಸಿದ್ದು ಸರಿಯರಬಹುದು ಯಾಕೆಂದರೆ, ಜೊಷುವಾ ಫಿಲಿಪ್ ಪದೇಪದೆ ವಿಫಲರಾಗುತ್ತಿದ್ದರಿಂದ ಕೊಹ್ಲಿ ಮತ್ತು ಇತರ ಮಧ್ಯಮ ಕ್ರಮಾಂಕದ ಆಟಗಾರರ ಮೇಲೆ ಒತ್ತಡ ಹೆಚ್ಚಾಗಿತ್ತು. ಆದರೆ, ಫಿಂಚ್ ಓಪನಿಂಗ್ ಬ್ಯಾಟ್ಸ್ಮನ್ ಆಗಿರುವುದರಿಂದ ಅವರ ಸ್ಥಾನದಲ್ಲಿ ತಾನು ಇನ್ನಿಂಗ್ಸ್ ಆರಂಭಿಸಿ ಕೊಹ್ಲಿ ಟ್ಯಾಕ್ಟಿಕಲ್ ಪ್ರಮಾದವೆಸಗಿದರು. ಪಂದ್ಯ ಮುಗಿದ ನಂತರ ಮಿಡ್ಲ್ ಆರ್ಡರ್ ಮೇಲಿನ ಒತ್ತಡ ಕಡಿಮೆ ಮಾಡಲು ಹಾಗೆ ಮಾಡಿದೆ ಅಂತ ಕೊಹ್ಲಿ ಹೇಳಿದರು. ಅವರ ವಾದ ಆರ್ಸಿಬಿಯ ಅಭಿಮಾನಿಗಳಿಗೆ ಅರ್ಥವಾಗಲೇ ಇಲ್ಲ. ವಾಸ್ತವದಲ್ಲಿ, ಫಿಂಚ್ ಆರಂಭಿಕನಾಗಿ ಮತ್ತು ತಾನು ಎಂದಿನ 3ನೇ ಸ್ಥಾನದಲ್ಲಿ ಆಡಿದ್ದರೆ ಮಧ್ಯಮ ಕ್ರಮಾಂಕಕ್ಕೆ ಧೃಡತೆ ಸಿಗುತಿತ್ತು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಫಿಂಚ್ರನ್ನು ಕೆಲ ಪಂದ್ಯಗಳ ನಂತರ ವಾಪಸ್ಸು ತರಲಾಗಿತ್ತು. ನೆಟ್ಸ್ನಲ್ಲಿ ಕಾಣುವ ಸ್ಪರ್ಶ ಮ್ಯಾಚ್ ಸಿಚುಯೇಷನ್ನಲ್ಲಿ ಕಾಣದಂತಾಗುವ ಅನೇಕ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಫಿಂಚ್ ವಿಷಯದಲ್ಲೂ ಅದೇ ಆಗಿದ್ದು.
ಮೊಯಿನ್ ಅಲಿ ಅವರನ್ನು
ಪ್ರತಿಸಲದಂತೆ ಈ ಬಾರಿಯೂ, ಟೀಮಿನ ಬ್ಯಾಟಿಂಗ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಅವರನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿದ್ದು ಮುಳುವಾಯಿತು. ಅವರಿಬ್ಬರು ಮತ್ತು ಟಾಪ್ ಆರ್ಡರ್ನಲ್ಲಿ ದೇವದತ್ ಪಡಿಕ್ಕಲ್ ಫೇಲಾದರೆ ಟೀಮಿನ ಕತೆ ಮುಗಿದಂತೆಯೇ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಮೊದಲ ಮೂರು ಇನ್ನಿಂಗ್ಸ್ಗಳಲ್ಲಿ 14, 1, 3 ರನ್ ಗಳಿಸಿ ನಂತರದ 4 ಪಂದ್ಯಗಳಲ್ಲಿ 9, 7, 29 ಮತ್ತು 6 ರನ್ ಗಳಿಸಿದ ಕೊಹ್ಲಿ ಲೀಗ್ನ ಮಧ್ಯಮ ಹಂತದ ಪಂದ್ಯಗಲ್ಲಿ ಮಾತ್ರ ಚೆನ್ನಾಗಿ ಆಡಿದರು. ಎಬಿಡಿ ಸಹ ಕೆಲವು ಪಂದ್ಯಗಳಲ್ಲಿ ಮಾತ್ರ ತಮ್ಮ ಖ್ಯಾತಿಗೆ ತಕ್ಕ ಆಟವಾಡಿದರು.
ಗುರ್ಕೀರತ್, ಮತ್ತು ಆಲ್ರೌಂಡರ್ಗಳಾದ, ಶಿವಮ್ ದುಬೆ ಹಾಗೂ ವಾಷಿಂಗ್ಟನ್ ಸುಂದರ್ ಅವರ ಬ್ಯಾಟ್ಗಳಿಂದ ರನ್ಗಳೇ ಬರಲಿಲ್ಲ. ಈ ಟೀಮಿಗೆ ಮಧ್ಯಮ ಕ್ರಮಾಂಕದಲ್ಲಿ ಪಂದ್ಯ ಗೆದ್ದುಕೊಡಬಲ್ಲ ಬ್ಯಾಟ್ಸ್ಮನ್ಗಳು ಬೇಕಾಗಿದ್ದಾರೆ. ಌಡಂ ಜಂಪಾ ಅವರನ್ನು ಇನ್ನಷ್ಟು ಪಂದ್ಯಗಳಲ್ಲಿ ಆಡಿಸಿದರೆ ಚೆನ್ನಾಗಿರುತ್ತಿತ್ತು. ಶುಕ್ರವಾರ ಅವರು ಹೈದರಾಬಾ
ಯುಜ್ವೇಂದ್ರ ಚಹಲ್, ಸುಂದರ್, ನವದೀಪ್ ಸೈನಿ ತಮ್ಮ ಕರ್ತವ್ಯಗಳನ್ನು ಸೂಕ್ತವಾಗಿ ನಿಭಾಯಿಸಿದರೆ, ಡೇಲ್ ಸ್ಟೀನ್ ಮತ್ತು ಉಮೇಶ್ ಯಾದವ್ ಟೀಮಿಗೆ ಹೊರೆಯೆನಿಸಿದರು. ಶಹಾಬಾಜ್ ಅಹ್ಮದ್ಗೆ ಜಾಸ್ತಿ ಅವಕಾಶಗಳು ಸಿಗಲಿಲ್ಲ. ಇಸುರು ಉದಾನಾ ತಕ್ಕಮಟ್ಟಿನ ಪ್ರದರ್ಶನಗಳನ್ನು ನೀಡಿದರು.
ಮೊದಲ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದರೂ ನಂತರದ 4 ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಸೋತ ಆರ್ಸಿಬಿ ಪಡಿಕ್ಕಲ್ ಮತ್ತು ಸ್ಪಿನ್ನರ್ಗಳ ಯಶಸ್ಸಿನ ಹೊರತಾಗಿ ಮತ್ತೇನನ್ನು ಸಾಧಿಸದೆ ಈ ಸಲದ ಕ್ಯಾಂಪೇನ್ ಮುಗಿಸಿದೆ. ಅದರ ಅಭಿಮಾನಿ ಕೆಲ ದಿನಗಳ ನಂತರ ಮತ್ತೊಂದು ಸೀಸನ್ಗಾಗಿ ಎದುರು ನೋಡಲಾರಂಭಿಸುತ್ತಾನೆ. ಅವನಿಗೆ ಬೇರೆ ವಿಧಿಯೇ ಇಲ್ಲ.