ಮಂಗಳೂರು: ಕೆಲ ಘಟನೆ ಹಾಗೂ ಘಳಿಗೆ ಕೆಟ್ಟದ್ದಾಗಿರುತ್ತೇ ವಿನಃ ಯಾರೂ ಮೂಲತಃ ಕೆಟ್ಟವರಿರೋಲ್ಲ ಅನ್ನೋ ಮಾತಿದೆ. ಇದು ಮಂಗಳೂರಿನಲ್ಲಿ ನಡೆದ ಘಟನೆ ನೋಡಿದ್ರೆ ನಿಜ ಅನಿಸುತ್ತೆ. ಯಾಕಂದ್ರೆ ಯಾರಾದರೂ ಸತ್ತರೆ ದಾರಿಯಲ್ಲಿ ಹೋಗುವವರು ಕೂಡಾ ಕೆಲವೊಮ್ಮೆ ಶವ ಸಾಗಿಸಲು ಹೆಗಲು ಕೊಡುತ್ತಾರೆ. ಆದ್ರೆ ಈಗ ಸತ್ತವ್ಯಕ್ತಿಯ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತವಾಗ್ತಿದೆ. ಇದಕ್ಕೆ ಕಾರಣ ಕೊರೊನಾ.
ಹೌದು, ಕೊರೊನಾ ಸೋಂಕಿನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಸುರತ್ಕಲ್ ಬಳಿಯ ಇಡ್ಯಾ ಗ್ರಾಮದ 31 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆದ್ರೆ ಆತನ ಗ್ರಾಮ ಇಡ್ಯಾದ ಮಸೀದಿ ಕಬರ್ ಗುಂಡಿಯಲ್ಲಿ ಮಳೆಯಿಂದಾಗಿ ನೀರು ತುಂಬಿಕೊಂಡಿದೆ. ಹೀಗಾಗಿ ಬೋಳಾರ ಬಳಿಯ ಮಸೀದಿ ಹತ್ತಿರ ಅಂತ್ಯಸಂಸ್ಕಾರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದ್ರೆ ಇದಕ್ಕೆ ಬೋಳಾರ ಮಸೀದಿ ಬಳಿಯ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮೃತನ ಅಂತ್ಯಕ್ರಿಯೆಯನ್ನು ತಮ್ಮ ಪ್ರದೇಶದಲ್ಲಿ ಬೇಡ, ಬದಲು ಆತನ ಊರಾದ ಸುರತ್ಕಲ್ ಬಳಿಯ ಮಸೀದಿಯಲ್ಲೇ ದಫನ್ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಪರಿಣಾಮ ಬೇರೆಲ್ಲೂ ಜಾಗ ಇಲ್ಲ, ಹೀಗಾಗಿ ಕಳೆದ 3 ಗಂಟೆಯಿಂದ ಸ್ಥಳೀಯರ ಮನವೊಲಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯರ ವಿರೋಧ ಮತ್ತು ಅಂತ್ಯಕ್ರಿಯೆಯಲ್ಲಿನ ವಿಳಂಬದಿಂದಾಗಿ ಕಳೆದ 12 ಗಂಟೆಗಳಿಂದ ಮೃತನ ಶವ ಆ್ಯಂಬುಲೆನ್ಸ್‌ನಲ್ಲಿಯೇ ಇದೆ.
Published On - 4:28 pm, Sun, 28 June 20